ಕಠಿಣ ಪರಿಶ್ರಮ, ಶ್ರದ್ಧೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ
ಮೈಸೂರು

ಕಠಿಣ ಪರಿಶ್ರಮ, ಶ್ರದ್ಧೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ

December 29, 2019

ಮೈಸೂರು, ಡಿ.28(ಎಂಟಿವೈ)- ಕಠಿಣ ಪರಿಶ್ರಮ, ಬದ್ಧತೆ ಹಾಗೂ ಶ್ರದ್ಧೆ ಮೂಲಕ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದು ಉಪ ಲೋಕಾ ಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ 12ನೇ ಪದವೀಧರರ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಯಕ್ತಿವಾಗಿ ಸಾಧನೆ ಮಾಡುವತ್ತ ಗಮನ ಹರಿಸಬೇಕು. ಜೀವನದಲ್ಲಿ ಉತ್ತಮ ಮೌಲ್ಯ, ನೈತಿಕತೆ ಅಳವಡಿಸಿಕೊಂಡರೆ ನಿಮ್ಮ ಕಡೆಗೆ ಯಾರೂ ಬೊಟ್ಟು ಮಾಡುವುದಿಲ್ಲ. ಆ ಗುಣ ಇಲ್ಲದಿದ್ದರೆ ಎಷ್ಟೇ ಎತ್ತರಕ್ಕೆ ಏರಿದರೂ ವ್ಯರ್ಥ ವಾಗುತ್ತದೆ. ಮೌಲ್ಯಗಳು ಇದ್ದರೆ ನಮ್ಮ ಬದುಕು ಉತ್ತಮವಾಗುತ್ತದೆ ಎಂದರು.

ಯಾವುದೇ ವೃತ್ತಿಯಾಗಲಿ ಅದರಲ್ಲಿ ನಾವು ಶ್ರೇಷ್ಠತೆ ಸಾಧಿಸಬೇಕು. ಇದಕ್ಕೆ ಕಠಿಣ ಪರಿ ಶ್ರಮ, ಬದ್ಧತೆ ಹಾಗೂ ಶ್ರದ್ಧೆ ಅಗತ್ಯ. ಪ್ರತಿ ಯೊಬ್ಬರು ವೈಯಕ್ತಿಕವಾಗಿ ಸಾಧನೆ ಮಾಡಿ ದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ಯಾರೂ ಕೂಡ ಜೀವನವನ್ನು ವ್ಯರ್ಥ ವಾಗಿ ಕಳೆಯಬೇಡಿ. ಪ್ರತಿಯೊಬ್ಬರಲ್ಲೂ ಒಂದಲ್ಲಾ ಒಂದು ರೀತಿಯ ಸಾಮಥ್ರ್ಯ ಇz್ದÉೀ ಇರುತ್ತದೆ. ನಿಮ್ಮಲ್ಲಿರುವ ಸಾಮಥ್ರ್ಯ ವನ್ನು ಅರಿತು ಸಾಧಿಸುವ ಪ್ರಯತ್ನ ಮಾಡಬೇಕು. ಇದರಿಂದ ದೇಶಕ್ಕೂ ಒಳಿ ತಾಗುತ್ತದೆ ಎಂದು ಸಲಹೆ ನೀಡಿದರು.

ಬಡ ಕುಟುಂಬದಿಂದ ಬಂದಿದ್ದೇನೆ, ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿ ದ್ದೇನೆ ಎಂಬ ಕಾರಣಕ್ಕೆ ಏನು ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಕೀಳರಿಮೆ ದೂರ ಮಾಡಬೇಕು. ಛಲವೊಂದಿದ್ದರೆ ಸಾಧನೆ ಸುಲಭವಾಗಲಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಮನಸ್ಸು ಮಾಡಬೇಕು. ನಾನು ಪಿಯುಸಿ ವರೆಗೆ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದೆ. ಪದವಿಗೆ ಆಂಗ್ಲ ಮಾಧ್ಯಮಕ್ಕೆ ಸೇರಿಕೊಂಡಾಗ ಇಂಗ್ಲಿಷ್ ಅರ್ಥವಾಗದೆ ಕಣ್ಣೀರು ಸುರಿಸಿದ್ದೆ. ಆದರೆ, ನಂತರ ಛಲ ದಿಂದ ಇಂಗ್ಲಿಷ್ ಕಲಿತು ಇಂದು ಈ ಸ್ಥಾನಕ್ಕೆ ಏರಿz್ದÉೀನೆ ಎಂದು ವಿದ್ಯಾರ್ಥಿ ದೆಸೆಯಲ್ಲಿ ಎದುರಿಸಿದ ಸವಾಲುಗಳನ್ನು ವಿದ್ಯಾರ್ಥಿ ಗಳಿಗೆ ವಿವರಿಸಿ, ಸಾಧನೆಗೆ ಪ್ರೇರಣೆ ನೀಡಿದರು.

ಪದಕ ವಿಜೇತರು: ಬಿಎನಲ್ಲಿ ಎಂ. ಆಶಾ ರಾಣಿ, ಬಿಎಸ್ಸಿನಲ್ಲಿ ವಿ.ಎನ್.ಸ್ಫೂರ್ತಿ, ಬಿ.ಕಾಂ. ನಲ್ಲಿ ಬಿ.ಆರ್.ನಾಗರತ್ನ, ಬಿಬಿಎನಲ್ಲಿ ನಿಧಾ ಫಾತಿಮಾ ಭಾವನಗರಿ, ಬಿಸಿಎನಲ್ಲಿ ಯು. ಸುಮಾ, ಎಂಎ ಅರ್ಥಶಾಸ್ತ್ರದಲ್ಲಿ ಎಸ್. ಗಗನಾ, ಎಂ.ಕಾಂ.ನಲ್ಲಿ ಕೆ.ಕೆ.ಅಕ್ಷತಾ, ಎಂ.ಎಸ್ಸಿ. ರಸಾಯನಶಾಸ್ತ್ರದಲ್ಲಿ ಬಿ.ಎಸ್.ಅನುಷಾ ಪ್ರಥಮ ಸ್ಥಾನದೊಂದಿಗೆ ಪದಕ ಪಡೆದರು. ಇದೇ ವೇಳೆ ವಿವಿಧ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು 588 ಮಂದಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದ ಸಾನಿಧ್ಯವನ್ನು ಸುತ್ತೂರು ಕ್ಷೇತ್ರ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ, ಪ್ರಾಂಶುಪಾಲ ಕೆ.ವಿ.ಸುರೇಶ್, ಅಕಾಡೆಮಿಕ್ ಡೀನ್ ಡಾ.ಹೆಚ್.ಬಿ. ಸುರೇಶ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಬಿ.ಆರ್. ಶಿವ ಮೂರ್ತಿ, ಶೋಭಾ ಪಾಟೀಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Translate »