ನಾಟಕ, ಕೃತಿಗಳಲ್ಲಿ ಭಾವುಕತೆಗೆ ಹೆಚ್ಚಿನ ಆದ್ಯತೆ
ಮೈಸೂರು

ನಾಟಕ, ಕೃತಿಗಳಲ್ಲಿ ಭಾವುಕತೆಗೆ ಹೆಚ್ಚಿನ ಆದ್ಯತೆ

June 24, 2019

ಮೈಸೂರು,ಜೂ.23(ಎಂಟಿವೈ)-ನಾಟಕ ಮತ್ತು ಕೃತಿಗಳಲ್ಲಿ ಭಾವುಕತೆಯನ್ನು ಬೌದ್ಧಿಕತೆ ಕಡೆಗೆ ಕೊಂಡೊಯ್ಯುವುದರಿಂದ ರಂಗಭೂಮಿ ಮತ್ತು ಸಾಹಿತ್ಯ ಕ್ಷೇತ್ರ ವಿಸ್ತಾರ ಗೊಳ್ಳುತ್ತದೆ ಎಂದು ಶಾರದಾ ವಿಲಾಸ ಬಿ.ಎಡ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಹೆಚ್.ಎಸ್.ಉಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಬಲ್ಲಾಳ್ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧವಿಹಾರದಲ್ಲಿ ಭಾನುವಾರ ಮಹಿಮಾ ಪ್ರಕಾಶನ ಸಂಸ್ಥೆ ಆಯೋಜಿ ಸಿದ್ದ ಪ್ರೊ. ಜಿ.ಚಂದ್ರಶೇಖರ್ ಕನ್ನಡಕ್ಕೆ ಅನುವಾದಿಸಿರುವ ನಾಟಕ `ಮಹಾ ಪ್ರಯಾಣ’ ಕೃತಿ ಬಿಡುಗಡೆ ಕಾರ್ಯಕ್ರಮ ದಲ್ಲಿ ಕೃತಿ ಕುರಿತು ಮಾತನಾಡಿದರು. ಮೈಸೂರಿನಲ್ಲಿ ಕಳೆದ 6 ತಿಂಗಳ ಹಿಂದೆ ನಡೆದ ಬರಹಗಾರರ ಕಮ್ಮಟದಲ್ಲಿ ವಿಜ್ಞಾನ ಕುರಿತು ನಾಟಕ ಬರೆಯ ಬಹುದೇ ಎಂಬ ವಿಚಾರ ಚರ್ಚೆಯಾಯಿತು. ಇದು ವರೆಗೆ ಪುರಾಣ ಮತ್ತು ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ನಾಟಕಗಳನ್ನು ರಚಿಸಲಾಗಿದೆ. ಇದರಲ್ಲಿ ಭಾವುಕತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬದಲಾವಣೆ ತರುವ ನಿಟ್ಟಿನಲ್ಲಿ ಯುವ ಬರಹಗಾರರು ವಿಜ್ಞಾನ ವಿಷಯವನ್ನು ನಾಟಕದಲ್ಲಿ ಅಳ ವಡಿಸಿಕೊಳ್ಳುವುದಕ್ಕೆ ಆಸಕ್ತಿ ವಹಿಸುತ್ತಿರು ವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ನಾಟಕ ಮತ್ತು ಕೃತಿಗಳಲ್ಲಿ ಭಾವುಕ ಅಂಶ ಕಡಿಮೆಗೊಳಿಸಿ ಬೌದ್ಧಿಕ ಅಂಶ ಹೆಚ್ಚಿಸುವ ಅಗತ್ಯವಿದೆ. ಭಾವುಕತೆಯನ್ನು ಬೌದ್ಧಿಕತೆ ಯೆಡೆಗೆ ಕೊಂಡೊಯ್ದಾಗ ಮಾತ್ರ ರಂಗ ಭೂಮಿ ಮತ್ತು ಸಾಹಿತ್ಯ ಕ್ಷೇತ್ರ ವಿಸ್ತಾರ ಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ. `ಮಹಾ ಪ್ರಯಾಣ’ ಕೃತಿಯನ್ನು ಹಿಂದಿ ಭಾಷೆ ಯಲ್ಲಿ ಡಾ. ರಾಜೇಂದ್ರ ಮೋಹನ್ ಭಟ್ನಾ ಗರ್ ಸೊಗಸಾಗಿ ರಚಿಸಿದ್ದಾರೆ. ಅದನ್ನು ಕನ್ನಡಕ್ಕೆ ಪ್ರೊ. ಜಿ.ಚಂದ್ರಶೇಖರ್ ಅವರು ಸೊಗಸಾಗಿ ಅನುವಾದಗೊಳಿಸಿದ್ದಾರೆ ಎಂದು ಶ್ಲಾಘಿಸಿದರು.

ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ಮಾತನಾಡಿ, ಬುದ್ಧನ ಬಗ್ಗೆ ಚಿಂತನೆ ಮಾಡುವವರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ 40-50 ವರ್ಷದ ಹಿಂದೆ ಇದ್ದ ಧಾಟಿ ಯಲ್ಲಿ ಮಹಾ ಪ್ರಯಾಣ ಕೃತಿ ಬರೆದಿರು ವುದು ಶ್ಲಾಘನೀಯ. ಇದರಿಂದ ಉತ್ತಮ ವಾದ ನಾಟಕವನ್ನು ಪ್ರದರ್ಶಿಸ ಬಹುದಾಗಿದೆ. ಬುದ್ಧನ ಮಾತುಗಳನ್ನು ಯಶೋಧರೆಯ ಮೂಲಕ ಹೇಳಿಸಿದಂತಿ ರುವ ಈ ನಾಟಕ ಜನರ ಮನ ಮುಟ್ಟಲಿದೆ. ಬುದ್ಧ ಮದುವೆಯಾಗಿ ಮಗು ಜನಿಸಿದ ನಂತರ ಮನೆ ಬಿಟ್ಟು ಹೋದ. ಈ ವಿಚಾರವೇ ಎಲ್ಲರ ಚರ್ಚೆಗೆ ಬಂದಿದೆ. ಆದರೆ ಬುದ್ಧ ತಪ್ಪಸ್ಸಿಗೆ ತೆರಳಿದ ಸಂಗತಿ ಯನ್ನು ಯಾರೂ ಅವಲೋಕಿಸುವುದಿಲ್ಲ. ದೊಡ್ಡ ಆಧ್ಯಾತ್ಮದ ಸಾಧನೆ ಮಾಡಿದ್ದು ಗಮ ನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು.

ಕೃತಿಯನ್ನು ವಿಶ್ವ ಮೈತ್ರಿ ಬುದ್ಧವಿಹಾ ರದ ಕಲ್ಯಾಣಸಿರಿ ಭಂತೇಜಿ ಬಿಡುಗಡೆ ಮಾಡಿ ಶುಭ ಕೋರಿದರು. ಕಾರ್ಯಕ್ರಮ ದಲ್ಲಿ ಲೇಖಕ ಪ್ರೊ. ಬಿ.ಚಂದ್ರಶೇಖರ್, ಪ್ರಕಾಶಕ ಕೆ.ವಿ.ಶ್ರೀನಿವಾಸ್, ಮಾಜಿ ಮೇಯರ್ ಪುರುಷೋತ್ತಮ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »