ಹನುಮಂತನಗರದಲ್ಲಿ ಹನುಮ ಜಯಂತಿ ಮಹೋತ್ಸವ
ಮೈಸೂರು

ಹನುಮಂತನಗರದಲ್ಲಿ ಹನುಮ ಜಯಂತಿ ಮಹೋತ್ಸವ

December 9, 2019

ಮೈಸೂರು, ಡಿ.8- ಮೈಸೂರಿನ ಹನುಮಂತ ನಗರದಲ್ಲಿರುವ ಶ್ರೀ ವೀರಾಂಜ ನೇಯ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರದಿಂದ ಡಿ.12 ರವರೆಗೆ ಶ್ರೀ ಹನುಮ ಜಯಂತಿ ಮಹೋತ್ಸವ ಹಮ್ಮಿಕೊಳ್ಳ ಲಾಗಿದೆ. ಮೊದಲ ದಿನವಾದ ಇಂದು(ಭಾನುವಾರ) ರಾತ್ರಿ 7 ಗಂಟೆಗೆ ಮಹಾ ಗಣಪತಿ ಹೋಮ, ಸುದರ್ಶನ ಹೋಮ, ನವಗ್ರಹ ಹೋಮ ನಡೆದ ನಂತರ 10 ಗಂಟೆಗೆ ಪೂರ್ಣಾ ಹುತಿ, ಮಹಾಮಂಗಳಾರತಿ ನಡೆದು ತೀರ್ಥ ಪ್ರಸಾದ ವಿನಿ ಯೋಗಿಸಲಾಯಿತು. ಜೆ.ಚಂದ್ರಶೇಖರ್ ಮತ್ತು ವೃಂದದವ ರಿಂದ ಬೆಳಗಿನ ಜಾವದವರೆಗಿನ ಅಖಂಡ ಭಜನೆ ಆರಂ ಭಿಸಲಾಗಿದೆ. ಡಿ.9ರಂದು ಬೆಳಗಿನ ಜಾವ 5 ಗಂಟೆಗೆ ಬ್ರಾಹ್ಮಿಯ ಮುಹೂರ್ತದಲ್ಲಿ ಶ್ರೀ ಸ್ವಾಮಿಯವರಿಗೆ ಚತುಸ್ಥಾರ್ಚನೆ ಪಂಚಾಮೃತ ಅಭಿಷೇಕ, 7.30ರಿಂದ 10 ಗಂಟೆವರೆಗೆ ಶ್ರೀ ರಾಮತಾರಕ ಹೋಮ ಮತ್ತು ಹನುಮಂತ ಸಹಸ್ರನಾಮ, 10 ಗಂಟೆಗೆ ವಿದ್ವಾನ್ ಪಾಟೀಲ್ ಮತ್ತು ವೃಂದದವರಿಂದ ದೇವರನಾಮ ಮತ್ತು ಭಾವಗೀತೆಗಳನ್ನು ಏರ್ಪಡಿಸಿದೆ. ಮಧ್ಯಾಹ್ನ 12 ಗಂಟೆಗೆ ಅನ್ನಸಂತರ್ಪಣೆ ನಡೆ ಯಲಿದೆ. ಸಂಜೆ 7 ಗಂಟೆಗೆ ಸುಹಾಸ್ ಮೆಲೋಡಿಸ್‍ರವರಿಂದ ಸುಗಮ ಸಂಗೀತ ನಡೆಯಲಿದೆ. ಡಿ.10ರಂದು ಸಂಜೆ 7 ಗಂಟೆಗೆ ವಿದ್ವಾನ್ ದತ್ತಾತ್ರೇಯ ಅವರಿಂದ ಸಾಮೂಹಿಕ ಮ್ಯಾಂಡಲಿನ್ ವಾದನ, ಡಿ.11ರಂದು ಸಂಜೆ 7 ಗಂಟೆಗೆ ಶ್ರೀ ಕೃಷ್ಣ ಮತ್ತು ಮಂಡಲಿಯವರಿಂದ ಹಿಂದೂಸ್ಥಾನಿ ಹಾಡುಗಾರಿಕೆ, ಡಿ.12ರಂದು ಬೆಳಿಗ್ಗೆ 10.30ಕ್ಕೆ ಸಾಮೂಹಿಕ ಸತ್ಯನಾರಾ ಯಣ ಪೂಜೆ, ಮಹಾಮಂಗಳಾರತಿ ನಂತರ ತೀರ್ಥಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ.

Translate »