ಕೃಷಿ ಉತ್ಪನ್ನ ಸಾಗಾಟಕ್ಕೆ ಉಚಿತ ಸಾರಿಗೆ ಸೌಲಭ್ಯ
ಮೈಸೂರು

ಕೃಷಿ ಉತ್ಪನ್ನ ಸಾಗಾಟಕ್ಕೆ ಉಚಿತ ಸಾರಿಗೆ ಸೌಲಭ್ಯ

June 10, 2019

ಬೆಂಗಳೂರು: ರಾಜ್ಯದ ರೈತರು ತಮ್ಮ ಬೆಳೆಗಳನ್ನು ಸರ್ಕಾರಿ ಗೋದಾಮುಗಳಿಗೆ ಸಾಗಿಸಲು ಉಚಿತ ಸಾರಿಗೆ ಸೌಲಭ್ಯವನ್ನು ಒದಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಗೋದಾಮುಗಳಲ್ಲಿ ರೈತರು ತಮ್ಮ ಉತ್ಪನ್ನಗಳನ್ನು ಗರಿಷ್ಟ 8 ತಿಂಗಳ ಕಾಲ ಉಚಿತ ವಾಗಿ ಸಂಗ್ರಹಿಸಲು ಅವಕಾಶವಿದೆ ಎಂದು ಸಹಕಾರ ಸಚಿವ ಬಂಡಪ್ಪ ಕಾಶಂಪುರ್ ಹೇಳಿದ್ದಾರೆ. ಸೆಪ್ಟೆಂ ಬರ್‍ನಿಂದ ಇದಕ್ಕಾಗಿ ವಿಶೇಷ ಕಾಲ್ ಸೆಂಟರ್ ಪ್ರಾರಂ ಭಿಸಲು ಉದ್ದೇಶಿಸಿದ್ದು ರೈತರು ಫೆÇೀನ್ ಮೂಲಕ ಸಹಾಯವಾಣಿ ಕೇಂದ್ರವನ್ನು ಸಂಪರ್ಕಿಸಿ ಉಚಿತ ಸಾರಿಗೆ ಹಾಗೂ ಗೋದಾಮು ಸೌಲಭ್ಯ ಹೊಂದ ಬಹುದಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದಲ್ಲದೆ ರೈತರು ಸರ್ಕಾರಿ ಗೋದಾಮಿನಲ್ಲಿ ಸಂಗ್ರ ಹಿಸಿರುವ ಬೆಳೆಗಳ ಮೇಲೆ ಸಾಲ ಪಡೆದಿದ್ದರೆ ಅಂತಹ ಸಾಲದ ಮೇಲೆ ಶೇ.50ರಷ್ಟು ಬಡ್ಡಿ ದರವನ್ನು ಸರ್ಕಾರವು ನೀಡುತ್ತದೆ. ಸರ್ಕಾರ ಈ ಯೋಜನೆ ಗಾಗಿ 2,000 ಕೋಟಿ ರೂ. ಮೀಸಲಿರಿಸಿದೆ. ಸರ್ಕಾ ರದ ನಿಯಂತ್ರಣದಲ್ಲಿರುವ ಗೋದಾಮುಗಳಲ್ಲಿ ಗರಿಷ್ಠ 37 ಲಕ್ಷ ಮೆಟ್ರಿಕ್ ಟನ್ ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಬಹುದು ಎಂದು ಸಚಿವರು ಹೇಳಿದ್ದಾರೆ.

Translate »