ಮೈಸೂರು, ಮಾ.5- ಜಿಲ್ಲಾ ಪಂಚಾ ಯತ್ ಹಾಗೂ ಆಯುಷ್ ಇಲಾಖೆ ವತಿ ಯಿಂದ ರಾಷ್ಟ್ರೀಯ ಆಯುಷ್ ಅಭಿ ಯಾನದ ಯೋಜನೆಯಡಿ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕರಿಗೆ ಎರಡು ದಿನದ ಯೋಗ ತರಬೇತಿಯನ್ನು ನಗರದ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಜಿಪಂ ಉಪಾಧ್ಯಕ್ಷೆ ಎಂ.ವಿ.ಗೌರಮ್ಮ ಸೋಮ ಶೇಖರ್ ಮಾತನಾಡಿ, ಉತ್ತಮವಾದ ಆರೋಗ್ಯ ನಿರ್ವಹಣೆಗೆ ಯೋಗವು ಸಹ ಕಾರಿಯಾಗಿದ್ದು, ಪ್ರತಿನಿತ್ಯ ಯೋಗವನ್ನು ಅಭ್ಯಾಸ ಮಾಡುವುದರಿಂದ ಯಾವುದೇ ರೋಗ ಸುಳಿಯುವುದಿಲ್ಲ ಎಂದು ಹೇಳಿದರು.
ಯೋಗಾಭ್ಯಸವು ಕೇವಲ ನಗರ ಪ್ರದೇಶ ಗಳಿಗೆ ಸೀಮಿತವಾಗಿದ್ದು, ಗ್ರಾಮೀಣ ಭಾಗದ ಮಕ್ಕಳು ಯೋಗಾಭ್ಯಾಸದ ಬಗ್ಗೆ ಆಸಕ್ತಿ ಮೂಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯೋಗ ವನ್ನು ಶಾಲೆಯಲ್ಲಿ ಅಭ್ಯಾಸ ಮಾಡಿಸಲು ದೈಹಿಕ ಶಿಕ್ಷಕರು ಮುಂದಾದರೆ ವಿದ್ಯಾರ್ಥಿ ಗಳಲ್ಲಿ ಶಿಸ್ತು, ಸಂಯಮ ಬೆಳೆಯಲು ಸಹ ಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಡಾ.ಪಾಂಡುರಂಗ ಮಾತನಾಡಿ, ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟು ವಟಿಕೆಯಲ್ಲಿ ಭಾಗವಹಿಸಲು ದೈಹಿಕ ಶಿಕ್ಷಕರ ಕರ್ತವ್ಯ ಮತ್ತು ಜವಾಬ್ದಾರಿ ಗುರುತರ ವಾದದ್ದು. ಪಠ್ಯೇತರ ಚಟುವಟಿಕೆಯಿಂದ ಮಕ್ಕಳಲ್ಲಿ ಉತ್ತಮ ಆಲೋಚನೆ, ಶಿಸ್ತು, ಸಮಯ ಪ್ರಜ್ಞೆಯು ವೃದ್ಧಿಯಾಗುವುದು. ಆದ್ದರಿಂದ ದೈಹಿಕ ಶಿಕ್ಷಕರು ತಮ್ಮ ಕರ್ತವ್ಯ ವನ್ನು ಸರಿಯಾಗಿ ನಿಭಾಯಿಸಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಉಪ ಮೇಯರ್ ಸಿ.ಶ್ರೀಧರ್, ಪಾಲಿಕೆ ಸದಸ್ಯ ರಾದ ರವೀಂದ್ರ, ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಸೀತಾಲಕ್ಷ್ಮೀ, ಡಾ.ವಿ. ಶ್ರೀಧರಮೂರ್ತಿ ಇನ್ನಿತರರು ಉಪಸ್ಥಿತರಿದ್ದರು.