ಹಿಂದೂಸ್ತಾನಕ್ಕೆ ಅರಿವಿನ ಬೆಳಕಾದವರು ಬಸವಣ್ಣ
ಮೈಸೂರು

ಹಿಂದೂಸ್ತಾನಕ್ಕೆ ಅರಿವಿನ ಬೆಳಕಾದವರು ಬಸವಣ್ಣ

June 24, 2019

ಮೈಸೂರು,ಜೂ.23(ಎಸ್‍ಪಿಎನ್)-ಹನ್ನೆರಡನೇ ಶತಮಾನದಲ್ಲಿ ಹಿಂದೂ ಸ್ತಾನ ವೈಚಾರಿಕ ಕತ್ತಲ್ಲಲ್ಲಿ ಮುಳುಗಿದ್ದಾಗ ಬಸವಣ್ಣ ಅರಿವಿನ ಬೆಳಕಾದರು ಎಂದು ಹಿರಿಯ ಸಾಹಿತಿ ಡಾ.ಮಳಲಿ ವಸಂತ ಕುಮಾರ್ ಅಭಿಪ್ರಾಯಪಟ್ಟರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಲೇಖಕ ಡಾ. ಪ್ರಸನ್ನ ಸಂತೇಕಡೂರು ರಚಿಸಿರುವ `ಎತ್ತಣ ಅಲ್ಲಮ ಎತ್ತಣ ರಮಣ’ ಕೃತಿ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಅಲ್ಲಮ ಪ್ರಭು ಸತ್ಯ ಕಠೋರವಾಗಿ ಹೇಳುತ್ತಿದ್ದರು. ಆದರೆ, ಬಸವಣ್ಣ ಜನರಿಗೆ ವಿನಮ್ರವಾಗಿ ತಿಳಿಸುತ್ತಿದ್ದರು. ಇದ ರಿಂದಾಗಿ ಬಸವಣ್ಣ ಎಲ್ಲರಿಗೂ ಪ್ರಿಯವಾ ಗಿದ್ದರು. 12ನೇ ಶತಮಾನದಲ್ಲಿ ಕತ್ತಲೆ ಆವರಿಸಿದ್ದಾಗ ಬಸವಣ್ಣ ಬೆಳಕಾಗಿ ಅವತರಿಸಿದರು. ವಚನ ಕ್ರಾಂತಿ ಮೂಲಕ ವೈe್ಞÁನಿಕ ಚಿಂತನೆ ಬೆಳೆಸಿದರು. ಇದರ ಪರಿಣಾಮ ಬಸವ ಭಾರತವನ್ನು ಇಂದಿಗೂ ಕಾಣುತ್ತಿz್ದÉೀವೆ ಎಂದರು.

ಆ ಕಾಲದಲ್ಲಿಯೇ ಜಾತಿ ಬೇರನ್ನು ಬುಡ ಸಮೇತ ಕಿತ್ತು ಹಾಕಬೇಕೆಂಬ ಸದು ದ್ದೇಶದಿಂದ ದಲಿತರು ಮತ್ತು ಬ್ರಾಹ್ಮಣರ ಹುಡುಗ- ಹುಡುಗಿಗೆ ಮದುವೆ ಮಾಡಿಸಿ ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದರು. ಆನಂತರ ಈ ಸಾಂಸ್ಕøತಿಕ ವಿನಿಮಯಕ್ಕೆ ಕಲ್ಯಾಣದಲ್ಲಿ ಬಾರೀ ಅಶಾಂತಿ ಉಂಟಾಗಿ ಬಸವಣ್ಣ ಕೂಡಲ ಸಂಗಮಕ್ಕೆ ಹೋಗ ಬೇಕಾಯಿತು. ನಂತರ ಶರಣರು ದಿಕ್ಕೆಟ್ಟು ಹೋಗಿದ್ದು ಈಗ ಇತಿಹಾಸ ಎಂದು ಸ್ಮರಿಸಿದರು.

ಅಂದು ಬಸವಣ್ಣ ವಚನ ಚಳವಳಿ ಮೂಲಕ ಸಮ ಸಮಾಜ ಕಟ್ಟಲು ಪ್ರಯತ್ನಿಸಿದರು. ಅಲ್ಲಮ ಪ್ರಭು ಸತ್ಯವನ್ನು ಕಠೋರವಾಗಿ ಹೇಳುತ್ತಿ ದ್ದರು. ಕಲ್ಲು ದೇವರಿಗೆ ಪೂಜೆ ಏಕೆ ಎಂದು ಪ್ರಶ್ನಿಸಿದ್ದರು. ಬಸವಣ್ಣ ಅದೇ ಮಾತನ್ನು ಮೃದುವಾಗಿ ಹೇಳುತ್ತಿದ್ದರಿಂದ ಅವರು ಎಲ್ಲರಿಗೂ ಇಂದಿಗೂ ಇಷ್ಟವಾಗುತ್ತಿದ್ದಾರೆ. ಕರ್ನಾಟಕದಲ್ಲಿ ಅಲ್ಲಮನಂತೆ ತಮಿಳು ನಾಡಿನಲ್ಲಿ ರಮಣರು ಹೆಸರವಾಸಿಯಾಗಿ ದ್ದಾರೆ ಎಂದು ತಿಳಿಸಿದರು.

ಉತ್ತರ ಕರ್ನಾಟಕ ಕಲುಬುರುಗಿಯಲ್ಲಿ ಅಲ್ಲಮ ಹೆಸರಿನ ಮಸೀದಿಗಳಿವೆ. ಆ ಸ್ಥಳದಲ್ಲಿ ಇಂದಿಗೂ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂದು ಸಂಶೋಧನೆ ಮೂಲಕ ಸಾಬೀತಾ ಗಿದೆ. ಅಲ್ಲಮ ಪ್ರಭು, ಅಕ್ಕ ಮಹಾದೇವಿ, ಆಯ್ದಕ್ಕಿ ಮಲ್ಲಮ್ಮ ಸೇರಿದಂತೆ ಅನೇ ಕ ವಚನಕಾರರು, ಜಡ್ಡು ಹಿಡಿದಿಂದ ಸಮಾಜದಲ್ಲಿ ಚಳವಳಿ ಮೂಲಕ ಕ್ರಿಯಾ ಶೀಲಗೊಳಿ ಸಿದ ಕೀರ್ತಿ ಇವರಿಗೆ ಸಲ್ಲುತ್ತಿದೆ ಎಂದರು.

ಜಗತ್ತಿನಲ್ಲಿ ಆಧ್ಯಾತ್ಮಿಕ ದೇಶವಾಗಿ ಗುರುತಿಸುವುದಿದ್ದರೆ, ಅದು ಭಾರತ ಮಾತ್ರ. ಇಲ್ಲಿ ಎಲ್ಲಾ ಧರ್ಮದ ಜನರಿ ದ್ದಾರೆ. ಅವರಿಗಿಷ್ಟವಾದ ದೇವರುಗಳನ್ನು ಪೂಜಿಸಬಹುದು. ಇದನ್ನೇ ಬಸವಣ್ಣ ವಚನದ ಮೂಲಕ ತಿಳಿಸಿದ್ದಾರೆ. ಬಸವಣ್ಣ ನನ್ನು ಕುರಿತು ರಾಷ್ಟ್ರಕವಿ ಕುವೆಂಪು ಅವರು, ಹೀಗೆ ಹೇಳುತ್ತಾರೆ. ಬಸವಣ್ಣ ಸರ್ವರನ್ನೊಳಗೊಂಡ ಸಾಂಸ್ಕøತಿಕ. ಈತನ ತತ್ವಾದರ್ಶಗಳನ್ನು ಸಮಾಜದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ಕಸಾಪ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಸಿ.ಜಿ. ಉಷಾದೇವಿ ಕೃತಿ ಕುರಿತು ಮಾತನಾಡಿದರು. ಶರಣ ವಿಶ್ವ ವಚನ ಫೌಂಡೇಷನ್‍ನ ಅಧ್ಯಕ್ಷ ವಚನ ಕುಮಾರಸ್ವಾಮಿ, ನಿರ್ದೇಶಕಿ ರೂಪ ಕುಮಾರಸ್ವಾಮಿ, ಮೈಸೂರು ಜಿಲ್ಲಾ ಶರಣು ವಿಶ್ವವಚನ ಫೌಂಡೇಷನ್‍ನ ಅಧ್ಯಕ್ಷ ಅನಿಲ್‍ಕುಮಾರ್ ವಾಜಂತ್ರಿ, ಲೇಖಕ ಡಾ.ಪ್ರಸನ್ನ ಸಂತೇಕಡೂರು ಇದ್ದರು. ವಚನ ಚೂಡಾಮಣಿ ಪ್ರಾರ್ಥಿಸಿದರು. ವಚನ ಕುಮಾರಸ್ವಾಮಿ ಸ್ವಾಗತಿಸಿದರು. ರೂಪ ಕುಮಾರಸ್ವಾಮಿ ನಿರೂಪಿಸಿದರು.

Translate »