ಗಾಂಧಿ ನಾಡಲ್ಲಿ ಹುಟ್ಟಿರುವುದೇ ನಮಗೆ ಹೆಮ್ಮೆ
ಮೈಸೂರು

ಗಾಂಧಿ ನಾಡಲ್ಲಿ ಹುಟ್ಟಿರುವುದೇ ನಮಗೆ ಹೆಮ್ಮೆ

October 3, 2018

ಗಾಂಧಿ ಭವನದಲ್ಲಿ ಗಾಂಧಿ ಜಯಂತಿಯಲ್ಲಿ ಗಾಂಧೀವಾದಿ ಟಿ.ವೆಂಕಟಾಚಲಯ್ಯ ಅಭಿಮತ
ಮೈಸೂರು: ಮಹಾತ್ಮ ಗಾಂಧಿ ಹುಟ್ಟಿದ ಭಾರತದಲ್ಲಿ ಹುಟ್ಟಿದ್ದೇವೆಂಬುದೇ ನಮಗೆ ಹೆಮ್ಮೆಯ ವಿಚಾರ ಎಂದು ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ ಟಿ.ವೆಂಕಟಾಚಲಯ್ಯ ಸಂತಸದಿಂದ ಹೇಳಿದರು.

ಮೈಸೂರು ವಿವಿ ಗಾಂಧಿ ಅಧ್ಯಯನ ಕೇಂದ್ರ, ಜ್ಞಾನದೀಪ ಶಿಕ್ಷಣ ಸಂಸ್ಥೆಗಳು 150ನೇ ಗಾಂಧಿ ಜಯಂತಿ ಪ್ರಯುಕ್ತ ಮಂಗವಾರ ಏರ್ಪಡಿಸಿದ್ದ ವಿಶ್ವ ಅಹಿಂಸಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದು ಗಾಂಧಿ ಜಯಂತಿ ಜೊತೆಗೆ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಹಾಗೂ ವಿಶ್ವ ಅಹಿಂಸಾ ದಿನವನ್ನು ಆಚರಿಸಲಾಗುತ್ತಿದೆ. ಮಹಾತ್ಮ ಗಾಂಧೀಜಿಯವರು ಮಹಾ ಮಾವನ. ವಿದ್ಯಾರ್ಥಿ ದೆಸೆಯಿಂದಲೇ ಅವರು ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡಿದ್ದ ಅವರು ಎಲ್ಲ ಭಾರತೀಯರಲ್ಲೂ ರಾಷ್ಟ್ರ ಭಕ್ತ, ರಾಷ್ಟ್ರಪ್ರೇಮ ತುಂಬಿದವರು ಎಂದರು.

ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದಾನಿಲಯದ ಹಂಗಾಮಿ ಕುಲಪತಿ ಪ್ರೊ.ಆಯಿಷಾ ಎಂ.ಶರೀಪ್ ಅಧ್ಯಕ್ಷತೆ ವಹಿಸಿದ್ದರು. ಚಾಮರಾಜನಗರದ ದೀನಬಂಧು ಸಂಸ್ಥೆಯ ಕಾರ್ಯದರ್ಶಿ ಪ್ರೊ.ಜಿ.ಎಸ್.ಜಯದೇವ್, ಮೈಸೂರು ವಿವಿ ಕುಲಸಚಿವ ಪ್ರೊ.ಆರ್.ರಾಜಣ್ಣ, ಜ್ಞಾನದೀಪ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಜಿ.ಎನ್.ಶ್ರೀನಿವಾಸಮೂರ್ತಿ, ಗಾಂಧಿ ಅಧ್ಯುಯನ ಕೇಂದ್ರದ ನಿರ್ದೇಶಕ ಪ್ರೊ.ಎಂ.ಎಸ್.ಶೇಖರ್ ಇನ್ನಿತರರು ಉಪಸ್ಥಿತರಿದ್ದರು.

Translate »