ಮೈಸೂರು: ಮುಕ್ತ ವಿಶ್ವವಿದ್ಯಾನಿಲಯದ ಪಠ್ಯಕ್ರಮದಲ್ಲಿ ಸಿಬಿ ಸಿಎಸ್ ಅಳವಡಿಸಿಕೊಳ್ಳಲು ಮುಂದಾಗಿದ್ದು, ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ಅಂಕಗಳನ್ನು ನಿಗದಿಗೊಳಿಸುವ ವ್ಯವಸ್ಥೆ ತರಲಾಗುವುದು ಎಂದು ಮುಕ್ತ ವಿವಿ ಕುಲಪತಿ ಡಾ.ಶಿವಲಿಂಗಯ್ಯ ಹೇಳಿದರು.
ಮೈಸೂರಿನ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿ ಷತ್ (ಎಬಿವಿಪಿ), ವಿದ್ಯಾರ್ಥಿ ಪಥ ಹಾಗೂ ವಿವಿ ಸಂಯುಕ್ತಾಶ್ರಯದಲ್ಲಿ 2 ದಿನಗಳ `ವಿದ್ಯಾರ್ಥಿ ಸಂಸ್ಕøತಿ ಚಳವಳಿ’ ಕಾರ್ಯ ಕ್ರಮ ಆಯೋಜಿಸಿದ್ದು, ಶನಿವಾರ ಉದ್ಘಾ ಟನಾ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.
ವಿವಿ ಪಠ್ಯಕ್ರಮದಲ್ಲಿ ಚಾಯ್ಸ್ ಬೇಸ್ಡ್ ಕ್ರೆಡಿಟ್ ಸಿಸ್ಟಮ್ ಮಾದರಿ ಅಳವಡಿಸಿಕೊಳ್ಳಲಾಗು ವುದು. ಜೊತೆಗೆ ಇಂದಿನ ಕಾರ್ಯಕ್ರಮ ದಲ್ಲಿ ಪ್ರಸ್ತಾಪವಾದ ಪಠ್ಯೇತರ ಚಟುವಟಿಕೆ ಗಳನ್ನೂ ಪರಿಗಣಿಸಬೇಕೆಂಬುದು ಸೂಕ್ತ ವಾಗಿದೆ. ಮುಕ್ತ ವಿವಿಯಲ್ಲಿ ಇದಕ್ಕೂ ಅಂಕ ನಿಗದಿ ಮಾಡುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಉತ್ತೇಜನ ನೀಡಲಾಗುವುದು. ವಿವಿಗೆ ಮಾನ್ಯತೆ ಬರುತ್ತಿದ್ದಂತೆ ಇಂತಹ ಕಾರ್ಯಕ್ರಮಗಳನ್ನು ಪ್ರತಿ ತಿಂಗಳು ಆಯೋ ಜಿಸಲು ಉದ್ದೇಶಿಸಲಾಗಿದೆ ಎಂದರು.
ಆಕ್ರೋಶ ವ್ಯಕ್ತಪಡಿಸಿ ಬಳಿಕ ಮರೆಯುತ್ತೇವೆ: ಉದ್ಘಾಟನೆ ನೆರವೇರಿಸಿದ ರಂಗಕರ್ಮಿ ಬಾಬು ಹಿರಣ್ಣಯ್ಯ ಮಾತನಾಡಿ, ಪುಲ್ವಾಮ ದಲ್ಲಿ ಉಗ್ರನ ಆತ್ಮಾಹುತಿ ದಾಳಿಗೆ 40ಕ್ಕೂ ಹೆಚ್ಚು ಮಂದಿ ನಮ್ಮ ಯೋಧರು ಹುತಾತ್ಮ ರಾಗಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಇಡೀ ದೇಶದಲ್ಲಿ ಒಕ್ಕೊರಲಿನಿಂದ ಆಕ್ರೋಶ ವ್ಯಕ್ತ ವಾಗುತ್ತಿದೆ. ಇಂತಹ ಘಟನೆ ನಡೆದ ಬೆನ್ನಲ್ಲಿ ಆಕ್ರೋಶ ವ್ಯಕ್ತಪಡಿಸಿ ಬಳಿಕ ಮೌನಕ್ಕೆ ಜಾರಿದರೆ ದೇಶ ಮುನ್ನಡೆಯಲು ಸಾಧ್ಯ ವಿಲ್ಲ ಎಂಬ ಎಚ್ಚರಿಕೆ ನಮ್ಮಲ್ಲಿರಬೇಕು ಎಂದು ಗಮನ ಸೆಳೆದರು.
ಸ್ವಾಮಿ ವಿವೇಕಾನಂದರು ಜಪಾನ್‍ನಲ್ಲಿ ಪ್ರವಚನ ನೀಡಿ ಹಿಂತಿರುಗುವ ವೇಳೆ, ಪ್ರವ ಚನಕ್ಕೆ ವ್ಯವಸ್ಥೆ ಮಾಡಿದ್ದ ಕಾರ್ಯಕರ್ತರು 15 ವರ್ಷದ ಬಾಲಕನನ್ನು ಕರೆದು ಸ್ವಾಮೀಜಿ ಯವರಿಗೆ ಎರಡು ಬಾಳೆಹಣ್ಣು ತಂದು ಕೊಡಲು ಹೇಳುತ್ತಾರೆ. ಆದರೆ ಆ ಬಾಲಕ ಹಲವು ತಾಸು ಪತ್ತೆಯೇ ಇರುವುದಿಲ್ಲ. ಕೊನೆಗೂ ಬಂದ ಬಾಲಕ ಸ್ವಾಮೀಜಿಯವ ರಿಗೆ ಹಣ್ಣು ನೀಡಿದಾಗ, ವಿವೇಕಾನಂದರು ತಡವಾಗಿದ್ದಕ್ಕೆ ಕಾರಣ ಕೇಳುತ್ತಾರೆ. ಅದಕ್ಕೆ ಸದರಿ ಬಾಲಕ ಪಕ್ಕದಲ್ಲೇ ಇರುವ ಅಂಗಡಿ ಯಲ್ಲಿ ಬಾಳೆ ಹಣ್ಣು ತರಲು ನಮ್ಮ ಕಾರ್ಯ ಕರ್ತರು ಹೇಳಿದ್ದರು. ಆದರೆ ಅವರಿಗೆ ಗೊತ್ತಿಲ್ಲ. ಇಂದು ಸಾರ್ವತ್ರಿಕ ರಜೆಯಾದ ಹಿನ್ನೆಲೆ ಯಲ್ಲಿ ಎಲ್ಲಾ ಅಂಗಡಿಗಳು ಬಾಗಿಲು ಹಾಕಿವೆ. ಹೀಗಾಗಿ ಹುಡುಕಾಡಿ ತರಲು ತಡ ವಾಯಿತು ಎನ್ನುತ್ತಾನೆ.
ಬಾಲಕನ ಈ ಪರಿಶ್ರಮಕ್ಕೆ ವಿವೇಕಾನಂದರು, ಏನಾದರೂ ಉಡುಗೊರೆ ಕೊಡಬೇಕೆಂದು ಆಲೋಚಿಸುತ್ತಾರೆ. `ನಿನಗೆ ಏನು ಬೇಕು’ ಎಂದು ಕೇಳಿದಾಗ, ಆ ಹುಡುಗ ಅತ್ಯಂತ ವಿನಯದಿಂದ ಹೇಳುತ್ತಾನೆ, `ಸ್ವಾಮೀಜಿ ಜಪಾನ್‍ನಲ್ಲಿ ಎರಡು ಬಾಳೆಹಣ್ಣಿಗೂ ಗತಿ ಇರಲಿಲ್ಲ ಎಂದು ನನ್ನ ದೇಶವನ್ನು ಎಲ್ಲೂ ಅವಹೇಳನ ಮಾಡಬೇಡಿ’ ಎಂದು ಕೇಳಿ ಕೊಳ್ಳುತ್ತಾನೆ. ಈ ರೀತಿ ರಾಷ್ಟ್ರಾಭಿಮಾನ ನಮ್ಮ ಯುವಪೀಳಿಗೆಯಲ್ಲಿ ಮೂಡಬೇಕು ಎಂದರು.
ಎಬಿವಿಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಕೆ.ಎನ್.ರಘುನಂದನ್ ಮಾತನಾಡಿ, ದೇಶದ ಶಿಕ್ಷಣ ವ್ಯವಸ್ಥೆ ಪಾಶ್ಚಿ ಮಾತ್ಯ ಪ್ರಭಾವದಿಂದ ಕೇವಲ ನಾಲ್ಕು ಗೋಡೆಗೆ ಸೀಮಿತಗೊಂಡಿದೆ. ಪಠ್ಯೇತರ ಚಟುವಟಿಕೆಗಳಿಗೂ ಅಂಕಗಳನ್ನು ನಿಗದಿ ಗೊಳಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗ ಬೇಕು. ಭಾರತೀಯ ಸಂಸ್ಕøತಿಯ ಹಿನ್ನೆಲೆ ಯುಳ್ಳ ಶಿಕ್ಷಣ ಪದ್ಧತಿ ನಮ್ಮ ವ್ಯವಸ್ಥೆಯಲ್ಲಿ ಜಾರಿಗೊಳ್ಳಬೇಕು ಎಂದು ಹೇಳಿದರು.
ಮೈಸೂರು ಕಾವೇರಿ ಆಸ್ಪತ್ರೆ ಅಧ್ಯಕ್ಷ ಡಾ. ಚಂದ್ರಶೇಖರ್, ಎಬಿವಿಪಿ ರಾಷ್ಟ್ರೀಯ ಉಪಾ ಧ್ಯಕ್ಷ ಡಾ.ಬಿ.ವಿ.ವಸಂತಕುಮಾರ್, ರಾಜ್ಯಾ ಧ್ಯಕ್ಷ ಡಾ.ಅಲ್ಲಮ ಪ್ರಭು, ರಾಜ್ಯ ಕಾರ್ಯ ದರ್ಶಿ ಹರ್ಷ ನಾರಾಯಣ್ ಮತ್ತಿತರರಿದ್ದರು.
ನೂರಾರು ವಿದ್ಯಾರ್ಥಿಗಳು ಭಾಗಿ: `ರಾಷ್ಟ್ರ ಪುನರ್ ನಿರ್ಮಾಣಕ್ಕಾಗಿ ವಿದ್ಯಾರ್ಥಿ ಸಂಸ್ಕøತಿ ಚಳವಳಿ’ ಶೀರ್ಷಿಕೆಯಡಿ 2 ದಿನ ಮುಕ್ತ ವಿವಿಯ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಸಮೂಹ ಮತ್ತು ವೈಯಕ್ತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಇದರಲ್ಲಿ ಭಾಗವಹಿ ಸಲು ರಾಜ್ಯದ 28 ಜಿಲ್ಲೆಗಳಿಂದ ನೂರಾರು ವಿದ್ಯಾರ್ಥಿಗಳು ಆಗಮಿಸಿದ್ದಾರೆ. ಉತ್ತಮ ಪ್ರದ ರ್ಶನಕ್ಕೆ ನಗದು ಬಹುಮಾನ ದೊರೆಯಲಿದೆ.