ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’
ಮಂಡ್ಯ

ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ‘ಶೋಭಾಯಾತ್ರೆ’

December 12, 2019
  • ಗಮನ ಸೆಳೆದ ಶ್ರೀರಾಮ, ಲಕ್ಷ್ಮಣ, ಹನುಮ ವೇಷಧಾರಿಗಳು
  •  ವಿವಿಧ ಜಿಲ್ಲೆಯ ಸಾವಿರಾರು ಹನುಮ ಭಕ್ತರು ಭಾಗಿ

ಮಂಡ್ಯ, ಡಿ.11(ನಾಗಯ್ಯ)- ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಬುಧವಾರ ಹನು ಮಾನ್ ಮಾಲಾಧಾರಿಗಳ ಶೋಭಾಯಾತ್ರೆ ಸಡಗರ, ಸಂಭ್ರಮದಿಂದ ನಡೆಯಿತು.

ಬೆಳಿಗ್ಗೆ ಗಂಜಾಂನ ನಿಮಿಷಾಂಬ ದೇವಾ ಲಯ ಬಳಿಯ ಆಂಜನೇಯ ದೇಗುಲ ಬಳಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮ ಶೋಭಾ ಯಾತ್ರೆಗೆ ಚಾಲನೆ ನೀಡಿದರು.

ಬಳಿಕ ಗಂಜಾಂ ಮುಖ್ಯ ಬೀದಿ, ಕುವೆಂಪು ವೃತ್ತ, ಪುರಸಭೆ ಸರ್ಕಲ್, ಗೋವಿಂದಪ್ಪ ಬೀದಿ, ಅಂಚೆ ಕಚೇರಿ ಮಾರ್ಗವಾಗಿ ಯಾತ್ರೆಯು ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ ಮೈದಾನ ತಲುಪಿ ಸಮಾವೇಶಗೊಂಡಿತು.

ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಪುಟ್ಟ ಮಕ್ಕಳೂ ಸೇರಿದಂತೆ ಹನುಮ ಭಕ್ತರು ಆಂಜನೇಯ, ಶ್ರೀರಾಮ, ಸೀತೆ, ಲಕ್ಷ್ಮಣ ವೇಷಧಾರಿಗಳಾಗಿ ಗಮನ ಸೆಳೆ ದರು. ದಾರಿಯುದ್ದಕ್ಕೂ ಜೈ ಶ್ರೀರಾಮ್, ಜೈ ಭಜರಂಗಿ ಭಜರಂಗಿ ಘೋಷಣೆಗಳು ಮೊಳಗಿದವು. ಮಾಲಾಧಾರಿಗಳು ಭಗವಾ ಧ್ವಜಗಳನ್ನು ಬೀಸುತ್ತಿದ್ದುದು ನೋಡುಗರ ಕಣ್ಮನ ಸೆಳೆಯಿತು.

ಮಂಡ್ಯ ಮಾತ್ರವಲ್ಲದೆ ರಾಮನಗರ, ಮೈಸೂರು, ಮದ್ದೂರು, ಪಾಂಡವಪುರ, ನಾಗಮಂಗಲ, ಕೆ.ಆರ್.ಪೇಟೆ, ಶ್ರೀರಂಗ ಪಟ್ಟಣ ಸೇರಿದಂತೆ ನಾಡಿನ ಮೂಲೆ ಮೂಲೆಗಳಿಂದ ಹನುಮಾನ್ ಭಕ್ತರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸುಮಾರು 7 ಸಾವಿರಕ್ಕೂ ಹೆಚ್ಚು ಹನುಮ ಭಕ್ತರು ಈ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ರಿಂದ ಇಡೀ ಪಟ್ಟಣ ಕೇಸರಿ ವರ್ಣ ಮಯವಾಗಿ ಕಾಣುತ್ತಿತ್ತು.

ಮಾತಿನ ಚಕಮಕಿ: ಪಟ್ಟಣದ ಪುರಸಭೆ ವೃತ್ತದ ಬಳಿ ಸಂಕೀರ್ತನ ಯಾತ್ರೆ ಬಂದ ವೇಳೆ ಹನುಮ ಮಾಲಾಧಾರಿಗಳು ಜಾಮೀಯ ಮಸೀದಿ ಎದುರು ಕೆಲಕಾಲ ನಿಂತು ‘ಮಂದಿರ ಕಟ್ಟೇ ಕಟ್ಟುವೆವು’ ಎಂದು ಘೋಷಣೆ ಕೂಗುತ್ತಿದ್ದರಿಂದ ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು.

ವಿಷಯ ತಿಳಿದ ಪೊಲೀಸರು ಮಸೀದಿ ಬಳಿ ನಿಂತಿದ್ದ ಹನುಮಾನ್ ಭಕ್ತರನ್ನೆಲ್ಲಾ ಇಲ್ಲಿ ನಿಲ್ಲಬಾರದು, ಮುಖ್ಯ ರಸ್ತೆಯಲ್ಲಿ ತೆರಳುವಂತೆ ಸೂಚಿಸಿ ಬಲವಂತವಾಗಿ ಕಳುಹಿಸುವ ಪ್ರಯತ್ನ ಮಾಡಿದರು. ಈ ವೇಳೆ ಪೊಲೀಸರು ಹಾಗೂ ಮಾಲಾ ಧಾರಿಗಳ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ, ನೂಕಾಟ ನಡೆಯಿತು. ಬಳಿಕ ಹೆಚ್ಚಿನ ಸಂಖ್ಯೆಯಲ್ಲಿದ್ದ ಪೊಲೀ ಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮಾಲೆ ವಿಸರ್ಜನೆ: ಧಾರ್ಮಿಕ ವಿಧಿ ವಿಧಾನ ಗಳಂತೆ ಮಾಲಾಧಾರಿಗಳು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಾಲಯ ದಲ್ಲಿ ತಮ್ಮ ಮಾಲೆಗಳನ್ನು ವಿಸರ್ಜಿಸಿದರು. ನಂತರ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಧಾರ್ಮಿಕ ಸಭೆ ನಡೆಯಿತು.

ಧಾರ್ಮಿಕ ಸಭೆಯಲ್ಲಿ ಕೇರಳದ ವಿಶ್ವ ಹಿಂದು ಐಕ್ಯ ಸಮಾಜದ ಮುಖಂಡ ರವೀಶ್ ತಂತ್ರಿ ಕುಂಟಾರು ಮಾತನಾಡಿ, ಶಬರಿ ಮಲೆ ಮಾದರಿಯಲ್ಲಿಯೇ ಶ್ರೀರಂಗಪಟ್ಟಣ ದಲ್ಲಿ ಹನುಮಾನ್ ಮಾಲಾಧಾರಿಗಳ ಸಂಕೀ ರ್ತನಾ ಯಾತ್ರೆ ಪ್ರತಿ ವರ್ಷ ನಡೆಯಲಿದೆ ಎಂದು ತಿಳಿಸಿದರು. ರಾಜ್ಯದ ಎಲ್ಲೆಡೆ ಇರುವ ಹಿಂದೂಗಳು ಇದರಲ್ಲಿ ಪಾಲ್ಗೊಳ್ಳಲು ಪ್ರೇರೇ ಪಿಸಲಾಗುವುದು. ಹಿಂದೂ ಸಂಘಟನೆಗಳು ಈ ಯಾತ್ರೆಯ ಯಶಸ್ಸಿಗೆ ಕೈ ಜೋಡಿಸ ಬೇಕು ಎಂದು ಮನವಿ ಮಾಡಿದರು.

ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಜಿ ಮಾತ ನಾಡಿ, ಶ್ರೀರಂಗಪಟ್ಟಣ ಪವಿತ್ರ ತಾಣ. ಧಾರ್ಮಿಕ ಕ್ಷೇತ್ರ. ಋಷಿ ಮುನಿಗಳ ತಪೆÇೀ ಭೂಮಿ. ಈ ನೆಲದಲ್ಲಿ ಹತ್ತಾರು ರಾಜರು ಆಳಿದ್ದಾರೆ. ಈ ದ್ವೀಪದ ಮಹತ್ವ ಜಗತ್ತಿಗೆ ತಿಳಿಯಬೇಕಾದರೆ ಹಿಂದೂ ಧರ್ಮಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು ನಿರಂತರ ವಾಗಿ ನಡೆಯಬೇಕು ಎಂದರು.

ವೇದ ಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ಪಟ್ಟಣದ ಐತಿಹಾಸಿಕ ಮಹತ್ವ ಕುರಿತು ಮಾತನಾಡಿದರು. ವೇದಿಕೆಯಲ್ಲಿ ತೆಂಡೆಕೆರೆ ಮಠದ ಶ್ರೀಗಂಗಾಧರೇಶ್ವರ ಶಿವಾಚಾರ್ಯ ಸ್ವಾಮೀಜಿ, ಅರ್ಚಕ ಲಕ್ಷ್ಮೀಶ್, ಸೇರಿದಂತೆ ಜಿಲ್ಲೆಯಾದ್ಯಂತ ಆಗಮಿಸಿದ ಭಕ್ತಾದಿಗಳು, ಹನುಮಮಾಲಾ ಸಮಿತಿಯ ಮುಖ್ಯಸ್ಥರು ಹಾಗೂ ಸದಸ್ಯರು ಇದ್ದರು.

ಪಟ್ಟಣದಾದ್ಯಂತ ಬಿಗಿ ಭದ್ರತೆ
ನಾಡಿನ ನಾನಾ ಭಾಗಗಳಿಂದ ಹನುಮ ಮಾಲಾಧಾರಿಗಳು ಪಟ್ಟಣಕ್ಕೆ ಆಗಮಿಸಿ ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಯಾವುದೇ ಅಹಿತ ಕರ ಘಟನೆಗಳು ಸಂಭವಿಸದಂತೆ ಪಟ್ಟಣ ಹಾಗೂ ಗಂಜಾಂನಲ್ಲಿ ಶ್ರೀರಂಗಪಟ್ಟಣ ಪೊಲೀ ಸರು ಬಿಗಿಭದ್ರತೆ ಕೈಗೊಂಡಿದ್ದರು. ಟಿಪ್ಪು ಮಸೀದಿ ಬಳಿಯೂ ವಿಶೇಷ ಬಿಗಿ ಪೆÇಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಶ್ರೀರಂಗ ಪಟ್ಟಣ ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗಿತ್ತು.

Translate »