ಮೈಸೂರಲ್ಲಿ ಅಕಾಲಿಕ ಬೇಸಿಗೆ ಮಳೆ: ಜನರಲ್ಲಿ ಅಚ್ಚರಿ
ಮೈಸೂರು

ಮೈಸೂರಲ್ಲಿ ಅಕಾಲಿಕ ಬೇಸಿಗೆ ಮಳೆ: ಜನರಲ್ಲಿ ಅಚ್ಚರಿ

March 3, 2020

ಹಲವು ವರ್ಷಗಳ ಬಳಿಕ ಮಾರ್ಚ್ ಆರಂಭದಲ್ಲಿ 22.5 ಎಂಎಂ ದಾಖಲೆ ಮಳೆ

ಇನ್ನು ಎರಡು ದಿನ ಮಳೆ ಸುರಿಯುವ ಮುನ್ಸೂಚನೆ

ಮೈಸೂರು,ಮಾ.2(ಎಂಟಿವೈ)- ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಸಾಂಸ್ಕøತಿಕ ನಗರಿ ಮೈಸೂರಿನ ಜನತೆಗೆ ಇಂದು ಮುಂಜಾನೆ ಯಿಂದ ಸುರಿದ ಅಕಾಲಿಕ `ಬೇಸಿಗೆ ಮಳೆ’ಗೆ ವಾತಾವರಣ ತಂಪಾಗಿದೆ.

ಬೇಸಿಗೆ ಆರಂಭದ ಮೊದಲ ವಾರ ಈ ಅನಿರೀಕ್ಷಿತ ಮಳೆ ಜನರನ್ನು ಆಶ್ಚರ್ಯ ಚಕಿತಗೊಳಿಸಿದೆ. ಸೋಮವಾರ ಮುಂಜಾನೆ 2.10ರಿಂದ ಆರಂಭವಾದ ಮಳೆ 5 ಗಂಟೆ ವರೆಗೂ ಎಡಬಿಡದೆ ಸುರಿಯಿತು. ನಂತರ ಕೆಲಕಾಲ ಬಿಡುವು ನೀಡಿ, ಮತ್ತೆ ಸುರಿಯಿತು.

ಬೆಳಿಗ್ಗೆ 10 ಗಂಟೆಯಾದರೂ ಮೋಡ ಮುಸುಕಿದ ವಾತಾವರಣವಿತ್ತು. ಮಧ್ಯಾಹ್ನ 12.20ಕ್ಕೆ ಮತ್ತೆ ಆರಂಭವಾದ ತುಂತುರು ಮಳೆ 1.50ರವರೆಗೂ ಸುರಿಯಿತು. ಇದ ರಿಂದ ರಸ್ತೆಗಳಲ್ಲಿ ನೀರು ನಿಂತು, ಅಲ್ಲಲ್ಲಿ ವಾಹನ ಸವಾರರು ಪರದಾಡುವಂತಾ ಗಿತ್ತು. ಮಾರುಕಟ್ಟೆ, ಕಚೇರಿ ಸೇರಿದಂತೆ ವಿವಿಧೆಡೆ ದೈನಂದಿನ ಕೆಲಸಕ್ಕೆ ಹೋಗು ವವರು ಹಾಗೂ ಕಾಲೇಜು ವಿದ್ಯಾರ್ಥಿ ಗಳಿಗೆ ತೊಂದರೆಯೂ ಆಯಿತು. ಆದರೂ 2020ರ ಮೊದಲ ಮಳೆ ನಗರದ ಜನತೆಗೆ ಒಂದು ರೀತಿಯ ಮುದ ನೀಡಿತು.

ದಾಖಲೆ ಮಳೆ: ಬೇಸಿಗೆ ಆರಂಭ (ಮಾರ್ಚ್ ಮೊದಲ ವಾರ)ದಲ್ಲೇ ಹಲವು ವರ್ಷದÀ ನಂತರ ಈ ರೀತಿ ಮಳೆ ಬಂದಿದೆ. 2013-14ನೇ ಸಾಲಿನಲ್ಲಿ ಮಾರ್ಚ್ 10ರ ನಂತರ ಮಳೆ ಬಂದಿತ್ತು. ಆಗ 4 ಎಂಎಂ ನಷ್ಟು ಮಳೆ ದಾಖಲಾಗಿತ್ತು. ಈ ಬಾರಿ ಸುರಿದ ಮೊದಲ ಮಳೆ 22.5 ಎಂಎಂ ಪ್ರಮಾಣದಷ್ಟು ದಾಖಲಾಗಿದೆ.

ಯಾವುದೇ ನಷ್ಟವಿಲ್ಲ: ಸೋಮವಾರ ಸುರಿದ ಮಳೆಯಿಂದ ಯಾವುದೇ ಹಾನಿ ಯಾಗಿಲ್ಲ. ಕೆಲವೆಡೆ ಮರಗಳ ಸಣ್ಣ ರೆಂಬೆ ಗಳು ಮುರಿದು ಬಿದ್ದಿದ್ದವು.

summer rains in Mysore: a surprise to people-1

ಈ ಅಕಾಲಿಕ ಮಳೆಯಿಂದ ಈ ಬಾರಿಯ ಮುಂಗಾರು ಅಥವಾ ಹಿಂಗಾರು ಮೇಲೆ ಯಾವುದೇ ಪ್ರಭಾವವಿಲ್ಲ. ವಾತಾ ವರಣದಲ್ಲಿ ಅತೀ ಉಷ್ಣಾಂಶದಿಂದ ಮಳೆ ಬೀಳುವ ಸಾಧ್ಯತೆ ಇದೆ. ಇದು ಯಾವುದೇ ಮಾರುತದಿಂದ ಉಂಟಾದ ಮಳೆಯಲ್ಲ. ಸಾಮಾನ್ಯವಾಗಿ ಇದನ್ನು ಬೇಸಿಗೆ ಮಳೆ ಎಂದು ಕರೆಯುತ್ತೇವೆ ಎಂದು ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಪ್ರೊ.ಸಿ. ಗೋವಿಂದ ರಾಜು `ಮೈಸೂರು ಮಿತ್ರ’ನಿಗೆ ತಿಳಿಸಿದ್ದಾರೆ.

ಜೂನ್‍ನಲ್ಲಿ ಮುಂಗಾರು ಆರಂಭವಾಗ ಲಿದ್ದು, ಆಗ ಕೃಷಿ ಚಟುವಟಿಕೆ ಆರಂಭ ವಾಗುತ್ತದೆ. ಇಂದು ಸುರಿದ ಮಳೆಯಿಂದ ಬೇಸಿಗೆ ಬೆಳೆ ಬೆಳೆಯಲು ಗದ್ದೆಯಲ್ಲಿ ನಾಟಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿರುವ ರೈತರಿಗೆ ಅನುಕೂಲಕಾರಿ. ಅಲ್ಲದೆ ಖುಷ್ಕಿ ಭೂಮಿಯನ್ನು ಹದ ಮಾಡಲು ನೆರವಾಗು ತ್ತದೆ. ನಿರಂತರ ಮಳೆ ಸುರಿದ ಕಾರಣ ವಾತಾ ವರಣ ತಂಪಾಗಲಿದೆ. ಮಳೆ ನೀರು ಕೊಯ್ಲು ಮಾಡಿರುವ ಸ್ಥಳದಲ್ಲಿ ಹೆಚ್ಚು ಹಿತಕರ ವಾತಾವರಣವಿರುತ್ತದೆ. ಇನ್ನು ಎರಡು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಅವರು ವಿವರಿಸಿದರು.

ಉಳುಮೆಗೆ ಸಿದ್ಧತೆ: ಅಕಾಲಿಕ ಮಳೆ ನಗರ ಮಾತ್ರವಲ್ಲದೆ ಗ್ರಾಮೀಣ ಪ್ರದೇಶ ದಲ್ಲೂ ಸುರಿದಿದೆ. ವರುಣಾ, ಕಸಬಾ, ಜಯಪುರ ಹೋಬಳಿ ಅಲ್ಲದೆ ಬನ್ನೂರು, ನರಸೀಪುರ, ನಂಜನಗೂಡು ಭಾಗದಲ್ಲೂ ಮಳೆಯಾಗಿರುವುದರಿಂದ ರೈತರು ಬುಧ ವಾರದಿಂದ ಭೂಮಿ ಪೂಜೆ ಮಾಡಿ ಉಳುಮೆ ಮಾಡಲು ಸಿದ್ಧತೆ ಮಾಡಿಕೊಳ್ಳು ತ್ತಿದ್ದಾರೆ. ಈಗಾಗಲೇ ಬೆಳೆ ಕಟಾವು ಮಾಡಿ, ಹಾಗೆ ಬಿಟ್ಟಿರುವ ಹೊಲ-ಗದ್ದೆ ಈ ಮಳೆ ಹದ ಮಾಡಿದರೆ, ಜೂನ್‍ನಲ್ಲಿ ಎಣ್ಣೆಕಾಳು, ರಾಗಿ ಬಿತ್ತಲು ಯೋಗ್ಯವಾಗಿರುತ್ತದೆ. ಈ ಹಿನ್ನೆಲೆ ಯಲ್ಲಿ ರೈತರ ಮೊಗದಲ್ಲಿ ಬೇಸಿಗೆ ಮಳೆ ಹರ್ಷ ತಂದಿದೆ.

Translate »