ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಂಡ್ಯ

ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ

December 12, 2019

ಪಾಂಡವಪುರ, ಡಿ.11- ತಾಲೂಕಿನ ಕೆಂಚನಹಳ್ಳಿ ಗ್ರಾಮದಲ್ಲಿ ಬುಧವಾರ ತಾಪಂ ಅನುದಾನದ 4.80ಲಕ್ಷ ರೂ.ವೆಚ್ಚದಡಿ ವಿವಿಧ ಕಾಮಗಾರಿಗೆ ತಾಪಂ ಸದಸ್ಯೆ ರಾಧಮ್ಮ ಚಾಲನೆ ನೀಡಿದರು.

ತಾಪಂ ಅನುದಾನದ 2.10 ಲಕ್ಷ ರೂ. ವೆಚ್ಚದಲ್ಲಿ ಗುಳ್ಳೇಗೌಡರ ಮನೆಯಿಂದ ಜವರಪ್ಪ ಮನೆಯವರೆಗಿನ 50 ಮೀ.ಮೀ. ಉದ್ದ ಕಾಂಕ್ರಿಟ್ ರಸ್ತೆ ಅಭಿವೃದ್ದಿ, 2.10 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದ ಓವರೆಡ್ ಟ್ಯಾಂಕ್‍ನಿಂದ ಸುಮಾರು 712 ಮೀ.ಮೀ. ಉದ್ದದ ಕುಡಿಯುವ ನೀರಿನ ಪೈಪ್‍ಲೈನ್ ಕಾಮಗಾರಿಗೆ, ಸುಮಾರು 52 ಸಾವಿರ ವೆಚ್ಚದಡಿ ಅಂಗನವಾಡಿ ಕಟ್ಟಡ ದುರಸ್ತಿ ಹಾಗೂ ವಿದ್ಯುತ್ ಸಂಪರ್ಕ ಕಾಮಗಾರಿಗೆ ಹಾಗೂ ಗ್ರಾಮದ ಸÀರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸುಣ್ಣಬಣ್ಣ ಹೊಡೆಯುವ ಕಾಮಗಾರಿಗೆ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ತಾಪಂ ಸದಸ್ಯರಿಗೆ ಬರುವ ಅನುದಾನ ತುಂಬ ಕಡಿಮೆ ಇದೆ. ಬರುವಷ್ಟು ಅನುದಾನವನ್ನು ಸಂಪೂರ್ಣವಾಗಿ ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುತ್ತಿದ್ದೇವೆ. ಉಳಿದಂತೆ ನಮಗೆ ನಮ್ಮ ಶಾಸಕರಾದ ಸಿ.ಎಸ್.ಪುಟ್ಟರಾಜು ಅವರಿಂದ ಸಾಕಷ್ಟು ಸಹಕಾರವನ್ನು ಪಡೆದು ಕ್ಷೇತ್ರವನ್ನು ಅಭಿವೃದ್ಧಿ ಪಡಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ಕೆಂಪೇಗೌಡ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Translate »