ಕುಕ್ಲೂರಿನಲ್ಲಿ ಮುತ್ತಪ್ಪ ತೆರೆ ಮಹೋತ್ಸವ
ಕೊಡಗು

ಕುಕ್ಲೂರಿನಲ್ಲಿ ಮುತ್ತಪ್ಪ ತೆರೆ ಮಹೋತ್ಸವ

March 15, 2019

ವೀರಾಜಪೇಟೆ: ವೀರಾಜಪೇಟೆ ಬಳಿಯ ‘ಕುಕ್ಲೂರು ಶ್ರೀ ಮುತ್ತಪ್ಪ ದೇವರ ತೆರೆ ಮಹೋತ್ಸವ’ವನ್ನು ಎರಡು ದಿನಗಳ ಕಾಲ ಶ್ರದ್ಧ ಭಕ್ತಿಯಿಂದ ಆಚರಿಸಲಾಯಿತು. ಮಾ.13 ರಂದು ಶ್ರೀ ಮುತ್ತಪ್ಪ ವೆಳ್ಳಾಟಂನೊಂದಿಗೆ ಪ್ರಾರಂಭಗೊಂಡ ತೆರೆಮಹೋತ್ಸವವು ಶಾಸ್ತಪ್ಪ ವೆಳ್ಳಾಟಂ, ಗುಳಿಗ ಮತ್ತು ಬಸುರಿಮಲ ವೆಳ್ಳಾಟಂ ನಡೆದು. ಮಾ.14 ರಂದು ಮುಂಜಾನೆ ಶ್ರೀ ಮುತ್ತಪ್ಪನ್, ತಿರುವಪ್ಪನ್ ತೆರೆಯ ಬಳಿಕ ಶ್ರೀ ಶಾಸ್ತಪ್ಪನ್ ಮತ್ತು ಕರಿಂಗುಟ್ಟಿ ಶಾಸ್ತಪ್ಪನ ವಿಶೇಷ ತೆರೆಗಳೊಂದಿಗೆ ಮುತ್ತಪ್ಪನ ತೆರೆ ಮಹೋತ್ಸವವನ್ನು ವಿಜೃಂಬಣೆಯಿಂದ ಆಚರಿಸಲಾಯಿತು. ತೆರೆ ಮಹೋತ್ಸವದಲ್ಲಿ ಎರಡು ದಿನಗಳು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು.

Translate »