ಮೈಸೂರು, ಮಾ.5(ಪಿಎಂ)- ನಂಜನ ಗೂಡು ತಾಲೂಕಿನ ಹುಲ್ಲಹಳ್ಳಿ ಹೋಬ ಳಿಯ ಮಾದನಹಳ್ಳಿಯಲ್ಲಿ ಬಡವರಿಗೆ ಮನೆ ನಿರ್ಮಿಸಲು ಮಂಜೂರಾಗಿರುವ ಸರ್ಕಾರಿ ಭೂಮಿಯನ್ನು ಗ್ರಾಮದ ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾಮದ ನಿವಾಸಿ, ಕಬ್ಬು ಬೆಳೆ ಗಾರರ ಸಂಘದ ನಂಜನಗೂಡು ತಾಲೂಕು ಮಾಜಿ ಅಧ್ಯಕ್ಷ ಗಿರೀಶ್ ಮಾದನಹಳ್ಳಿ ಗುರು ವಾರ ಕುಟುಂಬದವರೊಂದಿಗೆ ಮೈಸೂರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮಾದನಹಳ್ಳಿಯಲ್ಲಿ 1 ಎಕರೆ 20 ಗುಂಟೆ ಭೂಮಿಯನ್ನು ಗ್ರಾಮದ ನಾಲ್ವರು ಪ್ರಭಾವಿ ಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಉಪವಿಭಾಗಾಧಿಕಾರಿ ಹಾಗೂ ತಹಸಿ ಲ್ದಾರ್ ಅವರಿಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ. ಈ ಭೂಮಿಯಲ್ಲಿ ಸರ್ಕಾರ ನಮ್ಮ ಕುಟುಂಬಕ್ಕೂ ನಿವೇಶನ ಮಂಜೂರು ಮಾಡಿ ಹಕ್ಕುಪತ್ರ ನೀಡಿದೆ. ಆದರೆ ಪ್ರಭಾವಿಗಳು ಒತ್ತುವರಿ ಮಾಡಿ ಕೊಂಡು ಬಡವರ ಮನೆ ಕಟ್ಟುವ ಕನಸಿಗೆ ಮುಳ್ಳಾಗಿದ್ದಾರೆ ಎಂದು ದೂರಿದರು.
ಗಿರೀಶ್ ಮಾದನಹಳ್ಳಿ, ಪತ್ನಿ ಲತಾ ಮಣಿ, ಇಬ್ಬರು ಮಕ್ಕಳು ಹಾಗೂ ಗ್ರಾಮದ ಹಿರಿಯರಾದ ಸಣ್ಣಮ್ಮ ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.