ವಿಧಾನ ಪರಿಷತ್ ಚುನಾವಣೆ ಇಂದು ಮೈಸೂರಲ್ಲಿ ಮತ ಎಣಿಕೆ
ಮೈಸೂರು

ವಿಧಾನ ಪರಿಷತ್ ಚುನಾವಣೆ ಇಂದು ಮೈಸೂರಲ್ಲಿ ಮತ ಎಣಿಕೆ

June 12, 2018

ಮೈಸೂರು: ವಿಧಾನ ಪರಿಷತ್‍ಗೆ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರ ದಿಂದ ಜೂ.8ರಂದು ನಡೆದ ಚುನಾ ವಣೆಯ ಮತ ಎಣಿಕೆ ಕಾರ್ಯ ಮೈಸೂ ರಿನ ಪಡುವಾರಹಳ್ಳಿಯಲ್ಲಿರುವ ಮಹಾ ರಾಣಿವಾಣಿ
ಜ್ಯ ಕಾಲೇಜಿನಲ್ಲಿ ನಾಳೆ (ಜೂ.12) ಮಂಗಳವಾರ ಬೆಳಿಗ್ಗೆ 8ರಿಂದ ಆರಂಭವಾಗಲಿದ್ದು, ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಾದೇಶಿಕ ಆಯುಕ್ತೆ ಪಿ.ಹೇಮಲತಾ ತಿಳಿಸಿದ್ದಾರೆ.

ಮೈಸೂರಿನ ಕಲಾಮಂದಿರ ಬಳಿ ಇರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸೋಮ ವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರಿನ ಪಡುವಾರಹಳ್ಳಿ ಬಳಿಯ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮೂರೂ ಕ್ಷೇತ್ರದ ಮತ ಎಣಿಕಾ ಕಾರ್ಯ ನಡೆಯಲಿದೆ. ಈ 3 ಕ್ಷೇತ್ರ ಒಳಗೊಂಡ 10 ಜಿಲ್ಲೆಗಳಿಂದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು
ಕರೆಸಿಕೊಳ್ಳಲಾಗುತ್ತಿದೆ. ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಿರುವ ಹಿನ್ನೆಲೆಯಲ್ಲಿ 3 ಕ್ಷೇತ್ರದ ಎಣಿಕೆಗೂ 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಮೊದಲ ಪ್ರಾಶಸ್ತ್ಯದ ಮತಗಳು ನಿಗಧಿತ ಸಂಖ್ಯೆಯಲ್ಲಿ ಯಾವುದೇ ಅಭ್ಯರ್ಥಿಗಳಿಗೆ ದೊರೆಯದೆ ಇದ್ದರೆ, ಎರಡನೇ ಪ್ರಾಶಸ್ತ್ಯದ ಮತಗಳ ಎಣ ಕೆ ನಡೆಸಲಾಗುತ್ತದೆ. ಪ್ರಾಶಸ್ತ್ಯವಾರು ಮತ ಎಣಿಕೆ ನಡೆದರೆ ಫಲಿತಾಂಶ ಮಧ್ಯರಾತ್ರಿ ಪ್ರಕಟವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಅಗತ್ಯ ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದರು. ಚುನಾವಣೆ ನಡೆದ 3 ಕ್ಷೇತ್ರಗಳಿಗೂ ಒಬ್ಬರೇ ಚುನಾವಣಾಧಿಕಾರಿ ಗಳಾಗಿರುವುದರಿಂದ ಒಂದೇ ಸ್ಥಳದಲ್ಲಿ 3 ಕ್ಷೇತ್ರಗಳ ಮತ ಎಣಿಕಾ ಕಾರ್ಯ ಜರುಗಲಿದೆ.

3 ಕ್ಷೇತ್ರಗಳ ವ್ಯಾಪ್ತಿಗೆ ಹತ್ತು ಜಿಲ್ಲೆಗಳು ಬರುವುದರಿಂದ ಸಹಾಯಕ ಚುನಾವಣಾಧಿಕಾರಿಗಳಾಗಿ ರುವ ಹತ್ತು ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ ಎಣಿಕಾ ಕಾರ್ಯದಲ್ಲಿ ಉಪಸ್ಥಿತರಿರುತ್ತಾರೆ. ಮತ ಎಣಿಕೆಗೆ 35 ಅಧಿಕಾರಿಗಳು, 145 ಮಂದಿ ಎಣಿಕೆ ಮೇಲ್ವಿಚಾರಕರು ಮತ್ತು ಸಹಾ ಯಕರು, 60 ಮಂದಿ ಎಣಿಕಾ ಸಿಬ್ಬಂದಿ, 50 ಮಂದಿ ಡಿ ದರ್ಜೆ ನೌಕರರು, 25 ಮಂದಿ ಇತರೆ ಸಿಬ್ಬಂದಿ, 120 ಮಂದಿ ಪೊಲೀಸರು ಸೇರಿದಂತೆ ಎಣ ಕೆ ಕಾರ್ಯಕ್ಕೆ 435 ಸಿಬ್ಬಂದಿ ಯನ್ನು ಬಳಸಿಕೊಳ್ಳಲಾಗುತ್ತಿದೆ ಎಂದರು. 14 ಟೇಬಲ್‍ಗಳಲ್ಲಿ ನಡೆಯಲಿರುವ ಮೊದಲ ಪ್ರಾಶಸ್ತ್ಯದ ಮತ ಎಣಿಕಾ ಕಾರ್ಯ ಮುಗಿದಾಗ ನಿಗಧಿತ ಖೋಟಾ ತಲುಪದಿದ್ದರೆ, 6 ಟೇಬಲ್‍ಗಳಲ್ಲಿ ಎರಡನೇ ಪ್ರಾಶಸ್ತ್ಯದ ಮತ ಎಣಿಕಾ ಕಾರ್ಯ ನಡೆಯುತ್ತದೆ. ಪ್ರತಿ ಟೇಬಲ್ ಮುಂದೆ ಅಭ್ಯರ್ಥಿಗಳು ಅಥವಾ ಅವರ ಒಬ್ಬ ಏಜೆಂಟರು ಮಾತ್ರ ಇರುವುದಕ್ಕೆ ಅವಕಾಶ ನೀಡಲಾಗಿದೆ. ಮತ ಎಣ ಕಾ ಕೇಂದ್ರದಲ್ಲಿ ಮೊಬೈಲ್ ಬಳಕೆ ನಿಷಿದ್ಧ.

ಈಗಾಗಲೇ ಮತ ಪತ್ರಗಳನ್ನು 25ರ ಬಂಡಲ್ ಮಾಡಿ ಇಡಲಾಗಿದೆ. ಎಣಿಕಾ ಕಾರ್ಯಕ್ಕೂ ಮುನ್ನ ಆಯಾ ಕ್ಷೇತ್ರದ ಎಲ್ಲಾ ಬಂಡಲ್‍ಗಳನ್ನು ಪ್ರತ್ಯೇಕವಾಗಿ ಒಂದು ಡ್ರಮ್‍ಗೆ ಸುರಿದು, ಮಿಶ್ರಣ ಮಾಡಿ, 500 ಮತಪತ್ರಗಳ ಬಂಡಲ್ ಮಾಡಿ ಪ್ರತಿ ಟೇಬಲ್‍ಗೂ ಇಡಲಾಗುತ್ತದೆ ಎಂದು ತಿಳಿಸಿದರು. ದಕ್ಷಿಣ ಶಿಕ್ಷಕರ ಕ್ಷೇತ್ರದ ಒಟ್ಟು 20677 ಮತದಾರರ ಪೈಕಿ 16707 ಮಂದಿ ಮತ ಚಲಾಯಿಸಿದ್ದರೆ, ನೈರುತ್ಯ ಶಿಕ್ಷಕರ ಕ್ಷೇತ್ರದ 20481 ಮತದಾರರ ಪೈಕಿ 16477 ಮಂದಿ ಮತ ಚಲಾಯಿಸಿದ್ದಾರೆ. ನೈರುತ್ಯ ಪದವೀಧರರ ಕ್ಷೇತ್ರದ 67306 ಮತದಾರರ ಪೈಕಿ 47124 ಮಂದಿ ಮತಚಲಾಯಿಸಿದ್ದಾರೆ. ಇದರಲ್ಲಿ ತಿರಸ್ಕøತಗೊಳ್ಳುವ ಮತಪತ್ರಗಳನ್ನು ಹೊರತುಪಡಿಸಿ ಎಣಿಕೆಗೆ ಸಿಂಧುವಾದ ಮತಗಳ ಆಧಾರದ ಮೇಲೆ ಅಭ್ಯರ್ಥಿಯ ಕೋಟಾ ನಿಗದಿಪಡಿಸಲಾಗುವುದು ಎಂದರು.

29 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಮೈಸೂರು:  ಮೇಲ್ಮನೆ ಪ್ರವೇಶಿಸಲು ರಾಜ್ಯದ 10 ಜಿಲ್ಲೆಗಳು ಒಳಪಡುವ ಶಿಕ್ಷಕರು ಹಾಗೂ ಪದವೀಧರರ ಮೂರು ಕ್ಷೇತ್ರಗಳಿಂದ ಕಣಕ್ಕಿಳಿದಿರುವ ಪ್ರಮುಖ 3 ಪಕ್ಷಗಳ ಅಭ್ಯರ್ಥಿಗಳು ಒಳಗೊಂಡಂತೆ 29 ಅಭ್ಯರ್ಥಿಗಳ ಭವಿಷ್ಯ ಮಂಗಳ ವಾರ ರಾತ್ರಿ ವೇಳೆಗೆ ನಿರ್ಧಾರವಾಗಲಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಪದವೀಧರ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‍ಗೆ ಜೂ.8ರಂದು ನಡೆದ ದ್ವೈವಾರ್ಷಿಕ ಚುನಾವಣೆಯನ್ನು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಪ್ರತಿಷ್ಠೆಯಾಗಿ ಪರಿಗಣಿಸಿ ದ್ದವು. ಮೇಲ್ಮನೆಗೆ ಪ್ರವೇಶ ಪಡೆಯಲೇಬೇಕೆಂದು 3 ಪಕ್ಷಗಳ ಅಭ್ಯರ್ಥಿಗಳು ಸೇರಿ ಪಕ್ಷೇತರರು ತೀವ್ರ ಕಸರತ್ತು ಮಾಡಿದ್ದು, ಮತಬೇಟೆಯಾಡಲು ಸಾಕಷ್ಟು ಪರಿಶ್ರಮ ಪಟ್ಟಿ ದ್ದರು. ತೀವ್ರ ಕುತೂಹಲ ಹಾಗೂ ಕಾತುರ ಸೃಷ್ಟಿಸಿದ್ದ ವಿಧಾನ ಪರಿಷತ್ ಚುನಾವಣೆ ಯಲ್ಲಿ ಯಾರಿಗೆ ಮೇಲ್ಮನೆಗೆ ಪ್ರವೇಶಾವಕಾಶ ಒದಗಲಿದೆ ಎಂದು ಕಾದು ನೋಡಬೇಕಾ ಗಿದೆ. ಈ ಚುನಾವಣೆಯಲ್ಲಿ ವಿಧಾನಪರಿಷತ್ ಉಪ ಸಭಾಪತಿ ಮರಿತಿಬ್ಬೇಗೌಡ, ವಿಧಾನ ಪರಿಷತ್ ಮುಖ್ಯಸಚೇತಕ ಕ್ಯಾ.ಗಣೇಶ್ ಕಾರ್ನಿಕ್, ರಾಜ್ಯಸಭಾ ಮಾಜಿ ಸದಸ್ಯ ಆಯನೂರು ಮಂಜುನಾಥ್ ಸೇರಿದಂತೆ 29 ಮಂದಿ ಅಭ್ಯರ್ಥಿಗಳು ಅದೃಷ್ಟ ಪರಿಕ್ಷೆಗೆ ಒಳಗಾಗಿದ್ದರು. ಈ ಎಲ್ಲಾ ಅಭ್ಯರ್ಥಿಗಳ ಹಣೆಹರಹ ನಿರ್ಧಾರಕ್ಕೆ ಕ್ಷಣಗಣನೆ ಆರಂಭವಾಗಿದೆ. ದಕ್ಷಿಣ ಶಿಕ್ಷಕರ ಕ್ಷೇತ್ರದ ಜೆಡಿಎಸ್‍ನ ಮರಿತಿಬ್ಬೇ ಗೌಡ, ಬಿಜೆಪಿಯ ಬಿ.ನಿರಂಜನ ಮೂರ್ತಿ, ಕಾಂಗ್ರೆಸ್‍ನ ಎಂ.ಲಕ್ಷ್ಮಣ, ಪಕ್ಷೇತರ ಅಭ್ಯರ್ಥಿಗಳಾದ ಎ.ಎಚ್.ಗೋಪಾಲಕೃಷ್ಣ, ಡಿ.ಕೆ.ತುಳಸಪ್ಪ, ಡಾ.ಎಸ್‍ಬಿಎಂ ಪ್ರಸನ್ನ, ಡಾ.ಮಹದೇವ, ಎಂ.ಎನ್.ರವಿಶಂಕರ್, ಪಿ.ಎ.ಶರತ್‍ರಾಜ್, ಕರ್ನಾಟಕ ನೈರುತ್ಯ ಪದವೀಧರರ ಕ್ಷೇತ್ರದಿಂದ ಕಾಂಗ್ರೆಸ್‍ನ ಎಸ್.ಪಿ.ದಿನೇಶ್, ಬಿಜೆಪಿಯ ಅಯನೂರು ಮಂಜುನಾಥ್, ಜೆಡಿಎಸ್‍ನ ಅರುಣ್ ಕುಮಾರ್, ಸರ್ವ ಜನತಾ ಪಾರ್ಟಿಯ ಜಿ.ಸಿ.ಪಟೇಲ್, ಪಕ್ಷೇತರರಾಗಿ ಜಫರುಲ್ಲಾ ಸತ್ತಾರ್ ಖಾನ್, ಬಿ.ಕೆ.ಮಂಜುನಾಥನ್, ಬಿ.ಆರ್.ಪ್ರಭುಲಿಂಗ, ಜಿ.ಎಂ.ಜೈಕುಮಾರ್, ಕರ್ನಾಟಕ ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಬಿಜೆಪಿಯ ಹಾಲಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕಾಂಗ್ರೆಸ್‍ನ ಮಂಜುನಾಥ ಕುಮಾರ್, ಜೆಡಿಎಸ್‍ನ ಎಸ್.ಎಲ್. ಭೋಜೇಗೌಡ, ಪಕ್ಷೇತರರಾದ ಎಂ.ರಮೇಶ್, ಕೆ.ಪಿ.ರಾಜೇಂದ್ರ ಕುಮಾರ್, ನಿತ್ಯಾನಂದಾ ಶೆಟ್ಟಿ, ಬಿ.ಆರ್.ಪ್ರಭುಲಿಂಗ, ತುಳಸಪ್ಪ ದಾಸರ, ಆಲೋಶಿಯಸ್ ಡಿಸೋಜಾ, ಕೆ.ಸಿ. ಬಸವರಾಜಪ್ಪ, ಕೆ.ಬಿ.ಚಂದ್ರೋಜಿರಾವ್ ಅವರ ಭವಿಷ್ಯ ನಿರ್ಧಾರವಾಗಲಿದೆ.

ಹಾಲಿ ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಮೂರು ಬಾರಿ ಸತತ ಗೆಲುವು ಸಾಧಿಸಿರುವ ಇವರು ಈ ಬಾರಿಯೂ ಗೆಲುವಿನ ನಗೆ ಬೀರುವ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂ ದೆಡೆ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‍ನ ಎಂ.ಲಕ್ಷ್ಮಣ ಅವರು ಈ ಬಾರಿಯಾ ದರೂ ಶಿಕ್ಷಕ ಮತದಾರರು ತಮ್ಮ ಕೈ ಹಿಡಿಯಬಹುದೆಂಬ ಆಕಾಂಕ್ಷೆ ಹೊಂದಿದ್ದಾರೆ. ಇನ್ನೊಂದೆಡೆ ಬಿಜೆಪಿಯಿಂದ ಸ್ಪರ್ಧಿಸಿರುವ ಬಿ.ಎನ್.ನಿರಂಜನಮೂರ್ತಿ ಅವರು ಮೊದಲ ಯತ್ನದಲ್ಲೇ ಗೆದ್ದು ದಾಖಲೆ ನಿರ್ಮಾಣ ಮಾಡುವ ಕನಸು ಕಂಡಿದ್ದಾರೆ. ಒಟ್ಟಾರೆ ಮಂಗಳವಾರ ನಡೆಯಲಿರುವ ಎಣಿಕೆಯಲ್ಲಿ ಜಯದ ಮಾಲೆ ಯಾರ ಕೊರಳಿಗೆ ಬೀಳುವುದು ಎನ್ನುವುದನ್ನು ಕಾದು ನೋಡಬೇಕಿದೆ.

Translate »