ಬಳಕೆಯಾಗದ ಕೈಗಾರಿಕಾ ಭೂಮಿ, ನಿವೇಶನಗಳ ಹಿಂಪಡೆಯಲು ಸರ್ಕಾರ ನಿರ್ಧಾರ
ಮೈಸೂರು

ಬಳಕೆಯಾಗದ ಕೈಗಾರಿಕಾ ಭೂಮಿ, ನಿವೇಶನಗಳ ಹಿಂಪಡೆಯಲು ಸರ್ಕಾರ ನಿರ್ಧಾರ

January 19, 2020

ಮೈಸೂರು, ಜ.18 (ಆರ್‍ಕೆ)- ನಿಗದಿತ ಉದ್ದೇ ಶಕ್ಕೆ, ನಿಗದಿತ ಸಮಯಕ್ಕೆ ಬಳಸದೇ ಖಾಲಿ ಬಿಟ್ಟಿರುವ ಕೈಗಾರಿಕಾ ಬಡಾವಣೆಗಳ ಭೂಮಿ ಹಾಗೂ ನಿವೇ ಶನಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಭವಿಷ್ಯದಲ್ಲಿ ಹೂಡಿಕೆಗಾಗಿ ಲ್ಯಾಂಡ್ ಬ್ಯಾಂಕ್ ಸೃಷ್ಟಿ ಸಲು ಯೋಜಿಸಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಮೈಸೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉದ್ದೇಶಿತ ಕೈಗಾರಿಕೆಗಳನ್ನು ಸ್ಥಾಪಿಸದೇ ಹಲವು ವರ್ಷಗಳಿಂದ ಖಾಲಿ ಬಿಟ್ಟಿರುವ ಭೂಮಿ, ನಿವೇ ಶನಗಳನ್ನು ವಾಪಸ್ ಪಡೆಯಲು ಸಿದ್ಧತೆ ನಡೆಸಿದೆ.

ನವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡಿ, ಉದ್ಯಮ ಸ್ಥಾಪಿಸಿ, ಉದ್ಯೋಗ ಸೃಷ್ಟಿಸುವ ಸಲುವಾಗಿ ಬೃಹತ್ ಪ್ರಮಾಣದ ಲ್ಯಾಂಡ್ ಬ್ಯಾಂಕ್ ಸೃಷ್ಟಿಸಿ ಕೈಗಾರಿಕಾ ನಿವೇಶನ ಒದಗಿಸಲು ಶೀಘ್ರ ಹೊಸ ಕೈಗಾರಿಕಾ ನೀತಿ ಜಾರಿ ಮಾಡಲು ತಯಾರಿ ನಡೆದಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶುಕ್ರವಾರ ಬೆಂಗಳೂರಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೈಗಾರಿಕೆ ಸ್ಥಾಪಿಸಲೆಂದು ಉದ್ಯಮಿಗಳು ಹಾಗೂ ಖಾಸಗಿ ಕಂಪನಿಗಳನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ ಆಯ್ಕೆ ಮಾಡಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ನಿಯಮಾನು ಸಾರ ಹಂಚಿಕೆ ಮಾಡಲಾಗಿದೆ.

ನಿವೇಶನ ಹಂಚಿಕೆಯಾದ ಎರಡು ವರ್ಷದೊಳ ಗಾಗಿ ಉದ್ದೇಶಿತ ನಕ್ಷೆ ಅನುಮೋದನೆ ಪಡೆದು ಉದ್ಯಮ ಸ್ಥಾಪನೆ ಮಾಡಬೇಕು. 10 ವರ್ಷದವರೆಗೆ ಸ್ವತ್ತನ್ನು ಪರ ಭಾರೆ ಮಾಡಬಾರದು ಎಂಬ ಷರತ್ತು ವಿಧಿಸಲಾಗಿದೆ ಯಾದರೂ, ಬಹುತೇಕ ಮಂದಿ ನಿವೇಶನದಲ್ಲಿ ಕಟ್ಟಡ ವನ್ನೇ ನಿರ್ಮಿಸದೇ ಹತ್ತಾರು ವರ್ಷಗಳ ಕಾಲ ಖಾಲಿ ಬಿಟ್ಟಿರುವುದು ಸಮೀಕ್ಷೆಯಿಂದ ಕಂಡು ಬಂದಿದ್ದು, ಹಂಚಿಕೆ ನಿಯಮ ಮತ್ತು ಉದ್ದೇಶ ಸಂಪೂರ್ಣವಾಗಿ ಉಲ್ಲಂ ಘನೆಯಾಗಿರುವುದು ತಿಳಿದು ಬಂದಿದೆ.

ಅಂತಹ ನಿವೇಶನಗಳನ್ನು ವಾಪಸ್ ಪಡೆದು, ರಾಜ್ಯದಾದ್ಯಂತ 30,000 ಎಕರೆ ಪ್ರದೇಶವನ್ನು ಲ್ಯಾಂಡ್ ಬ್ಯಾಂಕ್ ಸ್ಥಾಪಿಸಲು ಗುರ್ತಿಸಲಾಗಿದ್ದು, 12,000 ಎಕರೆ ಭೂಮಿ ಸ್ವಾಧೀನಪಡಿಸಿಕೊಳ್ಳಲು ಅಧಿಸೂಚನೆ ಸಹ ಹೊರಡಿಸಲಾಗಿದೆ. ಬೆಂಗಳೂರಲ್ಲಿ 2020ರ ನವೆಂಬರ್ 3ರಿಂದ 5ರವರೆಗೆ ಬೆಂಗಳೂರಲ್ಲಿ ಆಯೋ ಜಿಸಿರುವ ಜಾಗತಿಕ ಹೂಡಿಕೆದಾರರ ಸಮ್ಮೇಳನದಲ್ಲಿ ಪ್ರಸ್ತಾವನೆ ಸಲ್ಲಿಸುವ ಉದ್ದೇಶದಿಂದ ಭೂಮಿ ಸಿದ್ಧ ಪಡಿಸುವ ಸಲುವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾ ಗಿದೆ. ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರ್ಗಿ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಲ್ಯಾಂಡ್ ಸೃಷ್ಟಿಸುವ ಸಲುವಾಗಿ ಖಾಲಿ ಉಳಿದಿರುವ ಕೈಗಾರಿಕೆಗಳನ್ನು ಮರಳಿ ಪಡೆಯಲು ಇಲಾಖೆ ನಿರ್ಧರಿಸಿದೆ.

Translate »