ಲಕ್ಷ್ಮೀಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ
ಮೈಸೂರು

ಲಕ್ಷ್ಮೀಪುರದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಸರ್ಜನೆ

September 19, 2018

ಬೈಲಕುಪ್ಪೆ: ಲಕ್ಷ್ಮೀಪುರ ಗ್ರಾಮದ ಸಮುದಾಯ ಭವನದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಿದ ಗಣಪತಿ ವಿಗ್ರಹವನ್ನು ಇಂದು ವಿಸರ್ಜಿಸಲಾಯಿತು. ಗ್ರಾಮದ ಯಜಮಾನರ ಸಮ್ಮುಖದಲ್ಲಿ ಎಲ್ಲಾ ಸಮುದಾಯದ ಯುವಕರು, ಮಹಿಳೆಯರು ಸೇರಿದಂತೆ ಹಲವರು ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪಿರಿಯಾಪಟ್ಟಣ ತಾಲೂಕು ಲಕ್ಷ್ಮೀಪುರ ಗ್ರಾಮದಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ 5.5 ಅಡಿ ಎತ್ತರದ ಗಣಪತಿಯನ್ನು ಟ್ರ್ಯಾಕ್ಟರ್‍ನಲ್ಲಿ ಕುಳ್ಳರಿಸಿ ವಿವಿಧ ಹೂಗಳಿಂದ ಶೃಂಗರಿಸಿ, ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಿ, ಅರ್ಚಕರಿಂದ ಪೂಜಾ ಕಾರ್ಯಕ್ರಮ ನೆರವೇರಿಸಿದರು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಗ್ರಾಮದ ಯುವಕರು ಕುಣಿದು ಕುಪ್ಪಳಿಸಿದರು. ನಂತರ ಗ್ರಾಮದ ಹೊರ ವಲಯದಲ್ಲಿರುವ ಸೆತ್ತೆಕೆರೆಗೆ ವಿಸರ್ಜಿಸಿದರು. ಬಂದಂತಹ ಎಲ್ಲಾ ಭಕ್ತಾಧಿಗಳಿಗೂ ಪ್ರಸಾದ ನಿಯೋಗಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಯಜಮಾನರಾದ ಎಲ್.ರಾಜು, ಪ್ರದೀಪ, ಗ್ರಾ.ಪಂ ಸದಸ್ಯ ಪಿ.ನಾಗರಾಜು, ಗ್ರಾಮಸ್ಥರುಗಳಾದ ಶಿವಲಿಂಗಯ್ಯ, ಕೆ.ಎಂ.ರಾಜು, ಡಾ.ರಾಮಚಂದ್ರ, ಕರುಣಾಕರ, ಮೂಡ್ಲಯ್ಯ, ಉದಯನಾಯಕ, ಮಹಿಳೆಯರು ಸೇರಿದಂತೆ ಮತ್ತಿತರರು ಹಾಜರಿದ್ದರು.

 

 

Translate »