ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ತರಬೇತಿ ಸಮಾರೋಪ
ಮೈಸೂರು

ಪ್ರಾಥಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ತರಬೇತಿ ಸಮಾರೋಪ

May 19, 2019

ಮೈಸೂರು: ಮೈಸೂರಿನ ಜ್ಞಾನಬುತ್ತಿ ಸಂಸ್ಥೆ ವತಿಯಿಂದ ಲಕ್ಷ್ಮೀ ಪುರಂನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಪದವೀಧರ ಪ್ರಾಥ ಮಿಕ ಶಿಕ್ಷಕರ ನೇಮಕಾತಿ ಪರೀಕ್ಷೆ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಶುಭ ಹಾರೈಕೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಇದೇ ವೇಳೆ ಯುಜಿಸಿ-ನೆಟ್ ಪರೀಕ್ಷೆಯ ಉಚಿತ ತರಬೇತಿ ಶಿಬಿರ ಉದ್ಘಾಟಿಸಲಾ ಯಿತು. ಈ ಕಾರ್ಯಕ್ರಮವನ್ನು ನಗರ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಉದ್ಘಾಟಿ ಸಿದರು. ಮೈಸೂರು ವಿವಿ ಎಮರೇಟಿಸ್ ಪ್ರಾಧ್ಯಾಪಕ ಹೆಚ್.ಎಂ.ರಾಜಶೇಖರ್ ಅಧ್ಯ ಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿಶ್ರಾಂತ ಮುಖ್ಯ ಮಾಹಿತಿ ಆಯುಕ್ತ ಪ್ರೊ. ಸುಚೇತನ ಸ್ವರೂಪ, ವಿಶೇಷ ಭೂಸ್ವಾಧೀ ನಾಧಿಕಾರಿ ಎ.ದೇವರಾಜು, ಪ್ರೊ.ಎನ್. ಎನ್.ಪ್ರಹ್ಲಾದ್, ಪ್ರೊ. ಆರ್.ಎನ್.ಪದ್ಮ ನಾಭ, ಹೆಚ್.ಎಲ್.ಶೈಲಜಾ, ಡಾ. ಜಿ.ವಿ. ನರಸಿಂಹನ್, ರಾಜೀವ್ ಶರ್ಮ, ಪ್ರೊ. ವಿ.ಜಯಪ್ರಕಾಶ್, ಜ್ಞಾನಬುತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಜೈನಹಳ್ಳಿ ಸತ್ಯನಾರಾ ಯಣಗೌಡ, ಕಾರ್ಯದರ್ಶಿ ರಾ.ರಾಮ ಕೃಷ್ಣ, ಹೆಚ್.ಬಾಲಕೃಷ್ಣ ಉಪಸ್ಥಿತರಿದ್ದರು.

Translate »