ಇಂದಿನಿಂದ ರಂಗಾಯಣದಲ್ಲಿ ಗ್ರೀಷ್ಮ ರಂಗೋತ್ಸವ
ಮೈಸೂರು

ಇಂದಿನಿಂದ ರಂಗಾಯಣದಲ್ಲಿ ಗ್ರೀಷ್ಮ ರಂಗೋತ್ಸವ

May 19, 2019

ಮೈಸೂರು: ರಂಗಾ ಯಣದ ಗ್ರೀಷ್ಮ ರಂಗೋತ್ಸವ ಮೇ 19ರಿಂದ ನಡೆಯಲಿದ್ದು, ಇತ್ತೀಚೆಗೆ ನಿಧನರಾದ ರಂಗ ನಟಿ, ನಿರ್ದೇಶಕಿ ಮತ್ತು ಹಿರಿಯ ರಂಗ ಕರ್ಮಿ ಎಸ್.ಮಾಲತಿ ಅವರ ನೆನಪಿನಲ್ಲಿ ಈ ಬಾರಿಯ ಗ್ರೀಷ್ಮ ರಂಗೋತ್ಸವ ಜರುಗಲಿದೆ.

ಮೇ 19ರಿಂದ ಜೂನ್ 23ರವರೆಗೆ ಪ್ರತಿ ಭಾನುವಾರ ರಂಗಾಯಣದ ಭೂಮಿಗೀತ ದಲ್ಲಿ ಸಂಜೆ 6.30ಕ್ಕೆ ರಾಜ್ಯದ ನಾನಾ ಹವ್ಯಾಸಿ ರಂಗತಂಡಗಳು ನಾಟಕ ಪ್ರದರ್ಶನ ನೀಡ ಲಿದ್ದು, ಒಟ್ಟು 7 ನಾಟಕಗಳು ಪ್ರದರ್ಶನ ಗೊಳ್ಳಲಿವೆ. ರಂಗಾಯಣದ ಆವರಣದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಗ್ರೀಷ್ಮ ರಂಗೋತ್ಸವದ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದ ರಂಗಾಯಣದ ಜಂಟಿ ನಿರ್ದೇ ಶಕ ವಿ.ಎಸ್.ಮಲ್ಲಿಕಾರ್ಜುನ ಸ್ವಾಮಿ, ನಾಡಿನ ಹವ್ಯಾಸಿ ರಂಗತಂಡಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ವರ್ಷವೂ ಗ್ರೀಷ್ಮ (ಋತು) ಹವ್ಯಾಸಿ ರಂಗೋತ್ಸವ ಏರ್ಪಡಿಸಲಾಗುತ್ತದೆ. ನಾಟಕೋತ್ಸವದಲ್ಲಿ ಮಾಲತಿ ಅವರೇ ರಂಗರೂಪಕ್ಕಿಳಿಸಿದ `ಸ್ವಪ್ನ ಸಾರಸ್ವತ’ ನಾಟಕವೂ ಪ್ರದರ್ಶನ ಗೊಳ್ಳುತ್ತಿದೆ ಎಂದು ಹೇಳಿದರು.

ಮಹಿಳಾ ಪ್ರಧಾನವಾಗಿರುವ `ಸಣ್ತಿಮ್ಮಿಯ ಲವ್ ಪುರಾಣ’ ಮತ್ತು `ಕೌದಿ’ ಏಕವ್ಯಕ್ತಿ ನಾಟಕ ಪ್ರದರ್ಶನ ಒಂದೇ ದಿನ (ಜೂನ್ 2ರಂದು) ನಡೆಯಲಿವೆ. ಚಾರ್ವಾಕ ತಂಡವು ಬುದ್ಧನ ಜೀವನ ಚರಿತ್ರೆಯ ಕುರಿತಾದ `ಬುದ್ಧ ಯಾನ’ 6 ಗಂಟೆಗಳ ನಾಟಕ ಪ್ರಯೋಗ ವನ್ನು ಎರಡೂವರೆ ಗಂಟೆಗೆ ಇಳಿಸಿ ಪ್ರದರ್ಶಿಸುತ್ತಿರುವುದು ವಿಶೇಷ ಎಂದರು.

ಮೇ 19ರಂದು ಬೆಂಗಳೂರಿನ ದೃಶ್ಯ ಕಾವ್ಯ ತಂಡ `ಮಾಯಾ ಬೇಟೆ’ ಪ್ರದ ರ್ಶನ ನೀಡುತ್ತಿದೆ. ಕೆ.ವೈ.ನಾರಾಯಣ ಸ್ವಾಮಿ ರಚನೆಯ ಈ ನಾಟಕವನ್ನು ನಂಜುಂಡೇ ಗೌಡ ನಿರ್ದೇಶನ ಮಾಡಿದ್ದಾರೆ. ಮೇ 26ರಂದು ಮೈಸೂರಿನ ಚಾರ್ವಾಕ ಟ್ರಸ್ಟ್‍ನ ಕಲಾವಿದರು `ಬುದ್ಧಯಾನ’ ಪ್ರದರ್ಶನ ನೀಡಲಿದ್ದು, ಗಿರೀಶ್ ಮಾಚಳ್ಳಿ ನಾಟಕ ರಚಿಸಿ, ನಿರ್ದೇಶಿಸಿದ್ದಾರೆ. ಜೂ.2ರಂದು ದು.ಸರಸ್ವತಿ ರಚಿಸಿ, ದೀಪಕ್ ಶ್ರೀನಿ ವಾಸನ್ ನಿರ್ದೇಶಿಸಿರುವ `ಸಣ್ತಿಮ್ಮಿಯ ಲವ್ ಪುರಾಣ’ ಹಾಗೂ ವಾಣಿ ಪೆರಿ ಯೋಡಿ ರಚಿಸಿ, ದೀಪಕ್ ಶ್ರೀನಿವಾಸನ್ ನಿರ್ದೇಶನದ `ಕೌದಿ’, ಜೂ.9ರಂದು ಉಡುಪಿಯ ಸುಮನಸಾ ಕೊಡವೂರು ತಂಡದಿಂದ ರವೀಂದ್ರನಾಥ್ ಟಾಗೋರ್ ರಚನೆಯ ಗುರುರಾಜ ಮಾಂರ್ಪಳ್ಳಿ ನಿರ್ದೇಶನದ `ರಥಯಾತ್ರೆ’ ಪ್ರದರ್ಶನ ನಡೆಯಲಿವೆ ಎಂದರು.

ಇಂದು ಚಾಲನೆ: ಮೇ 19ರಂದು ಸಂಜೆ 6ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಹಿರಿಯ ರಂಗ ನಿರ್ದೇಶಕ ಪೆÇ್ರ.ಹೆಚ್. ಎಸ್.ಉಮೇಶ್ ಅವರು ರಂಗೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಂಗ ನಿರ್ದೇಶಕಿ ಕೆ.ಆರ್.ಸುಮತಿ ಅತಿಥಿಯಾಗಿ ಭಾಗವ ಹಿಸಲಿದ್ದಾರೆ ಎಂದು ತಿಳಿಸಿದರು.

Translate »