ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಮಂಡ್ಯ

ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

December 12, 2019

ಭಾರತೀನಗರ, ಡಿ.11(ಅ.ಸತೀಶ್)- ಹನುಮ ಜಯಂತಿ ಅಂಗವಾಗಿ ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಬಾಳೆಮಂಡಿಯ ಸಮೀಪದ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ನಡೆಯಿತು.

ಬೆಳಗಿನಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹೋಮ, ಹವನ ಗಳನ್ನು ನಡೆಸಲಾಯಿತು. ಬಳಿಕ ಶ್ರೀರಾಮತಾರಕ ಹೋಮ ಸೇರಿದಂತೆ ಹಲವು ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಸಲಾಯಿತು. ಬಳಿಕ ಸಾರ್ವಜನಿಕರಿಗೆ ಮಜ್ಜಿಗೆ, ಪಾನಕ ಜೊತೆಗೆ ಅನ್ನಸಂತರ್ಪಣೆ ನಡೆಯಿತು. ಈ ವೇಳೆ ಮುಖಂಡರಾದ ಅನಿಲ್, ಮನೋಜ್, ಗಿರೀಶ್, ನಾರಾಯಣ, ಮಹೇಶ್, ಕಿರಣ್, ಕಾರ್ತಿಕ್, ಪ್ರದೀಪ್, ಬಸವ, ಅನಿ ಸೇರಿದಂತೆ ಇತರರಿದ್ದರು.

Translate »