ಗಮನ ಸೆಳೆದ ಸೀರೆ ನಡಿಗೆ
ಮೈಸೂರು

ಗಮನ ಸೆಳೆದ ಸೀರೆ ನಡಿಗೆ

December 9, 2019

ಮೈಸೂರು, ಡಿ.8(ಆರ್‍ಕೆಬಿ)- ಆರೋಗ್ಯ ವಂತ ಮಹಿಳೆ- ಸಂತಸದ ಕುಟುಂಬ’ ಸಂದೇಶ ಸಾರುವ ಮಹಿಳೆಯರ ಸೀರೆ ನಡಿಗೆ ಕಾರ್ಯಕ್ರಮ ಭಾನುವಾರ ಬೆಳಿಗ್ಗೆ ಮೈಸೂ ರಿನಲ್ಲಿ ಗಮನ ಸೆಳೆಯಿತು. ಮೈಸೂರು ಸೆಂಟ್ರಲ್ ಇನ್ನರ್ ಕ್ಲಬ್ ಶಾಖೆ ಆಯೋ ಜಿಸಿದ್ದ ಕಾರ್ಯಕ್ರಮದಲ್ಲಿ ನೂರಾರು ಮಹಿಳೆಯರು ಪಾಲ್ಗೊಂಡಿದ್ದರು.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಹಿಂಭಾ ಗದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಮುಂಜಾನೆ ಜಯಚಾಮರಾಜ ಒಡೆಯರ್ ಪುತ್ರಿ ಕಾಮಾಕ್ಷಿದೇವಿ ಸೀರೆ ನಡಿಗೆ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಜಿಲ್ಲಾ ಧಿಕಾರಿ ಕಚೇರಿ, ಇನ್ಸ್‍ಟಿಟ್ಯೂಟ್ ಆಫ್ ಇಂಜಿನಿಯರ್ಸ್, ರೋಟರಿ ಶಾಲೆ, ಕೃಷ್ಣ ವಿಲಾಸ ರಸ್ತೆ, ಶಿವಾಯನ ಮಠ ರಸ್ತೆ, ಡಿ.ದೇವರಾಜ ಅರಸು ರಸ್ತೆ, ಜಿಲ್ಲಾಧಿಕಾರಿ ಕಚೇರಿ ರಸ್ತೆ ಮೂಲಕ ಮತ್ತೆ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನ ತಲುಪಿತು.

ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಜಿಲ್ಲಾ ಛೇರ್ಮನ್ ಅನುರಾಧಾ ನಂದ ಕುಮಾರ್, ಮೈಸೂರ್ ಸೆಂಟ್ರಲ್ ಇನ್ನರ್ ವ್ಹೀಲ್ ಕ್ಲಬ್‍ನ ಅಧ್ಯಕ್ಷೆ ಆಶಾ ದಿವ್ಯೇಶ್, ಕಾರ್ಯದರ್ಶಿ ಸಂಗೀತಾ ಡರೀರಾ, ಡಾ. ಸಾರಿಕಾ ಪ್ರಸಾದ್, ಮಾಜಿ ಅಧ್ಯಕ್ಷರಾದ ರತ್ನಾ ನಾಗೇಶ್, ಅನಿತಾ ಸುರೇಶ್, ಚಂದ್ರಿಕಾ ಸುಧೀರ್ ಇನ್ನಿತರರು ಭಾಗವಹಿಸಿದ್ದರು.

ಸೀರೆ ನಡಿಗೆಯಲ್ಲಿ 50 ವರ್ಷದೊಳಗಿನ ಹಾಗೂ 50 ವರ್ಷ ಮೇಲ್ಪಟ್ಟವರ ವಿಭಾಗ ಗಳಲ್ಲಿ ವಿಜೇತರಾದವರ ವಿವರ ಹೀಗಿದೆ. 50 ವರ್ಷದೊಳಗಿನವರು: ಬಿ.ಎನ್.ಸಿಂಧೂ (ಪ್ರಥಮ), ಎ.ಎಲ್.ಹೇಮಾ (ದ್ವಿತೀಯ), ಮಲ್ಲಿಕಾರಾವ್ (ತೃತೀಯ), ಪ್ರಿಯದರ್ಶಿನಿ ಮಹೇಂದ್ರ ಮತ್ತು ಸುಷ್ಮಾ ಎನ್.ಗೌಡ (ಸಮಾಧಾನಕರ ಬಹುಮಾನ).

50 ವರ್ಷ ಮೇಲ್ಪಟ್ಟವರು: ವಿ.ವಿಜಯ ಲಕ್ಷ್ಮಿ (ಪ್ರಥಮ), ಲಕ್ಷ್ಮಿ ಐಯ್ಯಂಗಾರ್ (ದ್ವಿತೀಯ), ಶಾರದಾ ((ತೃತೀಯ), ಕಲಾ ಮೋಹನ್ ಮತ್ತು ಕಮಲಾ ವಿಜಯಕುಮಾರ್ (ಸಮಾಧಾನಕರ ಬಹುಮಾನ). ಅತಿ ಹಿರಿಯರ ವಿಭಾಗ ದಲ್ಲಿ 83 ವರ್ಷದ ಸಲೀನಾ ವಾಘ್ ಬಹುಮಾನ ಪಡೆದಿದ್ದಾರೆ.

Translate »