ಇತಿಹಾಸದ ಪಾಠಗಳಿಂದ ಆಡಳಿತದಲ್ಲಿ ಸುಧಾರಣೆ ಸಾಧ್ಯ
ಮೈಸೂರು

ಇತಿಹಾಸದ ಪಾಠಗಳಿಂದ ಆಡಳಿತದಲ್ಲಿ ಸುಧಾರಣೆ ಸಾಧ್ಯ

February 17, 2019

ಮೈಸೂರು: ಸಮರ್ಥ ಆಡಳಿತದ ನಿದರ್ಶನಗಳು ಇತಿಹಾಸ ಪುಟ ಗಳಲ್ಲಿ ದಾಖಲಾಗಿದ್ದು, ಅವುಗಳನ್ನು ಅವ ಲೋಕಿಸುವ ಮೂಲಕ ಪ್ರಸ್ತುತದ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ತರಬಹುದು ಎಂದು ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.

ಮೈಸೂರಿನ ವಿಜಯನಗರ ಮೊದಲ ಹಂತದಲ್ಲಿರುವ ಭಾರತೀಯ ವಿದ್ಯಾಭವ ನದ (ಬಿವಿಬಿ) ಭವನ್ಸ್ ಪ್ರಿಯಂವದಾ ಬಿರ್ಲಾ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ (ಬಿಪಿಬಿಐಎಂ) ಸಂಸ್ಥೆ ಸಭಾಂಗಣದಲ್ಲಿ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್ ಅವರ `ರಾಜಮಾರ್ಗ’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಕ್ಲಿಷ್ಟ ಸನ್ನಿವೇಶದಲ್ಲಿ ಸಮರ್ಥ ಹಾಗೂ ಸೂಕ್ತ ನಿರ್ಧಾರದೊಂದಿಗೆ ಆಡಳಿತವನ್ನು ಸುಸೂತ್ರವಾಗಿ ನಡೆಸುವುದೇ ಉತ್ತಮ ಆಡ ಳಿತ. ಇತಿಹಾಸದ ಪುಟಗಳಲ್ಲಿ ಇಂತಹ ಅನೇಕ ನಿದರ್ಶನಗಳು ದಾಖಲಾಗಿವೆ. ಇಂದಿನ ಆಡಳಿತ ವ್ಯವಸ್ಥೆಯೂ ಸುಲಲಿತವಾಗಿ ಸಾಗಲು ಅವುಗಳ ಬಗೆಗಿನ ಅರಿವು ನಮಗೆ ಅಗತ್ಯ. ಮೈಸೂರು ಸಂಸ್ಥಾನವು ಜನಪರ ಆಡಳಿತ ನೀಡಿದ್ದು ಇಂದಿಗೂ ಜನಜನಿತ. ಅದ ರಲ್ಲೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತವು ನಾಡಿನ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡಿತು. ಹಲವು ಕ್ಲಿಷ್ಟ ಸನ್ನಿವೇಶ ಗಳು ಎದುರಾದರೂ ನಾಲ್ವಡಿಯವರು ಉತ್ತಮ ಆಡಳಿತ ನೀಡಿದರು ಎಂದು ಸ್ಮರಿಸಿದರು.

ಬಿವಿಬಿ ಹಾಗೂ ಮೈಸೂರು ಅರಮನೆ ನಡುವೆ ಅವಿನಾಭಾವ ಸಂಬಂಧವಿದೆ. ನಮ್ಮ ತಾತ ಜಯಚಾಮರಾಜ ಒಡೆಯರ್ ಬಿವಿ ಬಿಯ ಬೆಂಗಳೂರು ಕೇಂದ್ರದ ಮೊದಲ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದವರು. ನಮ್ಮ ತಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಸಹ ಮೈಸೂರು ಬಿವಿಬಿಗೆ ಅಧ್ಯಕ್ಷರಾಗಿದ್ದರು. ಹೀಗಾಗಿ ಬಿವಿಬಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಇಚ್ಛೆ ಹೊಂದಿದ್ದೆ. ಅದು ಇಂದು ನೆರವೇರಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಪುಸ್ತಕ ಕುರಿತು ಮಾತನಾಡಿದ ಬಿವಿಬಿ ಮೈಸೂರು ಕೇಂದ್ರದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ, ಐಎಎಸ್ ಎಂದರೆ `ಐ ಆ್ಯಮ್ ಸೇಫ್’ ಎಂಬರ್ಥದಲ್ಲಿ ಬಹು ತೇಕ ಐಎಎಸ್ ಅಧಿಕಾರಿಗಳು ಉಳಿದು ಬಿಡುತ್ತಾರೆ. ಆದರೆ ಕೆ.ಜೈರಾಜ್ ಆ ಗುಂಪಿಗೆ ಸೇರಿದವರಲ್ಲ. ಅವರು ಸದಾ ಸಮಾಜದ ಹಿತದೃಷ್ಟಿಯಿಂದ ಸೇವೆ ಸಲ್ಲಿಸಿದವರು. ತಮ್ಮ ಸೇವಾವಧಿಯಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೂ ಕೊಡುಗೆ ನೀಡಿದ್ದಾರೆ. ಅನೇಕ ಗ್ರಾಮಗಳಲ್ಲಿ ವಾಸ್ತವ್ಯ ಹೂಡಿದ್ದೂ ಉಂಟು. ಇಂಧನ ಇಲಾಖೆಯಲ್ಲಿ ಸೇವೆ ಸಲ್ಲಿಸುವ ವೇಳೆ ವಿದ್ಯುತ್ ಕೊರತೆ ನೀಗಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಿ ಯಶಸ್ವಿಯಾದರು ಎಂದರು.

ನರೇಂದ್ರ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅಲ್ಲಿನ ಅಭಿ ವೃದ್ಧಿಗೆ ನಾಂದಿ ಹಾಡಿದ್ದರು. ಈ ಸಂದರ್ಭ ದಲ್ಲಿ ಗುಜರಾತಿಗೆ ತೆರಳಿ ಜೈರಾಜ್ ಅಧ್ಯಯನ ನಡೆಸಿದರು. ಒಂದು ಸಂದರ್ಭದಲ್ಲಿ ಜೈರಾಜ್ ಕಾರಣಾಂತರದಿಂದ ಸ್ವಯಂ ನಿವೃತ್ತಿಗೆ ನಿರ್ಧ ರಿಸಿದ್ದರು. ಈ ವೇಳೆ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ಇವರ ಬಳಿ ಬಂದು, `ನಿಮ್ಮಂತಹ ದಕ್ಷ ಅಧಿಕಾರಿಗಳು ಇದ್ದರೆ ಮಾತ್ರವೇ ಆಡಳಿತ ಸುಸೂತ್ರವಾಗಿ ನಡೆ ಯಲು ಸಾಧ್ಯ’ ಎಂದು ಜೈರಾಜ್ ಅವರ ಮನವೊಲಿಸಿ ರಾಜೀನಾಮೆಯಿಂದ ಹಿಂದೆ ಸರಿಯುವಂತೆ ಮಾಡುತ್ತಾರೆ. ಇಂತಹ ಹತ್ತಾರು ಅನುಭವಗಳನ್ನು ಕೃತಿಯಲ್ಲಿ ಜೈರಾಜ್ ಅನಾವರಣಗೊಳಿಸಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಬಿಪಿಬಿಐಎಂ ಅಧ್ಯಕ್ಷ ನಾ.ರಾಮಾನುಜ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರ ಆಡಳಿತದ ಮೂಲಕ ರಾಜಋಷಿಯಾಗಿ ರಾಮ ರಾಜ್ಯ ವನ್ನೇ ನಿರ್ಮಿಸಿದರು ಎಂದು ಸ್ಮರಿಸಿದರು.

ಕೆ.ಜೈರಾಜ್ ಅವರು ನನಗೂ ಒಂದು ಉತ್ತಮ ಸಲಹೆ ನೀಡಿ ಸಮಸ್ಯೆಗೆ ಸಿಲುಕು ತ್ತಿದ್ದ ನನ್ನನ್ನು ಪಾರು ಮಾಡಿದ್ದಾರೆ. ನಾನು ಹೆಚ್‍ಎಂಟಿ ಇಂಟರ್‍ನ್ಯಾಷನಲ್‍ನಲ್ಲಿ ವ್ಯವ ಸ್ಥಾಪಕ ನಿರ್ದೇಶಕನಾಗಿದ್ದ ವೇಳೆ ಒಬ್ಬರು ನಮ್ಮ ಸಂಸ್ಥೆ ಮೂಲಕ ಕಲ್ಲಿದ್ದಲು ಸಾಗಾ ಣಿಕೆ ನಡೆಸಲು ಸರ್ಕಾರ ಮಟ್ಟದಲ್ಲಿ ಮಾತು ಕತೆ ನಡೆಸಲು ನನ್ನನ್ನು ಅಂದಿನ ಸಿಎಂ ಜೆ.ಹೆಚ್.ಪಟೇಲ್ ಅವರ ಬಳಿಗೆ ಕರೆದು ಕೊಂಡು ಹೋಗಿದ್ದರು. ಜೊತೆಯಲ್ಲಿ ಇದ್ದ ವರು ವಿಷಯವನ್ನು ಪ್ರಸ್ತಾಪಿಸಿದಾಗ ಸಿಎಂ ಅವರು ಕೆ.ಜೈರಾಜ್ ಅವರನ್ನು ಕರೆದು ನಮ್ಮ ಉದ್ದೇಶಿತ ಯೋಜನೆಯ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿದರು. ಎಲ್ಲವನ್ನೂ ಆಲಿಸಿದ ಜೈರಾಜ್, ಯಂತ್ರೋಪಕರಣ ತಯಾ ರಿಕೆಯಲ್ಲಿ ತೊಡಗಿರುವ ಕಂಪನಿಯ ಮೂಲಕ ಕಲ್ಲಿದ್ದಲು ವ್ಯವಹಾರ ಮಾಡುವುದು ಸೂಕ್ತ ವಲ್ಲ ಎಂದು ಸಲಹೆ ನೀಡಿದ್ದರು. ಆ ಮೂಲಕ ನನ್ನನ್ನು ಸಮಸ್ಯೆಗೆ ಸಿಲುಕದಂತೆ ಪಾರು ಮಾಡಿದ್ದಾರೆ. ಇಲ್ಲವಾಗಿದ್ದರೆ ನಾನು ಅನೇಕ ಆರೋಪಗಳಿಗೆ ಸಿಲುಕಬೇಕಾಗುತ್ತಿತ್ತು ಎಂದು ನೆನಪಿಸಿಕೊಂಡರು. ಇದಕ್ಕೂ ಮುನ್ನ ಆತ್ಮಾ ಹುತಿ ದಾಳಿಯಿಂದ ಹುತಾತ್ಮರಾದ ಯೋಧ ರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕೃತಿ ಕರ್ತೃಗಳೂ ಆದ ನಿವೃತ್ತ ಐಎಎಸ್ ಅಧಿಕಾರಿ ಕೆ.ಜೈರಾಜ್, ಬಿವಿಬಿ ಕಾರ್ಯದರ್ಶಿ ಪಿ.ಎಸ್.ಗಣಪತಿ, ಕೋಶಾಧ್ಯಕ್ಷ ಡಾ.ಎ.ಟಿ.ಭಾಷ್ಯಂ, ಅನುವಾದಕ ಅ.ನ.ಪ್ರಹ್ಲಾದರಾವ್ ಮತ್ತಿತರರಿದ್ದರು.

Translate »