ಮೈಸೂರು ವಿವಿ ಪ್ರತಿಷ್ಠಿತ ಯುವರಾಜ ಕಾಲೇಜಲ್ಲಿ ಪದವಿ ಪ್ರದಾನ
ಮೈಸೂರು

ಮೈಸೂರು ವಿವಿ ಪ್ರತಿಷ್ಠಿತ ಯುವರಾಜ ಕಾಲೇಜಲ್ಲಿ ಪದವಿ ಪ್ರದಾನ

April 26, 2019

ಮೈಸೂರು: ಮೈಸೂರು ವಿವಿ ಯುವರಾಜ ಕಾಲೇಜಿನ 6ನೇ ಪದವಿ ಪ್ರದಾನ ಸಮಾರಂಭದಲ್ಲಿ ಚಿನ್ನದ ಪದಕ ಹಾಗೂ ದತ್ತಿ ಬಹುಮಾನ ಪಡೆದ 13 ಮಂದಿ ಸೇರಿದಂತೆ ಒಟ್ಟು 706 ವಿದ್ಯಾರ್ಥಿ ಗಳು ವಿವಿಧ ಪದವಿಗಳನ್ನು ಸ್ವೀಕರಿಸಿದರು.

ಕಾಲೇಜಿನ ಅಮೃತ ಮಹೋತ್ಸವ ಸಭಾಂ ಗಣದಲ್ಲಿ ಗುರುವಾರ ಏರ್ಪಡಿಸಿದ್ದ ಪದವಿ ಪ್ರದಾನ ಸಮಾರಂಭದಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್) ಗೌರವ ಪ್ರಾಧ್ಯಾಪಕ ಪ್ರೊ.ಕೆ.ಜೆ.ರಾವ್ ಪದವಿ ಪ್ರದಾನ ಮಾಡಿದರು.

ಬಳಿಕ ಮಾತನಾಡಿದ ಅವರು, ಪ್ರಸ್ತುತ ಇಡೀ ವಿಶ್ವವೇ ವಿಜ್ಞಾನ ಮತ್ತು ತಂತ್ರ ಜ್ಞಾನದ ಬಲದಿಂದ ಉನ್ನತ ಬದಲಾ ವಣೆ ಕಾಣುತ್ತಿದ್ದು, ವಿಜ್ಞಾನ-ತಂತ್ರಜ್ಞಾನದ ಪ್ರಗತಿಯಿಂದ ದೇಶದ ಅಭಿವೃದ್ಧಿ ಸಾಧ್ಯ. ಭಾರತದಲ್ಲಿ ಜನಸಂಖ್ಯೆ ಸ್ಫೋಟದಿಂದ ಹೊಸ ಹೊಸ ಸವಾಲುಗಳು ಸೃಷ್ಟಿಯಾಗು ತ್ತಿವೆ. ಸಮೀಕ್ಷೆ ಪ್ರಕಾರ ದೇಶದಲ್ಲಿ ಇಂದು ಶೇ.74ರಷ್ಟು ಮಾತ್ರವೇ ಸಾಕ್ಷರತೆ ಇದೆ ಎಂದು ವಿಷಾದಿಸಿದರು.

ಭಾರತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಉತ್ಕøಷ್ಟ ಸಂಶೋಧನೆಗಳಾ ಗುತ್ತಿವೆ. ಪ್ರಸ್ತುತ ವಿಶ್ವದಲ್ಲಿ ಗುರುತ್ವಾಕರ್ಷ ಣೆಗೆ ಸಂಬಂಧಿಸಿದ ಬ್ಲಾಕ್ ಹೋಲ್ ಅಸ್ತಿತ್ವ ಕುರಿತು ಸಂಶೋಧನೆಗಳಾಗುತ್ತಿವೆ. ಈ ಕುರಿತು ಹಿಂದೆಯೇ ಭಾರತದ ಭೌತ ವಿಜ್ಞಾನಿ ಪ್ರೊ. ಎಸ್.ಚಂದ್ರಶೇಖರ್ ವಿಚಾರ ಮಂಡಿಸಿದ್ದರು ಎಂಬುದು ಹೆಮ್ಮೆಯ ಸಂಗತಿ. ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಸಂಶೋಧನೆಗಳಲ್ಲೂ ದೇಶ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿ ಸಿದೆ. ಮಂಗಳಯಾನ, ಚಂದ್ರಯಾನ ಅಷ್ಟೇ ಅಲ್ಲದೇ, 100ಕ್ಕೂ ಹೆಚ್ಚು ಉಪ ಗ್ರಹಗಳನ್ನು ಒಂದೇ ಬಾರಿಗೆ ಉಡಾವಣೆ ಮಾಡುವ ಮೂಲಕ ದಾಖಲೆ ನಿರ್ಮಿ ಸಿದೆ ಎಂದು ತಿಳಿಸಿದರು.

ಜೀವ ವಿಜ್ಞಾನ ಕ್ಷೇತ್ರದಲ್ಲಿ ಭಾರತದ ವಿಜ್ಞಾನಿ ಪ್ರೊ.ವೆಂಕಟರಾಮನ್ ರಾಮ ಕೃಷ್ಣನ್ ಸಂಶೋಧನೆ ನಡೆಸಿ ನೊಬೆಲ್ ಪ್ರಶಸ್ತಿ ವಿಜೇತರಾಗಿದ್ದಾರೆ. ವಿಜ್ಞಾನ ಕ್ಷೇತ್ರಕ್ಕೆ ಇದೂ ಒಂದು ಮಹತ್ವದ ಕೊಡುಗೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೆಲ್ಲಾ ಬೆಳವಣಿಗೆಯಾಗಿದೆ. ಆದರೆ ಭವಿಷ್ಯದಲ್ಲಿ ಇಡೀ ವಿಶ್ವವೇ ಅನಿರೀಕ್ಷಿತ ಸವಾಲುಗಳನ್ನು ಎದುರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗಾಗಲೇ ಹವಾಮಾನ ವೈಪರೀತ್ಯ ದಿಂದ ಜಾಗತಿಕ ತಾಪಮಾನ ಸಮಸ್ಯೆ ದೊಡ್ಡ ಸವಾಲಾಗಿದೆ. ಇದು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಸಾಗಿದೆ. ಇದರಿಂದ ಹಿಮಾಲಯ ಪರ್ವತಗಳು ಕರಗುತ್ತಿವೆ. ಸಮುದ್ರದಲ್ಲಿ ನೀರಿನ ಮಟ್ಟ ಹೆಚ್ಚುತ್ತಿದ್ದು, ಅರಣ್ಯಗಳಲ್ಲಿ ಕಾಡ್ಗಿಚ್ಚು ಕಾಣಿಸಿಕೊಳ್ಳುತ್ತಿದೆ. ಸಮಸ್ಯೆ ನಿರ್ವಹಣೆಗೆ ವಿಜ್ಞಾನಿಗಳು ಮತ್ತು ತಂತ್ರಜ್ಞರು ಹೆಚ್ಚು ಕಾರ್ಯೋನ್ಮುಖ ರಾಗಬೇಕು ಎಂದು ಎಚ್ಚರಿಸಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಚಂದ್ರ, ಶುಕ್ರ ಗ್ರಹಗಳೆಡೆಗೆ ಸ್ಥಳಾಂತರ ಆಗುವ ಬಗ್ಗೆ ಸಂಶೋಧಿಸುವ ಬದಲು ಭೂಮಿಯನ್ನು ಉಳಿಸಿಕೊಳ್ಳುವ ಬಗ್ಗೆ ಚಿಂತನೆಗಳು ನಡೆಯಬೇಕಿದೆ. ಜಾಣ್ಮೆ ಯಿಂದ ಭೂ ಸಂಪನ್ಮೂಲ ಬಳಸುವುದು, ಜನಸಂಖ್ಯಾ ಸ್ಫೋಟ ತಡೆಗಟ್ಟುವ ಕೆಲಸ ಆಗಬೇಕು. ಪ್ರಸ್ತುತ ವಿಶ್ವದಲ್ಲಿ ತಲೆ ದೋರಿರುವ ಸಮಸ್ಯೆಗಳನ್ನು ವೈಜ್ಞಾನಿಕ ಮತ್ತು ನೈತಿಕ ವಿಧಾನಗಳ ಮೂಲಕ ನಿರ್ವಹಿಸುವ ಹೊಣೆ ಹೊತ್ತುಕೊಳ್ಳ ಬೇಕಿದೆ ಎಂದು ತಿಳಿಸಿದರು.

ಪದವೀಧರರಾಗಿ ಯಾವುದೇ ಕ್ಷೇತ್ರದಲ್ಲಿ ಮುಂದುವರಿಯಿರಿ. ಆದರೆ, ನೀವು ಆಯ್ದುಕೊಳ್ಳುವ ವೃತ್ತಿ ಜೀವನದಲ್ಲಿ ಸಮರ್ಪಣಾ ಮನೋಭಾವದಿಂದ ತೊಡ ಗಿಸಿಕೊಳ್ಳಬೇಕು. ಆ ಮೂಲಕ ಯಶಸ್ಸು ಕಂಡಲ್ಲಿ ದೇಶವೇ ನಿಮ್ಮ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿ ಹೇಳಿದರು.

Translate »