ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ  ಗ್ರಂಥಾಲಯ, ವಸ್ತುಸಂಗ್ರಹಾಲಯ, ದಲಿತ ದಾಖಲೀಕರಣ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ
ಮೈಸೂರು

ಮೈಸೂರು ವಿವಿ ಅಂಬೇಡ್ಕರ್ ಕೇಂದ್ರದ  ಗ್ರಂಥಾಲಯ, ವಸ್ತುಸಂಗ್ರಹಾಲಯ, ದಲಿತ ದಾಖಲೀಕರಣ ಕೇಂದ್ರದ ಕಟ್ಟಡಕ್ಕೆ ಶಿಲಾನ್ಯಾಸ

March 3, 2020

ಗಾಂಧಿ, ಅಂಬೇಡ್ಕರ್ ಇಲ್ಲದ ದೇಶ ಕಟ್ಟಲು ಷಡ್ಯಂತರ : ಶಿಲಾನ್ಯಾಸ ನೆರವೇರಿಸಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಆರೋಪ

ಮೈಸೂರು, ಮಾ.2(ಪಿಎಂ)- ಮೈಸೂರು ವಿವಿ ಡಾ.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಆವರಣ ದಲ್ಲಿ ಕೇಂದ್ರದ ಗ್ರಂಥಾಲಯ, ವಸ್ತು ಸಂಗ್ರ ಹಾಲಯ ಮತ್ತು ದಲಿತ ದಾಖಲೀಕರಣ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಸೋಮ ವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಕಟ್ಟಡದ ಶಿಲಾನ್ಯಾಸವನ್ನು ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೆರವೇರಿಸಿ ದರು. ಬಳಿಕ ನಡೆದ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್ ಇಲ್ಲದ ದೇಶ ಕಟ್ಟಲು ಷಡ್ಯಂತರ ನಡೆಯುತ್ತಿದೆ. ಇದರ ವಿರುದ್ಧ ಸಂವಿಧಾನದ ಚೌಕಟ್ಟಿನಲ್ಲಿ ದನಿ ಎತ್ತಬೇಕಿದೆ. ಸಂವಿಧಾನ, ಸ್ವಾತಂತ್ರ್ಯ ಹೋರಾಟದ ಮಹತ್ವ ತಿಳಿಯದ ಕೆಲ ರಾಜಕಾರಣಿಗಳು ಸಮೃದ್ಧ ಭಾರತ ಕಟ್ಟು ತ್ತೇವೆ ಎಂದು ಬಿಂಬಿಸುತ್ತ ಕಟ್ಟುವುದಕ್ಕಿಂತ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಪರಿ ಣಾಮ ಪ್ರಜಾಪ್ರಭುತ್ವ ಮಂಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಶೋಷಿತ ಸಮುದಾಯಗಳು ಸಾಮಾ ಜಿಕ ನ್ಯಾಯಕ್ಕಾಗಿ ಪರಿತಪಿಸುವ ಪರಿಸ್ಥಿತಿ ಇಂದಿಗೂ ಇದ್ದು, ಇಂತಹ ವೇಳೆಯಲ್ಲಿ ಸಾಮಾಜಿಕ ನ್ಯಾಯವನ್ನೇ ನಿರಾಕರಿಸಲಾ ಗುತ್ತಿದೆ. ಬಹುತೇಕ ಮಾಧ್ಯಮಗಳು ಕಾರ್ಪೋ ರೆಟ್‍ಗಳ ಕೈಗೊಂಬೆಯಾಗಿ ಪ್ರಜಾಪ್ರಭು ತ್ವಕ್ಕೆ ಮಾರಕವಾಗಿ ವರ್ತಿಸುತ್ತಿವೆ. ಕೃಷಿ ಕ್ಷೇತ್ರ ವಿನಾಶದತ್ತ ಸಾಗುವಂತಾಗಿದೆ. ದೇಶ ದಲ್ಲಿ ಉದ್ಯೋಗ ಕಡಿತ ಹೆಚ್ಚುತ್ತಿದೆ. ನ್ಯಾಯಾಂಗ ಪಕ್ಷಪಾತವಾಗಿದೆ. ಇಂತಹ ಸನ್ನಿವೇಶ ದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಯುವ ಸಮುದಾಯ ಮಹತ್ವದ ಪಾತ್ರ ವಹಿಸಬೇಕಿದೆ ಎಂದು ಹೇಳಿದರು.

ಸಿಂಡಿಕೇಟ್‍ನಲ್ಲಿ ಎಸ್‍ಸಿ ಸದಸ್ಯರಿಲ್ಲ: ಮೈಸೂರು ವಿವಿ ಸಿಂಡಿಕೇಟ್‍ನ ನೂತನ ಸದ ಸ್ಯರ ಪೈಕಿ ಒಬ್ಬರೂ ಎಸ್‍ಸಿ ಸಮುದಾಯ ವರಿಲ್ಲ. ಇಂತಹ ಬೆಳವಣಿಗೆ ವಿವಿಯಲ್ಲಿ ಆಗಕೂಡದು. ಕುಲಪತಿಗಳು ಕೂಡಲೇ ಸರ್ಕಾ ರಕ್ಕೆ ಪ್ರಸ್ತಾಪ ಸಲ್ಲಿಸಬೇಕು. ವಿವಿಗಳು ಯಾರ ಕೈಗೊಂಬೆಯಾಗದೇ ಸಮಾಜದ ಕತ್ತಲು ತೊಡೆಯುವ ಬೆಳಕು ಪಸರಿಸಬೇಕು ಎಂದು ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದರು.

ಚಾಮರಾಜನಗರದ ನಳಂದ ಬುದ್ಧ ವಿಹಾರದ ಭಂತೇ ಬೋಧಿದತ್ತ ಉಪಸ್ಥಿತ ರಿದ್ದರು. ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್ ಕುಮಾರ್, ಕುಲಸಚಿವ ಪ್ರೊ.ಆರ್. ಶಿವಪ್ಪ, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಎನ್.ಮುನಿರಾಜು, ಡಾ. ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣಾ ಕೇಂದ್ರದ ನಿರ್ದೇಶಕ ಪ್ರೊ.ಜೆ.ಸೋಮ ಶೇಖರ್ ಮತ್ತಿತರರು ಹಾಜರಿದ್ದರು.

 

ಕೋಟಿ ರೂ. ವೆಚ್ಚದಲ್ಲಿ 3 ಅಂತಸ್ತಿನ ಕಟ್ಟಡ ನಿರ್ಮಾಣ…

ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ನೆಲ ಅಂತಸ್ತು, ಮೊದಲ ಹಾಗೂ ಎರಡನೇ ಅಂತಸ್ತು ಕಟ್ಟಡದಲ್ಲಿ ಬರಲಿದೆ. ಸಮಾಜ ಕಲ್ಯಾಣ ಇಲಾಖೆಯಿಂದ 3 ಕೋಟಿ ರೂ. ಅನುದಾನ ಮಂಜೂರಾಗಿದ್ದು, ಅದರಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಮೊದಲ ಹಂತದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದ್ದೇವೆ. ಉಳಿದ ಅನುದಾನ ಕೇಂದ್ರದ ಬೇರೆ ಚಟುವಟಿಕೆಗಳಿಗೆ ವಿನಿಯೋಗಿಸಬೇಕಿದೆ. ಮುಂದಿನ ಹಂತದ ಕಾಮಗಾರಿಗಳಿಗೆ ವಿವಿ ಹಾಗೂ ಸರ್ಕಾರದ ಅನುದಾನ ಪಡೆದುಕೊಳ್ಳಬೇಕಿದೆ. ಈ ಕಟ್ಟಡ ನಿರ್ಮಾಣದಿಂದ ಕೇಂದ್ರ ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡ ದೊರೆಯಲಿದೆ. ವಸ್ತು ಸಂಗ್ರಹಾಲಯದಲ್ಲಿ ಅಂಬೇಡ್ಕರ್ ಕುರಿತ ಬದುಕು, ಬರಹ ಹಾಗೂ ಹೋರಾಟ ಸೇರಿದಂತೆ ಎಲ್ಲಾ ಮಾಹಿತಿ ಲಭ್ಯವಾಗುವಂತೆ ಮಾಡಲಾಗುವುದು. ದಲಿತ ದಾಖಲೀಕರಣ ಕೇಂದ್ರದಲ್ಲಿ ದಲಿತ ಸಮುದಾಯ ಎದುರಿಸಿದ ಸಮಸ್ಯೆಗಳು ಹಾಗೂ ಸವಾಲುಗಳ ದಾಖಲೀಕರಣ ನಡೆಯಲಿದೆ -ಪ್ರೊ.ಜೆ.ಸೋಮಶೇಖರ್, ಅಂಬೇಡ್ಕರ್ ಕೇಂದ್ರದ ನಿರ್ದೇಶಕರು.

Translate »