200ಕ್ಕೂ ಹೆಚ್ಚು ಮಂದಿಗೆ ತಪಾಸಣೆ, ಈ ಪೈಕಿ ಇಂದು 50 ಮಂದಿಗೆ ಶಸ್ತ್ರಚಿಕಿತ್ಸೆ
ಮೈಸೂರು, ಮಾ.2(ಪಿಎಂ)- ಮೈಸೂರು ರೇಸ್ ಕ್ಲಬ್ ಚಾರಿಟಬಲ್ ಟ್ರಸ್ಟ್ ಕಣ್ಣಿನ ಆಸ್ಪತ್ರೆ ವತಿಯಿಂದ ಟರ್ಫ್ ಅಥಾರಿಟಿಸ್ ಆಫ್ ಇಂಡಿಯಾ ಪ್ರಾಯೋಜಕತ್ವದಲ್ಲಿ ಸೋಮವಾರ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಬೃಹತ್ ಉಚಿತ ಕಣ್ಣಿನ ಪೊರೆ ತಪಾಸಣೆ ಶಿಬಿರದಲ್ಲಿ 200ಕ್ಕೂ ಹೆಚ್ಚು ಮಂದಿ ತಪಾ ಸಣೆಗೆ ಒಳಗಾಗಿ ಪ್ರಯೋಜನ ಪಡೆದು ಕೊಂಡಿದ್ದು, ಈ ಪೈಕಿ 50 ಮಂದಿಗೆ ನಾಳೆ (ಮಂಗಳವಾರ) ಶಸ್ತ್ರಚಿಕಿತ್ಸೆಯೂ ಉಚಿತವಾಗಿ ನಡೆಯಲಿದೆ.
ಮೈಸೂರಿನ ಸಿದ್ಧಾರ್ಥನಗರದಲ್ಲಿರುವ ಆಸ್ಪತ್ರೆಯಲ್ಲಿ ಏರ್ಪಡಿಸಿದ್ದ ಕಣ್ಣಿನ ಉಚಿತ ತಪಾಸಣೆ ಶಿಬಿರದಲ್ಲಿ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ, ಔಷಧಿ ಹಾಗೂ ಸಲಹೆಗಳನ್ನು ನೀಡಲಾಯಿತು. ಅಲ್ಲದೆ, ಈ ಪೈಕಿ 50 ಮಂದಿಗೆ ಶಸ್ತ್ರಚಿಕಿತ್ಸೆಯ ಅಗತ್ಯತೆ ಕಂಡುಬಂದಿದ್ದು, ಇವರಿಗೆ ನಾಳೆ (ಮಾ.3) ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ. ಆಸ್ಪತ್ರೆಯಲ್ಲಿರುವ 4 ಶಸ್ತ್ರಚಿಕಿತ್ಸಾ ಕೊಠಡಿಗಳಲ್ಲಿ ಎಲ್ಲಾ 50 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಿ, ಉಚಿತ ಔಷಧ ನೀಡಲಾಗುತ್ತದೆ.
ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರಾದ ಡಾ.ಎಂ.ಎಸ್. ಉಷಾ ಹಾಗೂ ಡಾ.ಎಂ. ಬೃಂದಾ ಪ್ರಸಾದ್ ನೇತೃತ್ವದಲ್ಲಿ ತಪಾಸಣೆ ನಡೆಸಲಾಯಿತು. ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶ ಮಾತ್ರವಲ್ಲದೆ, ವಿವಿಧ ಭಾಗಗಳಿಂದ ಕಣ್ಣಿನ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಶಿಬಿರದ ಪ್ರಯೋಜನ ಪಡೆದುಕೊಂಡರು. ಬೆಳಿಗ್ಗೆ 9.30ರಿಂದ ಮಧ್ಯಾಹ್ನ 12.30ರವರೆಗೆ ತಪಾಸಣೆ ನಡೆಸಲಾಯಿತು.
ಆಸ್ಪತ್ರೆಯ ಆಡಳಿತಾಧಿಕಾರಿ ಅನಿತಾ ಅರಸ್ ಮಾತನಾಡಿ, ತಪಾಸಣೆಯಲ್ಲಿ ಶಸ್ತ್ರಚಿಕಿತ್ಸೆ ಅಗತ್ಯತೆ ಕಂಡುಬಂದವರನ್ನು ಇಂದು ಆಸ್ಪತ್ರೆಗೆ ದಾಖಲಿಸಿಕೊಳ್ಳಲಾಗಿದೆ. ನಾಳೆ ಶಸ್ತ್ರಚಿಕಿತ್ಸೆ ನಡೆಸಿ ಅಗತ್ಯ ಔಷಧೋ ಪಚಾರಗಳನ್ನು ನೀಡಿ ನಾಳಿದ್ದು ಮನೆಗೆ ಕಳುಹಿಸಿಕೊಡಲಾಗುವುದು. ದಾಖಲಾ ಗುವ ರೋಗಿಗಳಿಗೆ ತಿಂಡಿ-ಊಟ ಉಚಿತ ವಾಗಿ ನೀಡಲಾಗುವುದು ಎಂದು ತಿಳಿಸಿದರು.
ಉದ್ಘಾಟನೆ: ಇಂದು ಬೆಳಿಗ್ಗೆ ಏರ್ಪಡಿ ಸಿದ್ದ ಶಿಬಿರದ ಉದ್ಘಾಟನಾ ಸಮಾರಂಭ ವನ್ನು ರಾಯಲ್ ಕಲ್ಕತ್ತಾ ಟರ್ಫ್ ಕ್ಲಬ್‍ನ ಅಧ್ಯಕ್ಷ ಸುದೀಪ್ತೊ ಸರ್ಕಾರ್, ರಾಯಲ್ ವೆಸ್ಟರ್ನ್ ಇಂಡಿಯಾ ಟರ್ಫ್ ಕ್ಲಬ್‍ನ ಅಧ್ಯಕ್ಷ ಜಡ್.ಎಸ್.ಪೂನವಲ್ಲಾ, ಮದ್ರಾಸ್ ರೇಸ್ ಕ್ಲಬ್‍ನ ಅಧ್ಯಕ್ಷ ಎಂ.ಎ.ಎಂ.ಆರ್. ಮುತ್ತಯ್ಯ, ಬೆಂಗಳೂರು ಟರ್ಫ್ ಕ್ಲಬ್‍ನ ಅಧ್ಯಕ್ಷ ಡಿ.ವಿನೋದ್ ಶಿವಪ್ಪ, ಡೆಲ್ಲಿ ರೇಸ್ ಕ್ಲಬ್(1940) ಅಧ್ಯಕ್ಷ ಜೆ.ಎಸ್.ಬೇಡಿ ಜಂಟಿ ಯಾಗಿ ಉದ್ಘಾಟಿಸಿದರು. ಎಂಆರ್‍ಸಿ ಚಾರಿ ಟಬಲ್ ಟ್ರಸ್ಟ್, ಟರ್ಫ್ ಅಥಾರಿಟಿಸ್ ಆಫ್ ಇಂಡಿಯಾ ಅಧ್ಯಕ್ಷ ಡಾ.ಎನ್. ನಿತ್ಯಾ ನಂದ ರಾವ್, ಎಂಆರ್‍ಸಿ ಕಣ್ಣಿನ ಆಸ್ಪತ್ರೆ ಸಮಿತಿಯ ಅಧ್ಯಕ್ಷ ಡಾ.ಸಿ.ಡಿ.ಶ್ರೀನಿವಾಸ ಮೂರ್ತಿ ಮತ್ತಿತರರು ಹಾಜರಿದ್ದರು.