ಮೈಸೂರು: ಮೈಸೂರಿನಲ್ಲಿ ಬುಧವಾರ ರಾತ್ರಿ ಗುಡುಗು ಸಿಡಿಲಿ ನೊಂದಿಗೆ ಧಾರಾಕಾರ ಮಳೆ ಸುರಿಯಿತು. ಇದರಿಂದ ಮರಗಳು ಧರೆಗುರುಳಿದ್ದು, ಕೆಲ ಕಾಲ ವಾಹನ ಸಂಚಾರ ಸ್ಥಗಿತಗೊಂಡು, ಜನಜೀವನ ಅಸ್ತವ್ಯಸ್ತವಾಗಿತ್ತು. ಬುಧವಾರ ರಾತ್ರಿ 7.45 ಗಂಟೆ ವೇಳೆಗೆ ಆರಂಭವಾದ ಮಳೆ 10 ಗಂಟೆಯವರೆಗೂ ಜೋರಾಗಿಯೇ ಸುರಿಯಿತು. ಮಳೆಗೆ ಕನಕದಾಸ ನಗರದ ಕೌಟಿಲ್ಯ ಸ್ಕೂಲ್ ಸಮೀಪದ ರಸ್ತೆಯಲ್ಲಿ 2 ಹಾಗೂ ಯಾದವಗಿರಿಯ ಪರಮಹಂಸ ರಸ್ತೆಯಲ್ಲಿ ಮರಗಳು ಧರೆಗುರುಳಿವೆ. ವಿಷಯ ತಿಳಿದು ಎಂಸಿಸಿ ಅಭಯ ತಂಡ ಸ್ಥಳಕ್ಕಾಗ ಮಿಸಿ ಮರವನ್ನು ತೆರವುಗೊಳಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮನೆಗಳಿಗೆ ನೀರು ನುಗ್ಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ವಿದ್ಯುತ್ ವ್ಯತ್ಯಯ: ಬುಧವಾರ ರಾತ್ರಿ ಸುರಿದ ಮಳೆಗೆ ನಗರದ ಬಹುತೇಕ ಕಡೆ ಗಳಲ್ಲಿ ವಿದ್ಯುತ್ ಕಡಿತವಾಗಿದೆ. ನಾರಾ ಯಣಶಾಸ್ತ್ರಿ ರಸ್ತೆ, ಶಾಂತಲ ಚಿತ್ರಮಂದಿರ, ಮಂಡಿಮೊಹಲ್ಲಾ ಮತ್ತಿತರೆ ಬಡಾವಣೆ ಗಳಲ್ಲಿ ಕೆಲಕಾಲ ಕಗ್ಗತ್ತಲು ಆವರಿಸಿತ್ತು.