ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!
ಮಂಡ್ಯ

ಗುಡ್ಡಪ್ಪನನ್ನು ನೇಮಿಸಿದ ಚಿಕ್ಕ ಅರಸಿನಕೆರೆ ಬಸವ!

December 12, 2019

ಮಂಡ್ಯ, ಡಿ.1- ಚಿಕ್ಕಅರಸಿನಕೆರೆ ಬಸವ ತಂಪಿನ ಮಾರಮ್ಮನಿಗೆ ಗುಡ್ಡಪ್ಪ ನನ್ನು ರೋಚಕ ರೀತಿಯಲ್ಲಿ ನೇಮಕ ಮಾಡಿ ಗಮನ ಸೆಳೆಯಿತು.

ದೇವರಿಲ್ಲ, ಎಲ್ಲವೂ ಮೂಢನಂಬಿಕೆ ಎಂದು ವಾದ ಮಾಡುವ ಜನರಿರುವ ನಡುವೆ ನಗರದ ರಾಮನಹಳ್ಳಿ, ಹೊಸ ಹಳ್ಳಿಯ ಶ್ರೀತಂಪಿನ ಮಾರಮ್ಮ ದೇವ ಸ್ಥಾನಕ್ಕೆ ಗುಡ್ಡಪ್ಪನ ನೇಮಕ ಪ್ರಕ್ರಿಯೆ ಪವಾಡದಂತೆ ನಡೆಯಿತು.

ಹೇಗೆ ನಡೆಯಿತು ಪ್ರಕ್ರಿಯೆ?: ಹೊಸಹಳ್ಳಿಯ ಚನ್ನಪ್ಪ ಎಂಬುವರ ಮನೆ ಪಕ್ಕದಲ್ಲಿ ತಂಪಿನ ಮಾರಮ್ಮನ ಪುಟ್ಟ ಗುಡಿಯಿತ್ತು. ಇತ್ತೀಚೆಗೆ ಮಾರಮ್ಮ ಚನ್ನಪ್ಪರ ಪುತ್ರ ಮನು ಅವರ ಕನಸಿನಲ್ಲಿ ಬಂದು ‘ನಾನು ಇಲ್ಲೇ ನೆಲೆಸಿ ದ್ದೇನೆ. ನನಗೆ ಚನ್ನಾಗಿರುವ ಗುಡಿ ಕಟ್ಟಿಸು. ನಿನಗೆ ಒಳ್ಳೆಯದು ಮಾಡುತ್ತೇನೆ’ ಎಂದು ಹೇಳಿದ್ದಳಂತೆ. ಈ ಹಿನ್ನೆಲೆಯಲ್ಲಿ 2 ಲಕ್ಷ ರೂ. ಹಾಕಿ, ದಾನಿಗಳಿಂದ 13 ಲಕ್ಷ ರೂ. ಸಂಗ್ರಹಿಸಿ ಒಟ್ಟು 15 ಲಕ್ಷ ರೂ. ವೆಚ್ಚದಲ್ಲಿ ದೇವಾಲಯ ನಿಮಿಸಿದ್ದು, ಸೋಮವಾರ ಮತ್ತು ಮಂಗಳ ವಾರ ಲೋಕಾರ್ಪಣೆ ಕಾರ್ಯಕ್ರಮವಿತ್ತು.

ಮಾರಮ್ಮನ ದೇವಸ್ಥಾನದ ಗುಡ್ಡಪ್ಪನ ಆಯ್ಕೆಗಾಗಿ ಮಂಗಳವಾರ ಚಿಕ್ಕಅರಸಿನ ಕೆರೆ ಬಸವನನ್ನು ಕರೆಸಲಾಗಿತ್ತು. ದೇವಾ ಲಯದಿಂದ ಹನಿಯಂಬಾಡಿ ರಸ್ತೆಯ ಹೆಬ್ಬಾಳದ ಬಳಿ ಗ್ರಾಮದ 5 ದೇವರುಗಳ ಮೆರವಣಿಗೆ ತೆರಳಿ, ಬಸವನಿಗೆ ಪೂಜೆ ಪುನಸ್ಕಾರ ಮಾಡಿ ನಿಂತರು.

ಈ ವೇಳೆ ನೂರಾರು ಜನರ ನಡುವೆ ನಿಂತಿದ್ದ ಮನುವನ್ನು ಬಸವ ನೇಮಕ ಮಾಡಿತು. ಆದರೆ, ಆತ ಬಸವನ ಕಾಲಿ ಡಿದುಕೊಂಡು ನನ್ನಿಂದ ಆಗುವುದಿಲ್ಲ. ಬೇರೆ ಯವರನ್ನು ನೇಮಕ ಮಾಡು ಎಂದು ಕೋರಿದರು. ಸ್ಥಳದಲ್ಲಿದ್ದ ಜನತೆ ಎಷ್ಟೆಲ್ಲ ಬಲವಂತ ಮಾಡಿದರೂ ಅವರು ನಿರಾ ಕರಿಸಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಕದಲದೆ ನಿಂತ ಬಸವ, ಗ್ರಾಮದ ಜನತೆ ಪೂಜೆಗಳನ್ನು ತಲೆ ಮೇಲೆ ಹೊತ್ತು ಹೊರಟ ನಂತರ ದೇವಾಲಯದತ್ತ ಹೆಜ್ಜೆ ಹಾಕಿತು.

ಅರ್ಧ ಕಿ.ಮೀ. ಅಟ್ಟಿಸಿಕೊಂಡು ಬಂತು: ದೇವಾಲಯದತ್ತ ಹೊರಟ ಬಸವ ಅರ್ಧ ಕಿ.ಮೀ. ಸಾಗಿ ರಸ್ತೆಯಲ್ಲಿಯೇ ನಿಂತಿತು. ಇತ್ತ ಮನು ಅವರ ಮನವೊಲಿಕೆಗೆ ಜನರು ಕಸರತ್ತು ನಡೆಸಿದರೂ ಪ್ರಯೋಜನ ವಾಗಿರ ಲಿಲ್ಲ. ಪರಿಣಾಮ, ಪೂಜೆ ಮಾಡುವವರು ಯಾರೆಂಬ ಚಿಂತೆ ಗ್ರಾಮಸ್ಥರನ್ನು ಕಾಡಲಾರಂ ಭಿಸಿ, ಬಸವ ನಿಂತಿದ್ದ ಸ್ಥಳದಲ್ಲೇ ನಮಗೆ ಪರಿಹಾರ ಕಲ್ಪಿಸದೆ ಹೋಗಬೇಡ ಎಂದು ಮತ್ತೆ ಪೂಜೆ ಸಲ್ಲಿಸಿ ಕೋರಿಕೊಂಡರು.

ಕೆಲಹೊತ್ತು ಸುಮ್ಮನಿದ್ದ ಬಸವ ಸ್ಥಳ ದಲ್ಲಿದ್ದ ಹೊನ್ನೇಗೌಡ ಎಂಬುವರ ಪುತ್ರ ಜಗದೀಶ್ ಎಂಬಾತನತ್ತ ತೆರಳಿತು. ಆತ ಹೆದರಿ, ಅಲ್ಲಿಂದ ಹೋಗಲು ಪ್ರಯತ್ನಿಸಿ ದಾಗ ಬಿಡದ ಬಸವ ಮತ್ತೆ ಹೆಬ್ಬಾಳದ ತನಕ ಆತನನ್ನು ಅಟ್ಟಿಸಿಕೊಂಡು ಹೋಗಿ ನೀರಿನೊಳಗೆ ನೂಕಿತು. ಆತ ಕೈಮುಗಿದು ಬೇಡಿಕೊಂಡರೂ ಬಿಡಲಿಲ್ಲ.

ಬೇಡ ಎಂದವರನ್ನೂ ಅಟ್ಟಾಡಿಸಿದ ಬಸವ: ಜಗದೀಶ್ ನೇಮಕ ಮಾಡಿದ್ದಕ್ಕೆ ಆತನ ದೊಡ್ಡಪ್ಪನ ಪುತ್ರ ರಾಜಕುಮಾರ್ ಎಂಬುವರು ವಿರೋಧ ವ್ಯಕ್ತಪಡಿಸಿ, ಜೋರಾಗಿ ಮಾತನಾಡುತ್ತಿದ್ದರು. ಇದ ರಿಂದ ಕೆರಳಿದ ಬಸವ ಅವರನ್ನು ಅಟ್ಟಾ ಡಿಸಿ, ಅಂಗಿಯನ್ನು ಹರಿದು ಮತ್ತೆ ಜಗ ದೀಶ್ ನಿಂತಿದ್ದ ಹೆಬ್ಬಾಳಕ್ಕೆ ಇಳಿಯಿತು. ಮಾತು ಮುಂದುವರಿಸಿದ್ದ ರಾಜಕುಮಾರ್ ಅವರನ್ನು ಮತ್ತೆ ಅಟ್ಟಾಡಿಸಿ ಅಲ್ಲಿಂದ ದೂರ ಕಳಿಸಿತು. ನಂತರ ಜಗದೀಶ್ ಸ್ನಾನ ಮಾಡುವತನಕ ಬಿಡಲಿಲ್ಲ. ಆತ ಸ್ನಾನ ಮಾಡಿ ಪೂಜೆ ಸಲ್ಲಿಸಿದ ನಂತರ ಅಲ್ಲಿಂದ ದೇವಾಲಯದತ್ತ ಆಗಮಿಸಿತು. ಜಗದೀಶ್ ತಾತಂದಿರು ಪೂಜಾ ಕಾರ್ಯ ನೆರವೇರಿಸು ತ್ತಿದ್ದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Translate »