ಹೆಚ್.ಬಿ.ಮಂಜಪ್ಪ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ
ಮೈಸೂರು

ಹೆಚ್.ಬಿ.ಮಂಜಪ್ಪ ದಾವಣಗೆರೆ ಕಾಂಗ್ರೆಸ್ ಅಭ್ಯರ್ಥಿ

April 2, 2019

ಬೆಂಗಳೂರು: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಬಿ.ಮಂಪ್ಪ ಅವರನ್ನು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಕಾಂಗ್ರೆಸ್ ವರಿಷ್ಠರು ಆಯ್ಕೆ ಮಾಡಿದ್ದಾರೆ. ಹಿರಿಯ ಮುತ್ಸದ್ಧಿ ಹಾಲಿ ಪಕ್ಷದ ಶಾಸಕ ಶಾಮನೂರು ಶಿವಶಂಕರಪ್ಪ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಆಸಕ್ತಿ ತೋರಲಿಲ್ಲ. ಶಿವಶಂಕರಪ್ಪ ಅಭ್ಯರ್ಥಿ ಎಂದು ಈಗಾಗಲೇ ಎಐಸಿಸಿ ಪ್ರಕಟಿಸಿತ್ತು. ಆದರೆ ಚುನಾವಣೆಗೆ ನಿಲ್ಲಲು ಒಪ್ಪದ ಕಾರಣ ಅವರ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಆಸಕ್ತಿ ತೋರಿತ್ತು. ಆದರೆ ಅವರ ಕುಟುಂಬ ಲೋಕಸಭಾ ಚುನಾವಣಾ ಕಣಕ್ಕಿಳಿಯಲು ಆಸಕ್ತಿ ತೋರದ ಹಿನ್ನೆಲೆಯಲ್ಲಿ ಕುರುಬ ಸಮುದಾಯಕ್ಕೆ ಸೇರಿದ ಹೆಚ್.ಬಿ.ಮಂಜಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಈ ಹಿಂದೆ ಇದೇ ಸಮಾಜಕ್ಕೆ ಸೇರಿದ ಚೆನ್ನಯ್ಯ ಒಡೆಯರ್ ದಾವಣಗೆರೆ ಕ್ಷೇತ್ರದಿಂದ ಮೂರು ಬಾರಿ ಲೋಕಸಭೆ ಪ್ರವೇಶಿಸಿದ್ದರು. ಶಾಮನೂರು ಕುಟುಂಬ ಹೊರತುಪಡಿಸಿ ಇನ್ನು ಯಾವುದೇ ವೀರಶೈವ ಸಮುದಾಯದ ನಾಯಕರ ಅಭ್ಯರ್ಥಿಯನ್ನಾಗಿ ಮಾಡಿದರೆ, ಮತ ಲಭ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಅಲ್ಪಸಂಖ್ಯಾತರು ಮತ್ತು ಕುರುಬ ಮತದಾರರನ್ನು ಮುಂದಿಟ್ಟು ಕೊಂಡು ಕಾಂಗ್ರೆಸ್ ಹೊಸ ಪ್ರಯೋಗ ಮಾಡಿದೆ.

Translate »