ನೂರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ
ಮೈಸೂರು

ನೂರಾರು ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಪುರಸ್ಕಾರ

June 24, 2019

ಮೈಸೂರು,ಜೂ.23(ಎಸ್‍ಬಿಡಿ)- ಆರ್ಥಿಕ ವಾಗಿ ಹಿಂದುಳಿದ ಕುಟುಂಬದ ನೂರಾರು ವಿದ್ಯಾರ್ಥಿಗಳನ್ನು ಮೈಸೂರು ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆ ವತಿ ಯಿಂದ ಪುರಸ್ಕರಿಸಲಾಯಿತು.

ಮೈಸೂರಿನ ಕಲಾಮಂದಿರದಲ್ಲಿ ಭಾನು ವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದಿರುವ ನಗರ ಹಾಗೂ ಗ್ರಾಮೀಣ ಪ್ರದೇಶದ ಸುಮಾರು 400 ವಿದ್ಯಾರ್ಥಿಗಳಿಗೆ ಅಗತ್ಯ ಪುಸ್ತಕ, ಬ್ಯಾಗ್ ಹಾಗೂ ನಗದು ಬಹು ಮಾನ ನೀಡಿ ಅಭಿನಂದಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿ ಯಾಗಿದ್ದ ಮೈಸೂರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಸ್.ಕೆ. ವಂಟಿಗೋಡಿ ಮಾತನಾಡಿ, ನಿಮ್ಮ ಪ್ರಯ ತ್ನದ ಜೊತೆಗೆ ತಂದೆ ತಾಯಂದಿರು ಮಾಡಿದ ತ್ಯಾಗದ ಪ್ರತಿಫಲವಾಗಿ ನಿಮ ಗೆಲ್ಲಾ ಉತ್ತಮ ಅಂಕಗಳು ಬಂದಿವೆ. ಶಿಕ್ಷಣ ಮುಗಿಸಿ ಬೆಳೆದು ದೊಡ್ಡವರಾದ ಬಳಿಕ ಹೆತ್ತವರನ್ನು ಮರೆಯಬಾರದು. ಅವ ರನ್ನು ಕಡೇವರೆಗೂ ಚೆನ್ನಾಗಿ ನೋಡಿ ಕೊಳ್ಳಬೇಕೆಂದು ಕಿವಿಮಾತು ಹೇಳಿದರ ಲ್ಲದೆ, ಸಾಮಾಜಿಕ ಹಾಗೂ ಶೈಕ್ಷಣಿಕ ವಿಕಾಸ ವೇದಿಕೆಯ ಸಾಮಾಜಿಕ ಕಾಳಜಿ ಮೆಚ್ಚುವಂತದ್ದು. ಯಾವುದೇ ಜಾತಿ, ಧರ್ಮದ ಭೇದಭಾವ ಇಲ್ಲದೆ ಎಲ್ಲಾ ವರ್ಗದ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಪುರಸ್ಕರಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ಶ್ಲಾಘಿಸಿದರು.

ಶೈಕ್ಷಣಿಕ ತರಬೇತುದಾರ ಎಂ.ಎಸ್.ರಘು ಮಾತನಾಡಿ, ಮಕ್ಕಳಲ್ಲಿ ಆತ್ಮ ವಿಶ್ವಾಸ, ನಂಬಿಕೆ, ಭರವಸೆಯನ್ನು ಹೆಚ್ಚಿಸುವುದ ರಿಂದ ಜೀವನದಲ್ಲಿ ಸಮೃದ್ಧಿ ಸ್ಥಿತಿ ತಲು ಪುತ್ತಾರೆ. ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇತ್ತೀಚೆಗೆ ಭಾರತ ತಂಡ ಪಾಕಿಸ್ತಾನವನ್ನು ಮಣಿಸಿತು. ಈ ಹಿಂದಿನ ಎಲ್ಲಾ ವಿಶ್ವಕಪ್ ಪಂದ್ಯಗಳಲ್ಲೂ ಪಾಕಿ ಸ್ತಾನದ ವಿರುದ್ಧ ಭಾರತ ಗೆಲುವು ದಾಖ ಲಿಸಿದೆ. ಹಿಂದಿನ ಯಶಸ್ಸನ್ನು ಸ್ಮರಿಸುತ್ತಲೇ ಈ ಬಾರಿಯೂ ಭಾರತ ತಂಡ ಮೈದಾನ ಕ್ಕಿಳಿದಿತ್ತು. ಅತ್ತ ಈವರೆಗೂ ವಿಶ್ವಕಪ್‍ನಲ್ಲಿ ಭಾರತದ ವಿರುದ್ಧ ಗೆಲ್ಲಲಾಗದ ಪಾಕಿಸ್ತಾನ ತಂಡ ಸೋಲಿನ ಭೀತಿಯಲ್ಲೇ ಎದು ರಾಗಿತ್ತು. ಕಡೆಗೆ ಸಕಾರಾತ್ಮಕ ಚಿಂತನೆಯಿಂದ ಆಡಿದ ಭಾರತ ತಂಡ ಮತ್ತೆ ಗೆಲುವು ಪಡೆಯಿತು. ಹಾಗಾಗಿ ನಾವು ಯಾವುದೇ ಒಂದು ಕೆಲಸದಲ್ಲಿ ಯಶಸ್ವಿ ಯಾಗಲು ನಂಬಿಕೆ, ಆತ್ಮ ವಿಶ್ವಾಸ ಬಹಳ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಎಲ್ಲ ದಕ್ಕೂ ಅವರನ್ನು ಗದರಿಸಬಾರದು. ಸೌಮ್ಯ ವರ್ತನೆಯಿಂದ ಅವರ ಮನಸ್ಸನ್ನು ಹದಗೊಳಿಸಬೇಕು. ಭಯ, ಆತಂಕ, ಒತ್ತಡದ ಸನ್ನಿವೇಶ ಎದುರಾಗದಿದ್ದರೆ ಅವರ ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ. ಮಕ್ಕಳಲ್ಲಿ ಭರವಸೆ ತುಂಬು ವಲ್ಲಿ ಪ್ರಮುಖ ಪಾತ್ರ ಪೆÇೀಷಕರದ್ದಾಗಿದೆ. ಕೆಲವೊಮ್ಮೆ ಭಾವನೆಗಳು ಬದುಕಿನ ಮೇಲೆ ಪರಿಣಾಮ ಭೀರುತ್ತವೆ. ಹಾಗಾಗಿ ನಾನು ಬಡವ ಎಂಬ ಭಾವನೆ ಮನಸ್ಸಿನಲ್ಲಿ ಅಚ್ಚೊತ್ತಿದರೆ ಆತ ಬಡವನಾಗಿಯೇ ಉಳಿಯಬೇಕಾಗುತ್ತದೆ. ಅಗತ್ಯತೆಗಳ ಪೂರೈಕೆಯಲ್ಲಿ ಬಡವನಾದರೂ ಮನ ಸ್ಸನ್ನು ಶ್ರೀಮಂತವಾಗಿಯೇ ಇಟ್ಟುಕೊಳ್ಳ ಬೇಕು. ಎಂತಹ ಸಂದರ್ಭದಲ್ಲೂ ಸಕಾರಾತ್ಮಕವಾಗಿ ಮಾತನಾಡಬೇಕು. ಆಗ ಮನಸ್ಸಿನಲ್ಲೂ ಸಕಾರಾತ್ಮಕ ಚಿಂತನೆಗಳೇ ಬೆಳೆಯುತ್ತದೆ. ನಕಾರಾತ್ಮಕ ಚಿಂತನೆಯಲ್ಲಿ ದ್ವಂದ್ವತೆ ಇರುವುದರಿಂದ ಆರೋಗ್ಯ ಕೆಡಿಸುತ್ತದೆ ಎಂದು ಅವರು ಸಲಹೆ ನೀಡಿದರು.

ಶಾಸಕರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ, ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿ ಅಧ್ಯಕ್ಷ ಯಶವಂತ ರಾಯಗೌಡ ಪಾಟೀಲ್, ದೊಡ್ಡಬಳ್ಳಾಪುರದ 4ನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸಿ.ಚಂದ್ರಶೇಖರ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಪಿ.ದೇವಮಾನೆ, ಜಿಲ್ಲಾ ಮತ್ತು ನಗರ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಲೆಕ್ಕಪರಿಶೋಧಕ ನಂದೀಶ್, ವೇದಿಕೆ ಅಧ್ಯಕ್ಷ ವರುಣಾ ಮಹೇಶ್, ಪ್ರಧಾನ ಕಾರ್ಯದರ್ಶಿ ಡಾ.ಕೆ.ವಸಂತ ಕುಮಾರ್, ಉಪಾಧ್ಯಕ್ಷ ರಾದ ಎಚ್.ಎಸ್.ವೀರೇಶ್, ಎಸ್.ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »