ಮೈಸೂರಿಂದ ಬೆಂಗಳೂರಿಗೆ ಟಿಬೆಟಿಯನ್ನರ `ಶಾಂತಿಗಾಗಿ ಪಾದಯಾತ್ರೆ’
ಮೈಸೂರು

ಮೈಸೂರಿಂದ ಬೆಂಗಳೂರಿಗೆ ಟಿಬೆಟಿಯನ್ನರ `ಶಾಂತಿಗಾಗಿ ಪಾದಯಾತ್ರೆ’

April 26, 2019

ಮೈಸೂರು: – ಟಿಬೆಟಿಯನ್ ಹನ್ನೊಂದನೇ ಪಂಚೆನ್ ಲಾಮಾ ಮುಕ್ತಗೊಳಿಸಲು ಆಗ್ರಹಿಸಿ ಮೈಸೂರಿನಿಂದ ಬೆಂಗಳೂರಿಗೆ ಟಿಬೆಟಿ ಯನ್ನರು ಕೈಗೊಂಡಿರುವ `ಶಾಂತಿಗಾಗಿ ಪಾದಯಾತ್ರೆ’ಗೆ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್, ಮೇಯರ್ ಪುಷ್ಪ ಲತಾ ಜಗನ್ನಾಥ್ ಗುರುವಾರ ಮೈಸೂ ರಿನ ಅರಮನೆ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಸ್.ಎ.ರಾಮದಾಸ್, ಟಿಬೆಟಿಯನ್ ಬೌದ್ಧ ಧರ್ಮದ ಪ್ರಮುಖ ನಾಯಕ 11ನೇ ಪಂಚೆನ್ ಲಾಮಾರ 30ನೇ ಹುಟ್ಟು ಹಬ್ಬದ ಸಂದರ್ಭದಂದು ಅವರ ಆಶೀ ರ್ವಾದ ಪಡೆಯಬೇಕಾಗಿತ್ತು. ಆದರೆ ಅವರ ಅನುಪಸ್ಥಿತಿಯಿಂದ ಟಿಬೆಟಿಯನ್ನರು ನೋವು ಅನುಭವಿಸುತ್ತಿದ್ದಾರೆ. ಅವರ ನೋವಿನಲ್ಲಿ ನಾವೂ ಜೊತೆಯಾಗಿದ್ದೇವೆ. ಅವರ ಹೋರಾಟ ಕೇವಲ ಧರ್ಮದ ಹೋರಾಟ ವಾಗಿರದೆ ಮನು ಕುಲದ ಹೋರಾಟ. ಮಾನವೀಯತೆಯ ವ್ಯವಸ್ಥೆಯಾಗಬೇಕಿದೆ. ನಿಮ್ಮೊಂದಿಗೆ ನಾವೂ ಇದ್ದೇವೆ ಎಂದು ಟಿಬೆಟಿಯನ್ನರಿಗೆ ಧೈರ್ಯ ತುಂಬಿದರು.

ಪಂಚೆನ್ ಲಾಮಾರನ್ನು ಸ್ವತಂತ್ರಗೊಳಿ ಸುವಂತೆ ಮನವಿ ಮಾಡಲು ಟಿಬೆಟಿ ಯನ್ನರು ಕೈಗೊಂಡಿರುವ ಮೈಸೂರು-ಬೆಂಗಳೂರು ಶಾಂತಿಗಾಗಿ ಪಾದಯಾತ್ರೆ ಯಶಸ್ವಿಯಾಗಲಿ. ಆದಷ್ಟು ಬೇಗ ಪಂಚೆನ್ ಲಾಮಾರನ್ನು ಕಂಡು ಆಶೀರ್ವಾದ ಪಡೆ ಯುವಂತಾಗಲಿ ಎಂದು ಶುಭ ಹಾರೈಸಿ ದರು. ಶ್ರೀಕೃಷ್ಣ ಪರಮಾತ್ಮ ಜೈಲಿನಲ್ಲೇ ಹುಟ್ಟಿದ್ದರೂ ಅವರು ಪ್ರಪಂಚಕ್ಕೆ ಏನಾ ದರು ಎಂಬುದು ಎಲ್ಲರಿಗೂ ತಿಳಿದ ವಿಚಾ ರವೇ ಆಗಿದೆ. ಅದೇ ರೀತಿ ಪಂಚೆನ್ ಲಾಮಾ ಸಹ ಇಂದು ಜೈಲಿನಲ್ಲಿದ್ದರೂ ಅವರ ಶಕ್ತಿ ಕುಂದದೆ, ಒಂದಲ್ಲ ಒಂದು ದಿನ ಪ್ರಪಂಚಕ್ಕೆ ಮೇರು ವ್ಯಕ್ತಿತ್ವವುಳ್ಳ ಸಿದ್ಧಿಪುರುಷರಾಗಿ ಎಲ್ಲೆಡೆ ಅವರ ವ್ಯಕ್ತಿತ್ವ ಬೆಳಗಲಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮೈಸೂರಿನ ಸೇಫ್ ವೀಲ್ಸ್‍ನ ಬಿ.ಎಸ್.ಪ್ರಶಾಂತ್, ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಖ್ಯಾತ ಉದ್ಯಮಿ ಅರಸು ಇನ್ನಿತರರು ಉಪಸ್ಥಿತರಿದ್ದರು.

Translate »