ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು
ಮೈಸೂರು

ವಿದ್ಯಾರ್ಥಿಗಳು ಹೊಸ ಆಲೋಚನೆ, ಕಲಿಕೆಗೆ ಸದಾ ಉತ್ಸುಕರಾಗಿರಬೇಕು

March 6, 2020

ಮೈಸೂರು, ಮಾ.5(ಪಿಎಂ)- ಬದು ಕಿನ ಸಬಲತೆಗೆ ಪೂರಕವಾಗಿ ಹೊಸ ಆಲೋಚನೆ ಹಾಗೂ ಕಲಿಕೆಗೆ ವಿದ್ಯಾರ್ಥಿ ಗಳು ಸದಾ ಉತ್ಸುಕರಾಗಿರಬೇಕು ಎಂದು ಶ್ರೀರಾಮಕೃಷ್ಣ ವಿದ್ಯಾಶಾಲೆಯ ಸಂಯೋ ಜಕ ಸ್ವಾಮಿ ಯುಕ್ತೇಶಾನಂದಜೀ ಮಹಾ ರಾಜ್ ಮಾರ್ಗದರ್ಶನ ಮಾಡಿದರು.

ಮೈಸೂರಿನ ಎನ್‍ಐಇ ಇಂಜಿನಿಯ ರಿಂಗ್ ಕಾಲೇಜು ಹಾಗೂ ವಿದ್ಯಾರ್ಥಿ ಸಂಘಟನೆ ಜಂಟಿಯಾಗಿ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 3 ದಿನಗಳ ಟೆಕ್ನೋ-ಕಲ್ಚರಲ್ ಉತ್ಸವ `ಅರೌರ ಟೆಕ್ನಿಕ್ಸ್-2020’ಕ್ಕೆ ಕಾಲೇಜಿನ ವಜ್ರ ಮಹೋತ್ಸವ ಸಂಕೀರ್ಣ ದಲ್ಲಿ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.

ಯುವಜನ ಎಂದರೆ ಶಕ್ತಿ-ಸಾಮಥ್ರ್ಯ, ಉತ್ಸಾಹದ ಸಂಕೇತ. ವಯಸ್ಸಿನಿಂದಷ್ಟೇ ಯುವಜನ ಎನ್ನಲಾಗದು. ಮನಸ್ಥಿತಿಯಲ್ಲಿ ಯುವ ಚಿಲುಮೆ ಇಲ್ಲವಾದರೆ ಪ್ರಯೋ ಜನವಿಲ್ಲ. ಸದಾ ಹೊಸತು ಕಲಿಯುವ ಉತ್ಸಾಹ ಯುವ ಮನಸ್ಸಿನ ಸಂಕೇತ ಎಂದು ವ್ಯಾಖ್ಯಾನಿಸಿದರು.

ಶಿಕ್ಷಣ ಒಂದು ಮಂತ್ರದಂತೆ ಎಂದು ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು. ಇಂದಿನ ಯುವಜನರು ಶಿಸ್ತು ಬೆಳೆಸಿಕೊಳ್ಳ ಬೇಕು. ಅಂಕಗಳಿಗಿಂತ ಜ್ಞಾನ ಮುಖ್ಯ. ನಡತೆ ಚೆನ್ನಾಗಿದ್ದರೆ ಎಲ್ಲಾದರೂ ಬದುಕು ನಡೆಸಬಹುದು ಎಂದು ಹೇಳಿದರು.

ಎನ್‍ಐಇ-ಎಂಸಿ ನಿರ್ದೇಶಕ ಆರ್. ಅಶೋಕ್ ಆನಂದ್, ಕಾಲೇಜಿನ ಪ್ರಾಂಶು ಪಾಲರಾದ ರೋಹಿಣಿ ನಾಗಪದ್ಮಾ, ವಿದ್ಯಾರ್ಥಿ ಕ್ಷೇಮಪಾಲನ ಡೀನ್ ಅರ ವಿಂದರಾವ್ ಎಂ.ಯದವಾಡ ಮತ್ತಿತರರಿ ದ್ದರು. ಉತ್ಸವದಲ್ಲಿ ಬ್ಯಾಟಲ್ ಆಫ್ ಬ್ಯಾಂಡ್ಸ್, ಕನ್ನಡ ದಿನ, ಛಾಯಾಚಿತ್ರ ಪ್ರದರ್ಶನ, ಸಾಂಸ್ಕøತಿಕ ಕಾರ್ಯಕ್ರಮ, ಫ್ಯಾಷನ್ ಶೋ ನಡೆಯಲಿವೆ. ವಿವಿಧ ಇಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿ ಗಳು ಪಾಲ್ಗೊಳ್ಳಲಿದ್ದಾರೆ.

Translate »