ಜಿಟಿಡಿಗೆ ಉನ್ನತ ಶಿಕ್ಷಣ ಬದಲು ಸಹಕಾರ ಸಾಧ್ಯತೆ
ಮೈಸೂರು

ಜಿಟಿಡಿಗೆ ಉನ್ನತ ಶಿಕ್ಷಣ ಬದಲು ಸಹಕಾರ ಸಾಧ್ಯತೆ

June 12, 2018

ಬೆಂಗಳೂರು:  ಉನ್ನತ ಶಿಕ್ಷಣ ಖಾತೆ ಬಗ್ಗೆ ಆಸಕ್ತಿ ತೋರದ ಜಿ.ಟಿ. ದೇವೇಗೌಡರಿಗೆ ಸಹಕಾರಿ ಇಲಾಖೆ ಹೊಣೆಗಾರಿಕೆ ವಹಿಸಲು ನಿರ್ಧರಿಸಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ತಮ್ಮ ಸಂಪುಟದ ಇನ್ನಿತರ ಕೆಲವರ ಖಾತೆ ಬದಲಾವಣೆಗೂ ಮುಂದಾಗಿ ದ್ದಾರೆ. ದೇವೇಗೌಡರಿಗೆ ನೀಡಲಾದ ಉನ್ನತ ಶಿಕ್ಷಣವನ್ನು ಬಂಡೆಪ್ಪ ಕಾಶೆಂಪೂರ್ ಅವರಿಗೆ ನೀಡಿ ಸಹಕಾರಿ ಖಾತೆಯನ್ನು ಗೌಡರಿಗೆ ನೀಡಲಿ ದ್ದಾರೆ. ಇದೇ ಸಂದರ್ಭದಲ್ಲಿ ಕೆಲವರ ಖಾತೆಗಳಲ್ಲಿ ಸಣ್ಣಪುಟ್ಟ ಬದಲಾವಣೆ ಸಾಧ್ಯತೆ ಇವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ
ಇಂದು ಬೆಳಿಗ್ಗೆ ನಡೆದ ಸಭೆಯಲ್ಲಿ ಮುಖ್ಯಮಂತ್ರಿ ಅವರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲದೆ, ರಾಜ್ಯ ಕಾಂಗ್ರೆಸ್‍ನ ಹಿರಿಯ ನಾಯಕರೊಬ್ಬರ ವಿರೋಧವನ್ನು ಕಡೆಗಣಿಸಿಯೂ ಜಿಟಿಡಿ ಅವರಿಗೆ ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ವಹಿಸುವಂತೆ ದೇವೇಗೌಡರು, ಮುಖ್ಯಮಂತ್ರಿ ಅವರಿಗೆ ಸಲಹೆ ಮಾಡಿದ್ದಾರೆ.

ಸಣ್ಣ ನೀರಾವರಿ ಇಲಾಖೆಗೆ ಕ್ಯಾತೆ ತೆಗೆದಿದ್ದ ಸಿ.ಎಸ್.ಪುಟ್ಟರಾಜು ಅವರ ಖಾತೆಯಲ್ಲಿ ಯಾವುದೇ ಬದಲಾವಣೆ ಇಲ್ಲ, ಆದರೆ ಅವರಿಗೆ ಮಂಡ್ಯ ಜಿಲ್ಲಾ ಉಸ್ತುವಾರಿಕೆ ಹೊಣೆ ಲಭ್ಯವಾಗಲಿದೆ. ಎಂಟನೇ ತರಗತಿ ಓದಿರುವವನು ಉನ್ನತ ಶಿಕ್ಷಣ ಇಲಾಖೆ ಪಡೆದು ಹೇಗೆ ನಿರ್ವಹಿಸಲಿ ಎಂದು ಜಿಟಿಡಿ ಅವರು ಖಾತೆ ಹಂಚಿಕೆ ಸಂದರ್ಭದಲ್ಲೇ ಅಸಮಾಧಾನ ತೋಡಿಕೊಂಡಿದ್ದರು. ಅವರ ಅಸಮಾಧಾನಕ್ಕಿಂತಗೌಡರ ಬೆಂಬಲಿಗರು ಜನರ ಸೇವೆಗೆ ಹತ್ತಿರವಾಗುವ ಪ್ರಮುಖ ಖಾತೆ ನೀಡಿ, ಇಲ್ಲವೇ ಶಾಸಕರಾಗೇ ಮುಂದುವರೆದು ಕ್ಷೇತ್ರದ ಸೇವೆ ಮಾಡಿ ಎಂದು ಒತ್ತಾಯಿಸಿದ್ದರು. ಅಜ್ಞಾತ ವಾಸದಲ್ಲಿದ್ದ ಜಿಟಿಡಿ ಅವರನ್ನು ಮುಖ್ಯಮಂತ್ರಿ ನಿನ್ನೆ ಕರೆಸಿ ಮೈಸೂರಿನಲ್ಲಿ ಚರ್ಚೆ ಮಾಡಿದ್ದರಲ್ಲದೆ ಇಂದು ದೊಡ್ಡವರ ಸಮ್ಮುಖದಲ್ಲೇ ಬಗೆಹರಿಸಿದ್ದಾರೆ.

Translate »