ಕಲಾಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಮುಖ್ಯ
ಮೈಸೂರು

ಕಲಾಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಮುಖ್ಯ

July 14, 2019

ಮೈಸೂರು, ಜು.13(ಎಸ್‍ಪಿಎನ್)-ಕಲಾ ಕ್ಷೇತ್ರದ ಸಾಧನೆಗೆ ಕಠಿಣ ಪರಿಶ್ರಮ ಮುಖ್ಯ. ಇಲ್ಲದಿದ್ದರೆ, ನೂರಾರು ಸಭಿಕರ ಮುಂದೆ ನೃತ್ಯ, ಸಂಗೀತ ಪ್ರದರ್ಶನ ಅಸಾಧ್ಯ ಎಂದು ರಂಗಾಯಣ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ ಅಭಿಪ್ರಾಯಪಟ್ಟರು.

ಮೈಸೂರು ಜೆಎಲ್‍ಬಿ ರಸ್ತೆಯ ನಾದ ಬ್ರಹ್ಮ ಸಭಾಂಗಣದಲ್ಲಿ ಕಲಾಸಂದೇಶ ಪ್ರತಿ ಷ್ಠಾನ ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ್ದ ಮೂರು ದಿನಗಳ ನೃತ್ಯೋಪಾಸನ-2019 ರಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಲೆ ಸಾಧಕರ ಸ್ವತ್ತೇ ಹೊರತು ಎಂದಿಗೂ ಸಾಧಕರಲ್ಲದವರ ಸ್ವತ್ತಲ್ಲ. ಈ ವಿಷಯದಲ್ಲಿ ಖ್ಯಾತ ಗಾಯಕಿ ಡಾ. ಸುಕನ್ಯಾ ಪ್ರಭಾಕರ್ ತಮ್ಮ ಕಠಿಣ ಪರಿ ಶ್ರಮದಿಂದ ಕಲಾ ಕ್ಷೇತ್ರದಲ್ಲಿ ಎತ್ತರದ ಸ್ಥಾನದಲ್ಲಿದ್ದಾರೆ. ಅವರು ಮಾತನಾಡು ವುದಕ್ಕಿಂತ ಸಂಗೀತದ ಮೂಲಕ ಪ್ರೇಕ್ಷಕ ರನ್ನು ಗಂಟೆಗಟ್ಟಲೆ ಸೆಳೆಯವ ಶಕ್ತಿ ಅವರ ಸಾಧನೆಗಿದೆ ಎಂದರು.

ಮೈಸೂರು ಒಡೆಯರ ಕಾಲದಿಂದಲೂ ಸಾಂಸ್ಕøತಿಕ ಕ್ಷೇತ್ರಕ್ಕೆ ವಿಶೇಷ ಒತ್ತು ನೀಡಿ ದ್ದಾರೆ. ಇದೀಗ ರಾಜ್ಯ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹಲವಾರು ಸಂಘ-ಸಂಸ್ಥೆಗಳು ಸಾಂಸ್ಕøತಿಕ ಕಾರ್ಯ ಕ್ರಮಗಳನ್ನು ಆಯೋಜಿಸಿವೆ. ಇದರಿಂದ `ಸಾಂಸ್ಕøತಿಕ ನಗರಿ ಮೈಸೂರು’ ಎಂಬ ಬಿರುದು ವಿಶ್ವಮಟ್ಟದಲ್ಲಿ ಹೆಸರುವಾಸಿ ಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತ ನಾಡಿದ ಡಾ.ಸುಕನ್ಯಾ ಪ್ರಭಾಕರ್, ನೃತ್ಯೋ ಪಾಸನ, ನಾದೋಪಾಸನ ಹೆಸರುಗಳಲ್ಲೇ ಸಂಗೀತ ಮತ್ತು ನೃತ್ಯದ ಆಕರ್ಷಣೆ ಇದೆ. ಈ ಹೆಸರಿನಲ್ಲಿ ನಡೆಯುತ್ತಿರುವ ನೃತ್ಯ ಪ್ರದರ್ಶನ ಕಾರ್ಯಕ್ರಮ ಯಶಸ್ವಿಯಾಗು ವುದರಲ್ಲಿ ಅನುಮಾನವಿಲ್ಲ. ಆದರೂ, ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗ ವಹಿಸಿ ಯುವ ಕಲಾವಿದರನ್ನು ಪ್ರೋತ್ಸಾ ಹಿಸಬೇಕು ಎಂದು ಹೇಳಿದರು.

ಇಂದು ಪೂಜಾದೇವ್ ಹಾಗೂ ಡಾ.ಗುಣಶೀಲ ಹರ್ಷ ಅವರಿಂದ ಭರತ ನಾಟ್ಯ ಪ್ರದರ್ಶನಗೊಂಡಿತು. ಪಕ್ಕವಾದ್ಯ ದಲ್ಲಿ ವಿದ್ವಾನ್ ಕೆ.ಸಂದೇಶ್ ಭಾರ್ಗವ್ (ನಟುವಾಂಗ), ಹಾಡುಗಾರಿಕೆ ವಿದುಷಿ ಕಾಂಚನಾ, ಎಸ್.ಶ್ರೀರಂಜನಿ, ಮೃದಂಗ ಹೆಚ್.ಎಲ್.ಶಿವಶಂಕರಸ್ವಾಮಿ, ಪಿಟೀಲು ವಿದ್ವಾನ್ ನಾರಾಯಣ್, ಕೊಳಲು ವಿ.ಪಿ.ರಾಜಗೋಪಾಲನ್ ಸಹಕರಿಸಿದ್ದರು.

ನಾಳೆ(ಜು.14) ಕೆ.ಸಂದೇಶ್ ಭಾರ್ಗವ್ ನೇತೃತ್ವದ ತಂಡ ನೃತ್ಯ ಪ್ರದರ್ಶನ ಜರುಗ ಲಿದೆ. ಪಕ್ಕವಾದ್ಯದಲ್ಲಿ ಶ್ರೀಹರ್ಷ, ಹೆಚ್.ಎಲ್. ಶಿವಶಂಕರಸ್ವಾಮಿ, ನಾರಾಯಣ್, ಕೆ. ಮುರುಳೀಧರ, ಹೆಚ್.ಎಲ್. ಅನಂತಕೃಷ್ಣ ಸ್ವಾಮಿ ಸಾಥ್ ನೀಡಲಿದ್ದಾರೆ. ಜು.15ರಂದು ಹರಿಕೃಷ್ಣನ್ ನೇತೃತ್ವದ ತಂಡ ನೃತ್ಯ ಪ್ರದ ರ್ಶನ ನೀಡಲಿದ್ದು, ಪಕ್ಕ ವಾದ್ಯದಲ್ಲಿ ಶೈಲಜಾ, ನಾರಾಯಣ್, ಕೆ.ಮುರುಳೀಧರ್, ವಿನಯ್ ಕುಮಾರ್ ಸಾಥ್ ನೀಡಲಿದ್ದಾರೆ. ವೇದಿಕೆ ಯಲ್ಲಿ ಕಲಾಪ್ರತಿಷ್ಠಾನದ ಅಧ್ಯಕ್ಷ ಡಾ.ಡಿ. ಉಮಾಪತಿ, ಕೆ.ಸಂದೇಶ್ ಭಾರ್ಗವ್, ರಾಧಿಕಾ ಸಂದೇಶ್, ಮನು ಉಪಸ್ಥಿತರಿದ್ದರು.

Translate »