ಇಂದಿನಿಂದ ಮೈಸೂರು-ಮುಂಬೈ ನಡುವೆ ನೂತನ ಬಸ್ ಸಂಚಾರ
ಮೈಸೂರು

ಇಂದಿನಿಂದ ಮೈಸೂರು-ಮುಂಬೈ ನಡುವೆ ನೂತನ ಬಸ್ ಸಂಚಾರ

June 10, 2019

ಮೈಸೂರು: ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂ ತರ ವಿಭಾಗದಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಹಾಗೂ ಆರಾಮದಾಯಕ ಪ್ರಯಾಣಕ್ಕಾಗಿ ಮೈಸೂರು -ಮುಂಬೈ ಮಾರ್ಗದಲ್ಲಿ ನೂತನವಾಗಿ ಐರಾವತ ಡ್ರೀಮ್ ಕ್ಲಾಸ್ (ಎಸಿ ಸ್ಲೀಪರ್) ವಾಹನ ಜೂನ್ 10ರಿಂದ ಸಂಚರಿಸಲಿದೆ.

ಅಂತಾರಾಜ್ಯ ಮತ್ತು ದೂರ ಮಾರ್ಗವಾದ ಮುಂಬೈಗೆ ಈ ಹಿಂದೆ ಇದ್ದ ಐರಾವತ್ ಕ್ಲಬ್ ಕ್ಲಾಸ್ ವಾಹನದ ಬದಲಾಗಿ ಐರಾ ವತ ಡ್ರೀಮ್ ಕ್ಲಾಸ್ ಮಾದರಿಯ ಎಸಿ ಸ್ಲೀಪರ್ ವಾಹನ ಜೂ.10ರಿಂದ ಪ್ರತಿದಿನ ಮಧ್ಯಾಹ್ನ ಒಂದು ಗಂಟೆಗೆ ಮೈಸೂರಿನಿಂದ ಕೆ.ಆರ್.ಪೇಟೆ, ಶ್ರವಣ ಬೆಳಗೊಳ, ಅರಸೀಕೆರೆ, ಶಿವಮೊಗ್ಗ, ಹರಿಹರ, ಹಾವೇರಿ, ಹುಬ್ಬಳ್ಳಿ, ಬೆಳಗಾವಿ, ಕೊಲ್ಲಾಪುರ, ಪೂನಾ ಮಾರ್ಗವಾಗಿ ಮುಂಬೈ ತಲುಪಲಿದೆ.

ಮುಂಬೈನಿಂದ ಅದೇ ಮಾರ್ಗವಾಗಿ ಪ್ರತಿದಿನ ಮಧ್ಯಾಹ್ನ 1 ಗಂಟೆಗೆ ಹೊರಡಲಿದೆ ಎಂದು ಕೆಎಸ್‍ಆರ್‍ಟಿಸಿ ಮೈಸೂರು ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.

Translate »