ಸೂಯೆಜ್‍ಫಾರಂನ ಪೂರ್ಣ ಕಸ ವಿಲೇವಾರಿ ನಾಗ್ಪುರ ಪ್ಲಾಂಟ್‍ಗೆ ಡಿಸಿ ನೇತೃತ್ವದ ಪಾಲಿಕೆ ಅಧಿಕಾರಿಗಳ ನಿಯೋಗ
ಮೈಸೂರು

ಸೂಯೆಜ್‍ಫಾರಂನ ಪೂರ್ಣ ಕಸ ವಿಲೇವಾರಿ ನಾಗ್ಪುರ ಪ್ಲಾಂಟ್‍ಗೆ ಡಿಸಿ ನೇತೃತ್ವದ ಪಾಲಿಕೆ ಅಧಿಕಾರಿಗಳ ನಿಯೋಗ

December 25, 2019

ಅಧ್ಯಯನ ನಡೆಸಿ, ಜನವರಿ 3ರೊಳಗೆ ವರದಿ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ

ಮೈಸೂರು,ಡಿ.24(ಆರ್‍ಕೆ)- ಮೈಸೂ ರಿನ ಸೂಯೆಜ್ ಫಾರಂನಲ್ಲಿ ಸಂಗ್ರಹ ವಾಗಿರುವ ಕಸದ ರಾಶಿಯನ್ನು ವೈಜ್ಞಾನಿಕ ವಾಗಿ ವಿಲೇವಾರಿ ಮಾಡಲು ನಾಗ್ಪುರಕ್ಕೆ ತೆರಳಿ ಪ್ರಗತಿಯಲ್ಲಿರುವ ಘಟಕವನ್ನು ವೀಕ್ಷಿಸಿ ಬಂದು ಮುಂದಿನ ಜನವರಿ 3 ರೊಳಗಾಗಿ ಅಧ್ಯಯನ ವರದಿ ನೀಡು ವಂತೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇಂದಿಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇರಿ ಸಭಾಂಗಣದಲ್ಲಿ ಈ ಸಂಬಂಧ ಸಭೆ ನಡೆಸಿದ ಅವರು, ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ನೇತೃತ್ವದಲ್ಲಿ ಮೇಯರ್, ಉಪ ಮೇಯರ್, ಪಾಲಿಕೆ ಆರೋಗ್ಯ, ಹಣಕಾಸು ಸ್ಥಾಯಿ ಸಮಿತಿ ಸದಸ್ಯರು, ಆಯುಕ್ತರು, ಆರೋಗ್ಯಾಧಿಕಾರಿಗಳನ್ನೊಳಗೊಂಡ ನಿಯೋಗವು ಗುಜರಾತ್‍ನ ನಾಗ್ಪುರಕ್ಕೆ ತೆರಳಿ ಅಲ್ಲಿ ಜಿಗ್ಮಾ ಕಂಪನಿಯವರು ನಡೆ ಸುತ್ತಿರುವ ಕಸ ವಿಲೇವಾರಿ, ಸಂಸ್ಕರಣೆ, ಮರು ಬಳಕೆ ಪ್ರಕ್ರಿಯೆ ಅಧ್ಯಯನ ನಡೆಸಿ ಜನವರಿ 3 ರೊಳಗೆ ಸಮಗ್ರ ವರದಿ ನೀಡಿ ಎಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ಅವರಿಗೆ ತಿಳಿಸಿದರು.

ಸಭೆ ಆರಂಭದಲ್ಲಿ ತಮಿಳುನಾಡಿನ ಈರೋಡ್ ಮೂಲದ ಜಿಗ್ಮಾ ಕಂಪನಿ ನಿರ್ದೇಶಕ ಸಿ. ನಾಗೇಶ್‍ಪ್ರಭು ಅವರು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ನಾಗ್ಪುರ ಮತ್ತು ವಡೋದರ ನಗರಗಳಲ್ಲಿ 8 ಲಕ್ಷ ಟನ್ ಪ್ರಮಾಣದ ಕಸ ವಿಲೇವಾರಿ ಮಾಡುತ್ತಿರುವ ಸಂಸ್ಕರಣಾ ಘಟಕದ ಕಾರ್ಯ ವೈಖರಿಯನ್ನು ವಿವರಿಸಿದರು.

ಕಸ ಬೇರ್ಪಡಿಸಿ, ಸಂಸ್ಕರಣೆ ಮೂಲಕ ಕಾಂಪೋಸ್ಟ್ ಗೊಬ್ಬರ ತಯಾರಿಸುವುದು, ಅದರಿಂದ ಹೊರಬರುವ ಕಲ್ಲು, ಮಣ್ಣನ್ನು ತಗ್ಗು ಪ್ರದೇಶಕ್ಕೆ ಹಾಕಿ ಸಮತಟ್ಟು ಮಾಡುವ ಕೆಲಸವನ್ನು ಪರಿಸರಕ್ಕೆ ಹಾನಿ ಯಾಗದಂತೆ ಅತ್ಯಾಧುನಿಕ ತಂತ್ರಜ್ಞಾನ ಉಪಕರಣಗಳಿಂದ ಕಸವಿಲೇವಾರಿ ಮಾಡುತ್ತೇವೆ ಎಂಬುದನ್ನು ಪ್ರಭು ಪ್ರಸ್ತುತಪಡಿಸಿದರು.

ಮೈಸೂರಿನಲ್ಲಿರುವ 2.4 ಲಕ್ಷ ಟನ್ ಕಸವನ್ನು 18 ತಿಂಗಳೊಳಗೆ ನಾವು ವಿಲೇ ವಾರಿ ಮಾಡುತ್ತೇವೆ. ಪ್ರತೀದಿನ 450 ಟನ್ ಕಸ ಉತ್ಪತ್ತಿಯಾಗುತ್ತಿರುವುದೂ ಸೇರಿ ದಂತೆ ಈಗಾಗಲೇ ಸೂಯೆಜ್ ಫಾರಂ ನಲ್ಲಿ ಬೆಟ್ಟದಾಕಾರದಲ್ಲಿ ಶೇಖರಣೆಯಾ ಗಿರುವ ಕಸದ ರಾಶಿಯನ್ನು ವಿಲೇವಾರಿ ಮಾಡಲು ಸುಮಾರು 18 ಕೋಟಿ ರೂ. ಖರ್ಚಾಗಲಿದೆ ಎಂದು ಅವರು ಸಭೆಗೆ ವಿವರಿಸಿದರು.

ಮೈಸೂರು ಮಹಾನಗರ ಪಾಲಿಕೆ 13ನೇ ಹಣಕಾಸು ಯೋಜನೆಯಡಿ 3.5 ಕೋಟಿ ರೂ.ಗಳನ್ನು ಕಸ ವಿಲೇವಾರಿಗೆ ಇರಿಸಲಾ ಗಿದೆ ಎಂದು ಪಾಲಿಕೆ ಆಯುಕ್ತ ಗುರು ದತ್ ಹೆಗ್ಡೆ ತಿಳಿಸಿದರು. 5 ಕೋಟಿ ರೂ. ಗಳನ್ನು ಮುಡಾದಿಂದ ಕೊಡುವಂತೆ ಆಯುಕ್ತ ಪಿ.ಎಸ್.ಕಾಂತರಾಜು ಅವರಿಗೆ ತಾಕೀತು ಮಾಡಿದ ಸಚಿವರು, ಉಳಿಕೆ ಹಣವನ್ನು ಇತರ ಪಾಲಿಕೆ ಸಂಪನ್ಮೂಲ ಗಳಿಂದ ಕ್ರೋಢೀಕರಿಸಿ, ಅದು ಸಾಲದಿ ದ್ದರೆ ನಾನು ಸರ್ಕಾರದಿಂದ ಕೊಡಿಸಲು ಪ್ರಯತ್ನಿಸುತ್ತೇನೆ ಎಂದರು.

ಸೂಯೆಜ್ ಫಾರಂನ ಕಸದ ರಾಶಿಯಿಂ ದಾಗಿ ದುರ್ವಾಸನೆ ಉಂಟಾಗಿ ಸುತ್ತಲಿನ ಬಡಾವಣೆಗಳ ನಿವಾಸಿಗಳು ಉಸಿರು ಕಟ್ಟಿ ಬದುಕುವಂತಾಗಿರುವುದರಿಂದ ಮೊದಲು ಆ ಸ್ಥಳದಿಂದ ತೆರವುಗೊಳಿಸಬೇಕಾಗಿದೆ. ಎರಡು-ಮೂರು ದಿನದೊಳಗೇ ನಾಗ್ಪುರಕ್ಕೆ ಹೋಗಿ ಅಲ್ಲಿ ಹೇಗೆ ಕಸ ವಿಲೇವಾರಿ ಘಟಕ ಕಾರ್ಯನಿರ್ವಹಿ ಸುತ್ತಿದೆ, ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತದೆಯೇ, ಸಂಪೂರ್ಣ ವಿಲೇವಾ ರಿಗೆ ಎಷ್ಟು ದಿನ ಬೇಕಾಗುತ್ತದೆ, ಎಷ್ಟು ಹಣ ಖರ್ಚಾಗಲಿದೆ ಎಂಬ ಮಾಹಿತಿ ಯನ್ನೊಳಗೊಂಡ ಪೂರ್ಣ ವರದಿ ನೀಡಿದಲ್ಲಿ ಜನವರಿ 3ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಪರಿಶೀಲಿಸಿ ನಂತರ ಜಿಗ್ಮಾ ಕಂಪನಿಗೆ ಈ ಯೋಜನೆ ನೀಡ ಬೇಕೋ, ಬೇಡವೋ ಎಂಬುದರ ಬಗ್ಗೆ ನಿರ್ಧಾರ ಮಾಡೋಣ ಎಂದು ವಿ. ಸೋಮಣ್ಣ ತಿಳಿಸಿದರು. ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ಜಿ.ಟಿ.ದೇವೇಗೌಡ, ಮೇಯರ್ ಪುಷ್ಪಲತಾ ಜಗನ್ನಾಥ್, ಶಾಸಕ ಎಲ್.ನಾಗೇಂದ್ರ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಜ್ಯೋತಿ ಸೇರಿದಂತೆ ಪಾಲಿಕೆ ಹೆಚ್ಚುವರಿ ಆಯುಕ್ತ ಶಶಿಕುಮಾರ್, ಆರೋಗ್ಯಾಧಿ ಕಾರಿಗಳಾದ ಡಾ. ಎಂ.ಎಸ್. ಜಯಂತ್, ಡಾ.ನಾಗರಾಜ್, ಮುಡಾ ಸೂಪರಿಂಟೆಂ ಡಿಂಗ್ ಇಂಜಿನಿಯರ್ ಪ್ರಭಾಕರ್, ನಗರ ಯೋಜಕ ಸದಸ್ಯ ಬಿ.ಎನ್. ಗಿರೀಶ್ ಸೇರಿ ದಂತೆ ಹಲವು ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Translate »