ಮೈಸೂರು: ಕಳೆದ ಮೂರು ದಶಕಗಳಿಂದ ಮೈಸೂರಿನ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದ ಐವರು ಹಿರಿಯ ಪೌರ ಕಾರ್ಮಿಕ ಮಹಿಳೆಯರಿಗೆ ಮೈಸೂರಿನ ಆರೋಹಣಂ ಫೌಂಡೇಷನ್ ವತಿಯಿಂದ ಗಾಂಧಿ ಜಯಂತಿ ಅಂಗವಾಗಿ ಸನ್ಮಾನಿಸಲಾಯಿತು. ಹಿರಿಯ ಪೌರ ಕಾರ್ಮಿಕ ಮಹಿಳೆಯರಾದ ನಂಜಮ್ಮ, ರಾಜಮ್ಮ, ಕಮಲಾ, ಕದ್ರಿ, ಜಯಮ್ಮ ಸನ್ಮಾನಿಸಲ್ಪವರು. ಮೈಸೂರು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಭರತ್‍ಕುಮಾರ್ ಅವರು ಎಲ್ಲರಿಗೂ ಶಾಲು ಹೊದಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಆರೋಹಣಂ ಫೌಂಡೇಷನ್‍ನ ಅಧ್ಯಕ್ಷೆ ಸುನೀತಾ ಮುನೀಶ್, ಉಪಾಧ್ಯಕ್ಷ ದರ್ಶನ್, ಕಾರ್ಯದರ್ಶಿ ಮಲ್ಲೇಶ್, ಶಂಸುದ್ದೀನ್, ಮುನೀಶ್‍ಕುಮಾರ್ ಸುವರ್ಣ, ನೀಲೇಶ್‍ಕುಮಾರ್ ಸುವರ್ಣ, ಲೀಲಾ ಶೆಣೈ ಸಾಯಿ ಧನುಷ್ ಇನ್ನಿತರರು ಭಾಗವಹಿಸಿದ್ದರು.
