ನಂಜನಗೂಡು ಜೈಲಲ್ಲಿ ಗಾಂಧಿ ಜಯಂತಿ
ಮೈಸೂರು

ನಂಜನಗೂಡು ಜೈಲಲ್ಲಿ ಗಾಂಧಿ ಜಯಂತಿ

October 3, 2018

ಅಹಿಂಸಾ ಮಾರ್ಗದಲ್ಲಿ ಸ್ವಾತಂತ್ರ ಹೋರಾಟದ ಸ್ವರೂಪವನ್ನು ಬದಲಿಸಿದವರು ಮಹಾತ್ಮ ಗಾಂಧೀ: ಬಿಜೆಪಿ ಮುಖಂಡ ಎನ್.ವಿ.ಪ್ರಣೀಶ್

ನಂಜನಗೂಡು:  ಅಹಿಂಸಾ ಮಾರ್ಗದ ಮೂಲಕ ಸ್ವಾತಂತ್ರ ಹೋರಾಟದ ಸ್ವರೂಪವನ್ನು ಬದಲಿಸಿದ ಮಹಾತ್ಮ ಗಾಂಧೀಜಿಯವರು, ಆ ಮೂಲಕ ಜನಸಾಮನ್ಯರು ಸಹ ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸುವಂತೆ ಮಾಡಿದರು ಎಂದು ಎಂದು ಹಿರಿಯ ಬಿಜೆಪಿ ಮುಖಂಡ ಹಾಗೂ ಪಕ್ಷದ ವಿಭಾಗೀಯ ಸಹ ಪ್ರಭಾರಿಗಳಾದ ಎನ್.ವಿ ಪಣೀಶ್, ತಿಳಿಸಿದ್ದಾರೆ.
ರಾಷ್ಟ್ರಪೀತ ಮಹಾತ್ಮ ಗಾಂದಿಜೀಯವರ 150ನೇ ಜಯಂತಿಯ ವರ್ಷದ ಸವಿನೆನಪಿಗಾಗಿ ಭಾರತೀಯ ಜನತಾ ಪಾರ್ಟಿ ನಂಜನಗೂಡು ವಿಧಾನ ಸಭಾ ಕ್ಷೇತ್ರವತಿಯಿಂದ ವಿಶೇಷವಾಗಿ ನಂಜನಗೂಡಿನ ಕಾರಗೃಹದಲ್ಲಿ ಶಾಸಕ ಹರ್ಷವರ್ಧನ್ ನಿರ್ದೇಶನದ ಮೂಲಕ ಖೈದಿಗಳಿಗೆ ಊಟದ ವಸ್ರ್ತ ಹಾಗೂ ನಿತ್ಯ ಕರ್ಮ ವಸ್ತುಗಳ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಹಾತ್ಮ ಗಾಂಧೀಜಿಯವರು ಸ್ವಚ್ಚತೆ ಇರುವ ಕಡೆ ಭಗವಂತನಿರುತ್ತಾನೆಂದು ಪ್ರತಿಪಾಧಿಸಿದ್ದರು, ಜಗತ್ತಿನಲ್ಲಿ ಯಾರಿಗೂ ಮಹಾತ್ಮ ಪಟ್ಟ ಕೊಟ್ಟಿಲ್ಲ, ಅದನ್ನು ಗಾಂಧೀಜಿಯವರಿಗೆ ಮಾತ್ರ ಕೊಟ್ಟಿದೆ ಎಂದ ಅವರು ಸಮಾಜದಲ್ಲಿ ಅಸ್ಪುಶ್ಯತೆ ನಿವಾರಣೆಗೆ ಎಲ್ಲರು ಸಮಾನರಾಗಿ ಬದುಕಬೇಕೆಂಬುದೆ ಅವರ ಗುರಿಯಾಗಿತ್ತು. ಅಹಿಂಸಾ ಮಾರ್ಗದಲ್ಲಿ ಸ್ವತಂತ್ರ ದೇಶ ಕಟ್ಟಿದ ಮಹಾತ್ಮ ಗಾಂಧೀಜಿ ನಮಗೆಲ್ಲಾ ಪ್ರೇರಣೆ ಎಂದರು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಾಜ ಸೇವಕರು ಯು.ಎಸ್ ಪದ್ಮನಾಭರಾವ್ ಮಾತನಾಡಿ, ಇದೊಂದು ಅರ್ಥಪೂರ್ಣದ ಕಾರ್ಯಕ್ರಮ. ಇಂದಿನ ವ್ಯವಸ್ಥೆಯಲ್ಲಿ ಖೈದಿಗಳು ಶೇಕಡವಾರು ಜನ ಅಪರಾಧಿಗಳಲ್ಲ ನಿಜವಾದ ಸಮಾಜ ಘಾತುಕ ಶಕ್ತಿಗಳು ಈ ಕಾನೂನಿನ ಕಣ್ಣಿಗೆ ಮಣ್ಣು ಎರಚಿ ಹೋರಗಡೆ ಇದ್ದಾರೆ ಅದರೆ ಎಷ್ಟೋ ಜನ ಜನ ನಿರಾಪರಾಧಿಗಳು ಶಿಕ್ಷೆಗೆ ಒಳಪಟ್ಟಿರುವುದು ವಿಷಾದನೀಯ ಎಂದರು.

ಕಾರಗೃಹದ ಮುಖ್ಯ ಅಧಿಕ್ಷಕರಾದ ಎನ್,ಎಸ್ ಶಿವಕುಮಾರ್ ಮಾತನಾಡಿ, ಕಾರಗೃಹದಲ್ಲಿ ಇರುವವರೆಲ್ಲಾ ಅಪರಾಧಿಗಳಲ್ಲ ಅಪರಾಧ ಮಾಡಿಯೋ ಮಾಡದೆಯೂ ಇಲ್ಲಿಗೆ ಬಂದ ಮೇಲೆ ಪರಿವರ್ತನೆಯ ಮೂಲಕ ಮುಂದೆ ಹೊಸ ಜೀವನವನ್ನು ರೂಪಿಸಿಕೊಳ್ಳಿ ಎಂದರು.

ನಮಗೆ ಬೈಯ್ಯುವವರೆಲ್ಲಾ ಒಳ್ಳೆಯದಕ್ಕಾಗಿ, ನಗುವರೆಲ್ಲಾ ಹಾಳಾಗುವುದಾಕ್ಕಾಗಿ ನಾವು ನಿಮ್ಮೊಡನೆ ಕಠಿಣವಾಗಿ ನಡೆದುಕೊಳ್ಳುವುದು ನೀವು ಬದಲಾಗಲಿ ಎಂದು ಶಿವಕುಮಾರ ತಿಳಿಸಿದರುಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿದ್ದ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ ಮಾತನಾಡಿ ಪಕ್ಷದ ಶಾಸಕರ ಆಜ್ಞೆಯ ಅನುಸಾರವಾಗಿ ಇಂದು ಈ ಖೈದಿಗಳಿಗೆ ಶರ್ಟ್, ಪಂಚೆ, ಶಲ್ಯ, ನಿತ್ಯಕರ್ಮವಸ್ತುಗಳನ್ನು ನೀಡುವ ಮೂಲಕ ಮಹಾತ್ಮರ ಜಯಂತಿಯನ್ನು ವಿಬಿನ್ನವಾಗಿ ಆಚರಿಸಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ ಸದಸ್ಯ ಎಸ್.ಎಂ ಕೆಂಪಣ್ಣ, ರಾಜ್ಯ ಬಿಜೆಪಿ ಮುಖಂಡ ಚಿಕ್ಕರಂಗನಾಯ್ಕ, ವಕೀಲ ನಂಜುಂಡಸ್ವಾಮಿ ,ನಗರಸಭಾ ಸದಸ್ಯ ಹೆಚ್.ಎಸ್.ಮಹದೇವಸ್ವಾಮಿ, ನಗರಾದ್ಯಕ್ಷ ಬಾಲಚಂದ್ರು, ಶಿರಮಳ್ಳಿ ಮಹದೇವಸ್ವಾಮಿ, ಜಯಪ್ರಕಾಶ್, ಮಾದೇಶ್, ಧನರಾಜ್ ಬೂಲ, ನವೀನ್, ಕಾರ್ಯಕ್ರಮವನ್ನು ದೇವಿರಮ್ಮನಹಳ್ಳಿ ಜಿ.ಬಸವರಾಜು, ನಿರೂಪಿಸಿ ಪ್ರಾಸ್ತವಿಕವಾಗಿ ಮಾತನಾಡಿದರು, ಹುಲ್ಲಹಳ್ಳಿ ಸಣ್ಣಯ್ಯ ಸ್ವಾಗತಿಸಿದರು, ಕೃಷ್ಣ ವಂದಿಸಿದರು.

Translate »