ಮೈಸೂರು: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನ ಹಾಗೂ ನಾಡಿಗೆ ನೀಡಿದ ಮಹತ್ವಪೂರ್ಣ ಯೋಜನೆ ಗಳು ಹಾಗೂ ದೂರದೃಷ್ಟಿಯ ಕೊಡುಗೆ ಗಳ ಬಗ್ಗೆ ಸಾಕ್ಷ್ಯಚಿತ್ರ (ಡಾಕ್ಯುಮೆಂಟರಿ) ನಿರ್ಮಿಸಿ ಯುವ ಪೀಳಿಗೆಗೆ ಪರಿಚಯಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ ಅವರು ಇಂದಿಲ್ಲಿ ಪರಂಪರೆ ಇಲಾಖೆ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ಮೈಸೂ ರಿನ ದಸರಾ ವಸ್ತು ಪ್ರದರ್ಶನ ಆವರಣ ದಲ್ಲಿರುವ ಇಲಾಖೆ ಆಯುಕ್ತರ ಕಚೇರಿಯಲ್ಲಿ ಏರ್ಪಡಿಸಿದ್ದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜೀವನ ಮತ್ತು ಸಾಧನೆ ಕುರಿತು 2 ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ಹುಟ್ಟಿ ಬೆಳೆದು ನಾಡ ನ್ನಾಳಿದ ಒಡೆಯರ್ ನೀಡಿದ ಕೊಡುಗೆ ದೂರದೃಷ್ಟಿಯ ಮಹತ್ವದ ಯೋಜನೆಗಳು ಮಾದರಿಯಾಗಿವೆ. ರಾಜ್ಯದ ಆರ್ಥಿಕ ಅಭಿ ವೃದ್ಧಿ, ಸಾಮಾಜಿಕ ಕಳಕಳಿ, ಸಮಾನತೆ, ಬ್ಯಾಂಕುಗಳು, ಕೈಗಾರಿಕೆ, ಪ್ರಾಧಿಕಾರಗಳ ಸ್ಥಾಪನೆ, ವಿಶ್ವವಿದ್ಯಾನಿಲಯಗಳು, ಕೃಷಿ, ನೀರಾ ವರಿ, ಅಣೆಕಟ್ಟೆಗಳಂತಹ ಮಹತ್ವದ ಕೊಡುಗೆ ಯನ್ನು ನೀಡಿದ ಒಡೆಯರ್ ಅವರು ಸಮಾ ಜಕ್ಕೆ ನೀಡಿರುವುದು ನಮ್ಮ ಕಣ್ಮುಂದೆ ಕಾಣ ಸಿಗುತ್ತವೆ ಎಂದು ಸಚಿವರು ನುಡಿದರು.
ಅಂತಹ ಮಹಾನ್ ಆಡಳಿತಗಾರನ ಸೇವೆ, ಕೊಡುಗೆಗಳನ್ನು ದಾಖಲಿಸಿ ಸಾಕ್ಷ್ಯ ಚಿತ್ರದ ಮೂಲಕ ಪುಸ್ತಕ ರಚಿಸಿ ಮನೆ ಮನೆಗೆ ತಲುಪಿಸಿ, ಯುವ ಪೀಳಿಗೆಗೆ ಒಡೆಯರ್ ಸೇವೆ ಕುರಿತು ಮಾಹಿತಿ ಒದಗಿಸುವಂತೆ ಜಿ.ಟಿ. ದೇವೇಗೌಡರು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಪ್ರವಾಸೋದ್ಯಮ ಸಚಿವ ಸಾರಾ ಮಹೇಶ್ ಅವರು ಮಾತನಾಡಿ, ವಾಸ್ತು ವಿನ್ಯಾಸಕಾ ರರನ್ನು ಕರೆಸಿ ಕೆ.ಆರ್.ನಗರ ಪಟ್ಟಣವನ್ನು ಯೋಜನಾಬದ್ಧವಾಗಿ ರೂಪಿಸಿದ ಒಡೆ ಯರ್ ವಿಶ್ವಪ್ರಸಿದ್ಧವಾಗಿಸಿದ್ದಾರೆ ಎಂದರು.
ಸರ್ಕಾರ ಉರುಳಿಸಲು ಕೋಟಿ ಕೋಟಿ ರೂ.ಗಳ ಬಗ್ಗೆ ಮಾತನಾಡುತ್ತಿರುವ ರಾಜ ಕಾರಣಿಗಳು ಕುಕೃತ್ಯ ಚಿಂತನೆ ಮಾಡುತ್ತಿ ದ್ದಾರೆ. ಆದರೆ ಕೃಷ್ಣರಾಜ ಒಡೆಯರ್ ಅವರು ಕೆಆರ್‍ಎಸ್ ಡ್ಯಾಂನಂತಹ ಅಭಿವೃದ್ಧಿ ಯೋಜನೆ ಗಳನ್ನು ನೀಡಿರುವುದು ಮಾದರಿಯಾಗಿದೆ ಎಂದ ಸಚಿವರು, ಕುಕೃತ್ಯದ ಚಿಂತನೆ ನಡೆಸು ವವರು ಇದನ್ನು ಸ್ಮರಿಸಿಯಾದರೂ ಮನ ವರಿಕೆ ಮಾಡಿಕೊಳ್ಳಬೇಕು ಎಂದರು.
ಇಲಾಖೆಯು ಹೊರತಂದಿರುವ `ಚಾಮ ರಾಜನಗರ ಜಿಲ್ಲೆ ಇತಿಹಾಸ ಮತ್ತು ಪುರಾ ತತ್ವ’ ಎಂಬ ಕೃತಿಯನ್ನು ಸಚಿವದ್ವಯರು ಇದೇ ಸಂದರ್ಭ ಬಿಡುಗಡೆ ಮಾಡಿದರು. ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಆಯುಕ್ತ ಟಿ. ವೆಂಕ ಟೇಶ್, ನಿರ್ದೇಶಕ ಡಾ.ಆರ್.ಗೋಪಾಲ್, ಮೇಯರ್ ಪುಷ್ಪಲತಾ ಜಗನ್ನಾಥ್, ಉಪ ಮೇಯರ್ ಶಫೀ ಅಹಮದ್, ಪ್ರೊ. ಪಿ.ವಿ. ನಂಜರಾಜ ಅರಸ್, ಎನ್.ಎಲ್. ಸ್ವಾಮಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜೆ.ಬಿ. ಗಾಯತ್ರಿ, ಎಂ.ಜಿ.ನಾಗರಾಜು, ಡಾ. ಎಸ್. ನಾಗೇಂದ್ರಪ್ರಸಾದ್, ಎಫ್‍ಟಿ ಹಳ್ಳಿಕೇರಿ, ಎಂ.ಜಿ.ಮಂಜುನಾಥ್, ರಾಘವೇಂದ್ರಪ್ಪ, ಶೆಲ್ವಪಿಳ್ಳೆ ಅಯ್ಯಂಗಾರ್ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ 60ಕ್ಕೂ ಹೆಚ್ಚು ಇತಿಹಾಸ ಸಂಶೋಧಕರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ವಿಷಯ ಮಂಡಿಸಲಿದ್ದಾರೆ.