ಕುಕ್ಕೆ ದೇವಸ್ಥಾನಕ್ಕೆ ಸ್ವರ್ಣರಥ: ರಾಜಕೀಯ ಊಹಾಪೆÇೀಹಗಳಿಗೆ ಸಿಎಂ ಹೆಚ್‍ಡಿಕೆ ಸ್ಪಷ್ಟನೆ
ಮೈಸೂರು

ಕುಕ್ಕೆ ದೇವಸ್ಥಾನಕ್ಕೆ ಸ್ವರ್ಣರಥ: ರಾಜಕೀಯ ಊಹಾಪೆÇೀಹಗಳಿಗೆ ಸಿಎಂ ಹೆಚ್‍ಡಿಕೆ ಸ್ಪಷ್ಟನೆ

April 30, 2019

ಬೆಂಗಳೂರು: ಕಳೆದ 13 ವರ್ಷ ಗಳಿಂದ ನೆನೆಗುದಿಗೆ ಬಿದ್ದಿದ್ದ ಕುಕ್ಕೆ ಸುಬ್ರ ಹ್ಮಣ್ಯ ದೇವಸ್ಥಾನದ ಸ್ವರ್ಣ ರಥ ನಿರ್ಮಾಣ ವಿಚಾರವಾಗಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮರುಜೀವ ನೀಡಲು ಮುಂದಾಗುತ್ತಿದ್ದಂತೆಯೇ ಎದ್ದಿದ್ದ ಹಲವು ಊಹಾಪೆÇೀಹಗಳಿಗೆ ಅವರೇ ಖುದ್ದು ಸ್ಪಷ್ಟನೆ ನೀಡಿದ್ದಾರೆ. 2005 ಮತ್ತು 2006 ರಲ್ಲಿಯೇ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಥ ನಿರ್ಮಾಣಕ್ಕೆ ಅಂದಿನ ಸರ್ಕಾರ ಅನು ಮೋದನೆ ನೀಡಿ ಆದೇಶ ಹೊರಡಿಸಲಾಗಿ ತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇತ್ತೀ ಚೆಗೆ ಕ್ಷೇತ್ರದ ಭಕ್ತರು ತಮ್ಮ ಭೇಟಿಯಾಗಿ ಹಿಂದಿನ ರಥ ನಿರ್ಮಾಣ ಯೋಜನೆ ಯನ್ನು ಪುನರಾರಂಭಿಸುವಂತೆ ಮನವಿ ಮಾಡಿದ್ದು, ರಥ ನಿರ್ಮಾಣಕ್ಕೆ ಅಗತ್ಯವಾದ ಚಿನ್ನ ಮತ್ತು ನಿರ್ಮಾಣ ವೆಚ್ಚಗಳ ಅಂದಾಜು ಪರಿಷ್ಕರಿಸಿ ಸಚಿವ ಸಂಪುಟದಲ್ಲಿ ಪ್ರಸ್ತಾ ವನೆಯನ್ನು ಮಂಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ತಿಳಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲೊಂದು. ಅಷ್ಟೇ ಅಲ್ಲದೇ ಮುಜರಾಯಿ ಇಲಾಖೆಗೆ ದೇವ ಸ್ಥಾನದಿಂದ ಸಾಕಷ್ಟು ಆದಾಯ ಹರಿದು ಬರುತ್ತಿದೆ. 13 ವರ್ಷಗಳ ಹಿಂದೆ 2005 ರಲ್ಲಿ ಕುಮಾರಸ್ವಾಮಿ ದೇವಸ್ಥಾನಕ್ಕೆ ರಥ ನಿರ್ಮಾಣ ಮಾಡಿಕೊಡುವ ಬಗ್ಗೆ ಹರಕೆ ಮಾಡಿಕೊಂಡಿದ್ದು, 2006ರಲ್ಲಿ ಕುಮಾರ ಸ್ವಾಮಿ ಮೊದಲ ಬಾರಿಗೆ ಮುಖ್ಯಮಂತ್ರಿ ಯಾಗಿದ್ದಂತಹ ಸಂದರ್ಭದಲ್ಲಿ ಚಿನ್ನದ ರಥ ನಿರ್ಮಿಸಲು ಆದೇಶಿಸಿದ್ದರು. ಬಳಿಕ ಅದು ಸಾಕಾರಗೊಂಡಿರಲಿಲ್ಲ. ಕೆಲ ದಿನ ಗಳ ಹಿಂದೆ ರಾಜಕಾರಣಿಗಳ ಜ್ಯೋತಿಷಿ ಎಂದೇ ಖ್ಯಾತರಾಗಿರುವ ದ್ವಾರಕನಾಥ್ ಅವರು ಸರ್ಕಾರ ಸುಭದ್ರವಾಗಿ ನಡೆ ಯಲು ಹಾಗೂ ಪುತ್ರ ನಿಖಿಲ್ ಗೆಲುವಿಗೆ ಹಳೆಯ ಹರಕೆಯನ್ನು ತೀರಿಸಬೇಕು. ಕುಕ್ಕೆ ದೇವಸ್ಥಾನಕ್ಕೆ ಚಿನ್ನದ ರಥವನ್ನು ನಿರ್ಮಿಸಿ ಕೊಡಬೇಕು ಎಂದು ಸಲಹೆ ನೀಡಿದ್ದರು ಎನ್ನಲಾಗಿತ್ತು. ಕಳೆದ ಶನಿವಾರ ಕುಕ್ಕೆ ಸುಬ್ರ ಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿ ಜೊತೆ ಸಭೆ ನಡೆಸಿದ್ದ ಕುಮಾರಸ್ವಾಮಿ ರಥ ನಿರ್ಮಾಣ ಸಂಬಂಧ ಸಮಾಲೋಚನೆ ನಡೆಸಿದ್ದರು. ಸ್ವರ್ಣ ರಥ ನಿರ್ಮಾಣಕ್ಕೆ 240 ಕೆ.ಜಿ. ಚಿನ್ನದ ಅಗತ್ಯತೆಯಿದ್ದು, ಇದಕ್ಕೆ ಸುಮಾರು 85 ಕೋಟಿ ರೂ. ವೆಚ್ಚವನ್ನು ಅಂದಾಜಿಸ ಲಾಗಿದೆ. ಕುಕ್ಕೆ ದೇವಳದಲ್ಲಿ 320 ಕೋಟಿ ರೂ. ಸ್ವಂತ ನಿಧಿ ಇದ್ದು, ನಿಧಿಯಲ್ಲಿನ ಸ್ವಲ್ಪ ಭಾಗವನ್ನು ರಥ ನಿರ್ಮಾಣಕ್ಕೆ ಬಳ ಸಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದು, ಈ ಸಂಬಂಧ ಮುಜರಾಯಿ ಇಲಾಖೆ ಯಿಂದ ಸಚಿವ ಸಂಪುಟಕ್ಕೆ ಅನುಮೋದನೆ ಕಳುಹಿಸಲು ಸೂಚಿಸಿದ್ದಾರೆ. ಮೇ 6 ರಂದು ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆಯಿದ್ದು, ಸಭೆಯಲ್ಲಿ ರಥ ನಿರ್ಮಾ ಣದ ಪ್ರಸ್ತಾವನೆಗೆ ಅನುಮೋದನೆ ಸಿಗ ಲಿದೆ ಎನ್ನಲಾಗಿದೆ. ಲೋಕಸಭೆ ಚುನಾ ವಣೆ ನಡೆಯುತ್ತಿದ್ದಂತೆಯೇ ದಿಢೀರನೇ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂಗಾರದ ರಥ ನಿರ್ಮಾಣಕ್ಕೆ ಕುಮಾರಸ್ವಾಮಿ ವೇಗ ಕಲ್ಪಿಸಿರುವುದು ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಮುಖ್ಯ ಮಂತ್ರಿ ಕುಮಾರಸ್ವಾಮಿ 2005 ಮತ್ತು 2006 ರಲ್ಲಿಯೇ ರಥ ನಿರ್ಮಾಣ ಸಂಬಂಧ ಆದೇಶಿಸಲಾಗಿತ್ತು. ಇದು ಈಗಿನ ನಿರ್ಧಾರ ವಲ್ಲ. 2005 ರಲ್ಲಿಯೇ ರಾಜ್ಯ ಸರ್ಕಾರ 15 ಕೋಟಿ ರೂ. ವೆಚ್ಚದಲ್ಲಿ ಚಿನ್ನದ ರಥ ನಿರ್ಮಿಸಲು ಉದ್ದೇಶಿಸಲಾಗಿತ್ತು. ಇದ ಕ್ಕಾಗಿ ದೇವಾಲಯದಲ್ಲಿ ಲಭ್ಯವಿರುವ ಚಿನ್ನ ಬಳಸಿ ಕೊಂಡು ಉಳಿದ ಚಿನ್ನವನ್ನು ಬ್ಯಾಂಕಿನ ಮೂಲಕ ಖರೀದಿಸಲು ಸರ್ಕಾರ ಅನು ಮೋದನೆ ನೀಡಿತ್ತು. ಈ ಆದೇಶಗಳಲ್ಲಿ ರಥ ನಿರ್ಮಾಣಕ್ಕೆ ಸರ್ಕಾರದ ಅನುದಾನ ಬಳಸದೇ, ಸಾರ್ವಜನಿಕರ ದೇಣಿಗೆ ಸಂಗ್ರಹ ಹಾಗೂ ದೇವಾಲಯದ ಸಂಪನ್ಮೂಲಗಳಿಂ ದಲೇ ರಥ ನಿರ್ಮಾಣ ವೆಚ್ಚ ಭರಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದಿದ್ದಾರೆ.

Translate »