ವಿಶೇಷಚೇತನ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ
ಮೈಸೂರು

ವಿಶೇಷಚೇತನ ಶಾಲೆ ಮಕ್ಕಳಿಗೆ ಸಮವಸ್ತ್ರ ವಿತರಣೆ

July 14, 2019

ಮೈಸೂರು, ಜು.13- ನಗರದ ಸರಸ್ವತಿಪುರಂ ನಲ್ಲಿರುವ ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಟ್ರಸ್ಟ್ ವತಿಯಿಂದ ಇಂದು ಚಾಮುಂಡಿ ಪುರಂನಲ್ಲಿ ರುವ ಅರುಣೋದಯ ಶಾಲೆಯ ವಿಶೇಷ ಮಕ್ಕಳಿಗೆ ಸಮವಸ್ತ್ರ (ಟೀಶರ್ಟ್) ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿ ಸಿದ್ದ ಕನ್ನಡ ಹೋರಾಟಗಾರ ಎಂ.ರಾಮೇಗೌಡರು ಜ್ಯೋತಿ ಬೆಳಗಿಸಿ ಮಾತನಾಡುತ್ತಾ, ವಿಶೇಷ ಮಕ್ಕಳ ಸರ್ವಾಂಗೀಣ ಪ್ರಗತಿಗಾಗಿ ಇಂತಹ ಸಂಸ್ಥೆಗಳು ವೈಯಕ್ತಿಕವಾಗಿ ಪಣತೊಟ್ಟು ಮುಂದೆ ಬರುವುದು ನಿಜಕ್ಕೂ ಶ್ಲಾಘನೀಯವಾದ ಕಾರ್ಯ ಎಂದು ಅಭಿಪ್ರಾಯಪಟ್ಟರು.

ಸ್ವರ ಧಾರಾ ಸಂಗೀತ ಮತ್ತು ಸಾಂಸ್ಕøತಿಕ ಟ್ರಸ್ಟ್‍ನ ಸಂಸ್ಥಾಪಕ ಅಧ್ಯಕ್ಷೆ ಕವಿತಾ ಕಾಮತ್‍ರವರು ಮಾತ ನಾಡಿ, ನಮ್ಮ ಟ್ರಸ್ಟ್ 2018ನೇ ವರ್ಷದ ಡಿ.30ರಂದು ಸ್ಥಾಪನೆಗೊಂಡಿತು. ನಮ್ಮ ಟ್ರಸ್ಟ್‍ನ ಮುಖ್ಯ ಧ್ಯೇಯ ವೆಂದರೆ ಎಲೆಮರೆಕಾಯಿಯಂತಿರುವ ಅದರಲ್ಲೂ ವಿಶೇಷ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ಅವರಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಗುರುತಿಸಿ ಅವ ರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಾಗಿದೆ. ಇಂತಹ ವಿಶೇಷ ಮಕ್ಕಳ ಶಾಲೆಗಳಿಗೆ ಭೇಟಿ ನೀಡಿ ತಿಂಗಳಿಗೆ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಯೋಜನೆಗಳಿವೆ. ಇದಕ್ಕೆ ದಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದರಿಂದ ನಾವು ಹೆಚ್ಚು ಹೆಚ್ಚು ಕಾರ್ಯಕ್ರಮ ಗಳನ್ನು ಆಯೋಜಿಸಲು ಸಾಧ್ಯವಾಗುತ್ತದೆ ಎಂದರು.

ಅರುಣೋದಯ ವಿಶೇಷ ಮಕ್ಕಳ ಶಾಲೆಯ ಸಂಸ್ಥಾಪÀಕ ಅಧ್ಯಕ್ಷ ಹಾಗೂ ಮೈಸೂರು ನಗರ ಪಾಲಿಕೆ ಸದಸ್ಯ ಮ.ವಿ.ರಾಮಪ್ರಸಾದ್ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀಮತಿ ಕವಿತಾ ಕಾಮತ್ ಪತಿ ಜಿ.ನಿತ್ಯಾನಂದ ಕಾಮತ್, ಟ್ರಸ್ಟ್‍ನ ಸದಸ್ಯರಾದ ಶ್ರೀಕಂಠರಾವ್, ಸದಾಶಿವ ಶೆಣೈ, ಶ್ರೀಮತಿ ಪ್ರೇಮ ಕುಮಾರಿ, ಶ್ರೀಮತಿ ಜಯಲಕ್ಷ್ಮಿ ನಾಯ್ಡು ಉಪಸ್ಥಿತ ರಿದ್ದರು. ಇದಾದ ನಂತರ ಸಾಂಸ್ಕøತಿಕ ಕಾರ್ಯ ಕ್ರಮಗಳು ನಡೆದವು. ಕಾರ್ಯಕ್ರಮಕ್ಕೆ ಸ್ವಾತಿ ಮತ್ತು ತಂಡ ಪ್ರಾರ್ಥನೆ ಸಲ್ಲಿಸಿದರೆ, ಮಮತ ನಿರೂಪಣೆ ಹಾಗೂ ವಂದನಾರ್ಪಣೆಗೈದರು.

Translate »