14.05 ಲಕ್ಷ ರೂ. ಲಾಭದಲ್ಲಿ ಅಹಲ್ಯ ಮಹಿಳಾ ಸಹಕಾರ ಸಂಘ
ಮೈಸೂರು

14.05 ಲಕ್ಷ ರೂ. ಲಾಭದಲ್ಲಿ ಅಹಲ್ಯ ಮಹಿಳಾ ಸಹಕಾರ ಸಂಘ

October 3, 2018

ಕೆ.ಆರ್.ನಗರ:  ಪಟ್ಟಣದ ಅಹಲ್ಯ ಮಹಿಳಾ ಸಹಕಾರ ಸಂಘವು 14.05 ಲಕ್ಷ ರೂ.ಗಳ ಲಾಭ ದಲ್ಲಿದೆ ಎಂದು ಬ್ಯಾಂಕಿನ ಅಧ್ಯಕ್ಷೆ ಶಾಂತಮ್ಮ ವಿಶ್ವನಾಥ್ ಹೇಳಿದರು.

ಪಟ್ಟಣದ ಆರ್.ಆರ್. ಕನ್ವೆನ್ಷನ್ ಹಾಲ್ ನಲ್ಲಿ ನಡೆದ ಬ್ಯಾಂಕಿನ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬ್ಯಾಂಕ್ ಸ್ವಂತ ಕಟ್ಟಡ ನಿರ್ಮಾಣದ ಗುರಿ ಹೊಂದಿದೆ ಎಂದರು. ಸಾಲಗಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿ ಬ್ಯಾಂಕಿನ ಅಭಿವೃದ್ಧಿಗೆ ಸಹಕರಿಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ಷೇರು ದಾರರ ಸಂಖ್ಯೆಯನ್ನು ಹೆಚ್ಚಿಸಲು ಎಲ್ಲ ಸದಸ್ಯರು ಸಹಕರಿಸುವಂತೆ ಕೋರಿದರು. ಸಾಲ ಮನ್ನಾ ಮಾಡುವ ಸರ್ಕಾರ ನಿರ್ಧಾರ ಸಂತೋಷ. ಆದರೆ ಸಕಾಲದಲ್ಲಿ ಸಹಕಾರ ಬ್ಯಾಂಕ್‍ಗಳಿಗೆ ಹಣ ಪಾವತಿಸಬೇಕು ಇಲ್ಲದಿದ್ದರೆ ಸಹಕಾರ ಸಂಘಗಳು ನಡೆಸು ವುದು ಕಷ್ಟವಾಗುತ್ತದೆ ಎಂದರು.

ನವನಗರ ಬ್ಯಾಂಕ್ ಅಧ್ಯಕ್ಷ ಕೆ.ಎನ್. ಬಸಂತ್, ವಕೀಲರಾದ ಕೃಷ್ಣೇರಾಜೇ ಅರಸ್ ಮಾತನಾಡಿದರು. ಕಾರ್ಯಕ್ರಮ ದಲ್ಲಿ ಜಿ.ಪಂ. ಸದಸ್ಯ ಹಾಗೂ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಅಮಿತ್ .ವಿ.ದೇವರ ಹಟ್ಟಿ, ಬ್ಯಾಂಕಿನ ಉಪಾಧ್ಯಕ್ಷೆ ಜಯಕಾಂತ ಮ್ಮಣ್ಣಿ, ಸದಸ್ಯರಾದ ತ್ರಿಪುರಾಂಭ, ಗಾಯಿತ್ರಮ್ಮ, ಷಾಜೀದಾಖಾನಂ, ಎಂ. ಮಂಜುಳ, ಅರ್ಪಿತ ಅಮಿತ್ ದೇವರ ಹಟ್ಟಿ, ಅಡಗೂರು ಚನ್ನಬಸಪ್ಪ, ಡಿ.ಸಿ. ಕಾಂತಕುಮಾರ್, ಕೃಷ್ಣೇಅರಸ್, ಕೇಶವ್, ಪಿಗ್ಮಿ ಕಲೆಕ್ಟರ್ ರೇವಣ್ಣ, ಯಶೋದಮ್ಮ, ಜಯಮ್ಮ, ಹೇಮಕುಮಾರಿ, ಜಯಲಕ್ಮೀ, ಪ್ರತಿಮಾ ಬಿ.ಎಸ್.ಪ್ರಭಾ ಹಾಗೂ ವ್ಯವ ಸ್ಥಾಪಕರಾದ ಕೆಂಪರಾಜು, ಕ್ಯಾಷಿಯರ್ ಕರುಣಾಕರ್, ಸಿಬ್ಬಂಗಳಾದ ನಾಗರತ್ನ, ಭ್ರಮರಾಂಭ, ಶ್ರೀ ಎಂ.ಜಿ.ರೇವಣ್ಣ, ಕೆ.ಎನ್.ಲೋಕೇಶ್ ಮಾಜಿ ಪುರಸಭಾ ಅಧ್ಯಕ್ಷೆ ಭಾಗ್ಯಲಕ್ಷ್ಮೀಸುಬ್ರಮಣ್ಯ ಮತ್ತಿತ ರರು ಹಾಜರಿದ್ದರು.

Translate »