ಹುಲಿಕೆರೆ ಗ್ರಾಪಂ ಅವಿಶ್ವಾಸ ನಿರ್ಣಯ ಸಭೆ ರದ್ದು
ಮಂಡ್ಯ

ಹುಲಿಕೆರೆ ಗ್ರಾಪಂ ಅವಿಶ್ವಾಸ ನಿರ್ಣಯ ಸಭೆ ರದ್ದು

December 12, 2019

ಶ್ರೀರಂಗಪಟ್ಟಣ, ಡಿ.11(ವಿನಯ್ ಕಾರೇಕುರ)- ತಾಲೂಕಿನ ಹುಲಿಕೆರೆ ಗ್ರಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಅವಿಶ್ವಾಸ ನಿರ್ಣಯ ಸಭೆಯು ಕೋರಂ ಕೊರತೆಯಿಂದ ರದ್ದುಪಡಿಸಲಾಯಿತು.

ಹುಲಿಕೆರೆ ಗ್ರಾಪಂ ಅಧ್ಯಕ್ಷ ಸಿದ್ದರಾಜು ವಿರುದ್ಧ 12 ಜನ ಗ್ರಾಪಂ ಸದಸ್ಯರು ಅವಿಶ್ವಾಸ ವ್ಯಕ್ತಪಡಿಸಿ, ಪಾಂಡವಪುರ ಉಪವಿಭಾಗಾಧಿ ಕಾರಿ ಶೈಲಾಜ ಅವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವಿಶ್ವಾಸ ನಿರ್ಣಯ ಸಭೆಯನ್ನು ಕರೆಯಲಾಗಿತ್ತು. ಆದರೆ, ಸಭೆಗೆ 10 ಸದಸ್ಯರು ಗೈರಾದ ಕಾರಣ ಸಭೆಯನ್ನು ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ ರದ್ದುಪಡಿಸಿದರು. ಇದರಿಂದ ಜೆಡಿಎಸ್ ಬೆಂಬ ಲಿತ ಹಾಲಿ ಅಧ್ಯಕ್ಷ ಸಿದ್ದರಾಜು ಅಧ್ಯಕ್ಷರಾಗಿಯೇ ಮುಂದುವರೆದಿದ್ದಾರೆ.

ಒಟ್ಟು 20 ಸದಸ್ಯರ ಬಲ ಹೊಂದಿದ್ದು, ಉಪವಿಭಾಗಾಧಿಕಾರಿ ಗಳ ಆದೇಶದಂತೆ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಅವಿಶ್ವಾಸ ನಿರ್ಣಯ ಸಭೆ ಕರೆಯಲಾಗಿತ್ತು. ಸಭೆಗೆ ಕನಿಷ್ಠ 14 ಸದಸ್ಯರು ಹಾಜರಾತಿ ಅಗತ್ಯವಿತ್ತು. ಆದರೆ, ಕೇವಲ 10 ಸದಸ್ಯರು ಮಾತ್ರ ಹಾಜರಾದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದ ಸಭೆ ರದ್ದು ಪಡಿಸಲಾಯಿತು.

ಈ ವೇಳೆ ಹುಲಿಕೆರೆ ಗ್ರಾಪಂ ಪಿಡಿಓ ರಾಘವೇಂದ್ರ, ಗ್ರಾಮ ಲೆಕ್ಕಿಗ ಪುಟ್ಟಸ್ವಾಮಿ, ಸದಸ್ಯರಾದ ವಿಜಯ್, ರೇಷ್ಮಾ, ಶಿವಣ್ಣ, ಮುಖಂಡ ರಾದ ಶ್ರೀನಿವಾಸ್, ಮಧು, ಚೆಲವರಾಜು, ಜಯರಾಮ್ ಇದ್ದರು.

Translate »