ಸರ್ಕಾರಗಳು ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡಿ ದೇಶ ನಾಶ ಮಾಡಲು ಮುಂದಾಗಿವೆ
ಮೈಸೂರು

ಸರ್ಕಾರಗಳು ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ನೀಡಿ ದೇಶ ನಾಶ ಮಾಡಲು ಮುಂದಾಗಿವೆ

July 9, 2019

ಮೈಸೂರು,ಜು.8(ಎಂಟಿವೈ)-ಕೇಂದ್ರ ಹಾಗೂ ರಾಜ್ಯವಾಳುತ್ತಿರುವ ಸರ್ಕಾರಗಳು ಇತರ ಉದ್ದೇಶಗಳಿಗೆ ಕೃಷಿ ಭೂಮಿಯನ್ನು ನೀಡಿ ದೇಶ ನಾಶ ಮಾಡಲು ಮುಂದಾ ಗಿವೆ ಎಂದು ಟಿಯುಸಿಐ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಆರೋಪಿಸಿದ್ದಾರೆ.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಕರ್ನಾಟಕ ರೈತ ಸಂಘ ಜಿಲ್ಲಾ ಸಮಿತಿ ಸೋಮವಾರ ಆಯೋಜಿಸಿದ್ದ `ದೇಶದ ಕೃಷಿ ಬಿಕ್ಕಟ್ಟಿಗೆ ಕಾರಣಗಳು ಮತ್ತು ಪರಿಹಾರಗಳು’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತ ನಾಡಿ ಅವರು, ಬಂಡವಾಳ ಹಂಚಿಕೆ ಯಾದರೆ ಎಲ್ಲರೂ ಸಮಾನರಾಗುತ್ತಾರೆ ಎಂಬ ಹಿಡನ್ ಅಜೆಂಡಾದಿಂದ ಕೃಷಿ ಭೂಮಿ ಎಂಬ ಪರಿಕಲ್ಪನೆಯನ್ನೇ ತೆಗೆದು ಹಾಕುವ ಪ್ರಯತ್ನ ನಡೆಯುತ್ತಿದೆ. 2013ರ ಭೂ ಸ್ವಾಧೀನ ಕಾಯಿದೆ ಬದಲಾಯಿಸಿ ಈಗ ಬಂಡವಾಳಶಾಹಿಗಳ ಪರವಾಗಿ ಕಾಯಿದೆ ತಂದಿದ್ದಾರೆ. ಕೃಷಿ ಭೂಮಿಯನ್ನು ಸರ್ಕಾರವೇ ಪಡೆದು ಬಂಡವಾಳಶಾಹಿ ಗಳಿಗೆ ನೀಡಲು ಮುಂದೆ ಬಂದಿದೆ ಎಂದರು.

ತಂತ್ರe್ಞÁನ, ಮಾರುಕಟ್ಟೆ ಬಳಸಿಕೊಂಡು ಸರ್ಕಾರಗಳು ಕೃಷಿ ಭೂಮಿ ಹಾಳು ಮಾಡುತ್ತಿವೆ. ಮನುಷ್ಯನಿಗೆ ಜೀವನ ಖಾತ್ರಿ ನೀಡಿದ್ದೆ ಕೃಷಿ ಉದ್ಯೋಗ. ಆರ್‍ಎಸ್‍ಎಸ್ ಹೇಳುವ ರೀತಿ ಪಶು ದೇವರಲ್ಲ. ಆದರೆ ಕೃಷಿಗೆ ಬಳಕೆಯಾಗಿ ಮನುಷ್ಯನಿಗೆ ಜೀವನ ಕಟ್ಟಿಕೊಟ್ಟಿದ್ದ ಕ್ಕಾಗಿ ಕಾಮಧೇನುವಾಯಿತು ಎಂದರು.

ವಿಚಾರ ಮಂಡಿಸಿದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಠಾಕೂರ್, ಭಾರತದ ಕೃಷಿ ಆಳವಾದ ಬಿಕ್ಕಟ್ಟು ಎದುರಿ ಸುತ್ತಿದೆ. ಕೆಲವು ದಶಕಗಳಲ್ಲಿ 6 ಲಕ್ಷಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ದೇಶದ ಶೇ.45 ರಷ್ಟು ಜನ ರೈತಾಪಿ ವರ್ಗವು ಯಾವುದೇ ರೀತಿಯ ಲಾಭದಾ ಯಕವಿಲ್ಲದೆ ಕೃಷಿ ಮಾಡುತ್ತಿದ್ದು, ತಮ್ಮ ಜೀವನಕ್ಕಾಗಿ ಬೇರೆ ಬೇರೆ ಉದ್ಯೋಗ ಗಳನ್ನೂ ಕಂಡುಕೊಂಡಿದ್ದಾರೆ. ಈ ವಿದ್ಯ ಮಾನಗಳು ಸಂಭವಿಸಲು ಸರ್ಕಾರ ಜಾರಿ ಮಾಡಿದ ನೀತಿಗಳೆ ನೇರ ಕಾರಣ. ಇತ್ತೀ ಚೆಗೆ ಬಜೆಟ್ ಮಂಡಿಸಿದ ಮಂತ್ರಿ ಬಡವ ಮತ್ತು ರೈತ ಅಂತ ಹೇಳಿದರು. ಯಾಕೆಂ ದರೆ ಬಜೆಟ್‍ನಲ್ಲಿ ಬಡವ, ರೈತರಿಗೆ ಯಾವುದೇ ಕಾರ್ಯಕ್ರಮಗಳಿಲ್ಲದ್ದರಿಂದ ಅವರ ಹೆಸ ರೇಳಿದ್ದಾರೆ. ಬಜೆಟ್‍ನ ಬಟ್ಟೆ ಬದಲಾಗಿದೆ ಹೊರತು ಬಂಡವಾಳಶಾಹಿಯ ಧೋರಣೆ ಬದಲಾಗಿಲ್ಲ ಎಂದರು.

ಕರ್ನಾಟಕ ರೈತ ಸಂಘದ ಅಧ್ಯಕ್ಷ ಡಿ.ಎಚ್. ಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ಚಿಂತಕ ನಾ. ದಿವಾಕರ್, ರೈತ ಮುಖಂಡ ಜೋಗನಹಳ್ಳಿ ಗುರುಮೂರ್ತಿ, ಪತ್ರಕರ್ತ ಅಯ್ಯಪ್ಪ ಹೂಗಾರ್ ವಿಚಾರ ಮಂಡಿಸಿದರು.

Translate »