ಮೈಸೂರು ವಿವಿ ಕುಲಪತಿ, ಕುಲಸಚಿವರಿಗೆ ಸನ್ಮಾನ
ಮೈಸೂರು

ಮೈಸೂರು ವಿವಿ ಕುಲಪತಿ, ಕುಲಸಚಿವರಿಗೆ ಸನ್ಮಾನ

March 15, 2019

ಮೈಸೂರು: ಜ್ಞಾನ ದೇಗುಲಗಳಾದ ವಿಶ್ವವಿದ್ಯಾನಿಲಯ ಗಳ ಚುಕ್ಕಾಣಿ ಹಿಡಿದವರು, ಶ್ರದ್ಧೆ, ಬದ್ಧತೆ ಯಿಂದ ಕಾರ್ಯ ನಿರ್ವಹಿಸಬೇಕೆಂದು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಹೇಳಿದರು.

ಮೈಸೂರು ವಿಶ್ವವಿದ್ಯಾನಿಲಯ ಅಭಿ ಮಾನಿ ಉದ್ಯೋಗಿಗಳ ಬಳಗದ ವತಿಯಿಂದ ಕ್ರಾಫರ್ಡ್ ಭವನದಲ್ಲಿ ಗುರುವಾರ ಏರ್ಪ ಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮೈಸೂರು ವಿವಿ ಕುಲಪತಿ ಪ್ರೊ. ಬಿ. ಹೇಮಂತಕುಮಾರ್, ಕುಲಸಚಿವರಾದ ಪ್ರೊ.ಲಿಂಗರಾಜಗಾಂಧಿ ಹಾಗೂ ಪ್ರೊ. ಕೆ.ಎಂ.ಮಹದೇವನ್ ಅವರಿಗೆ ಗಣ್ಯರೊಡ ಗೂಡಿ ಅಭಿನಂದಿಸಿ ಅವರು ಮಾತನಾಡಿದರು.

ವಿಶ್ವವಿದ್ಯಾನಿಲಯಗಳನ್ನು ಜ್ಞಾನ ದೇಗುಲ ಗಳೆಂದು ಭಾವಿಸುತ್ತೇವೆ. ಹಾಗಾಗಿ ಚುಕ್ಕಾಣಿ ಹಿಡಿದವರು ಶ್ರದ್ಧಾಭಕ್ತಿ ಹಾಗೂ ಬದ್ಧತೆ ಯಿಂದ ಕಾರ್ಯ ನಿರ್ವಹಿಸಿದರೆ, ವಿವಿ ಗಳು ಬೆಳಗುತ್ತವೆ. ಮೇರುಕವಿ ಕುವೆಂಪು ಅವರಂತಹ ಅನೇಕ ಮಹನೀಯರು ಪ್ರತಿ ಷ್ಠಿತ ಮೈಸೂರು ವಿವಿ ಕುಲಪತಿಯಾಗಿ ಸೇವೆ ಸಲ್ಲಿಸಿದ್ದಾರೆ. ಪ್ರೊ.ಸಿಎನ್‍ಆರ್ ರಾವ್, ಗಣಿತಶಾಸ್ತ್ರ ತಜ್ಞೆ ಶಕುಂತಲಾದೇವಿ, ಸಾಹಿತಿಗಳಾದ ಆರ್.ಕೆ.ನಾರಾಯಣ್, ಆರ್.ಕೆ.ಲಕ್ಷ್ಮಣ್, ಯು.ಆರ್.ಅನಂತ ಮೂರ್ತಿ, ಉದ್ಯಮಿ ನಾರಾಯಣ ಮೂರ್ತಿ, ರಾಜಕಾರಣಿಗಳಾದ ಎಸ್.ಎಂ.ಕೃಷ್ಣ, ಬಂಗಾರಪ್ಪ, ಸಿದ್ದರಾಮಯ್ಯ ಇವರಂತಹ ಹಲವಾರು ವ್ಯಕ್ತಿಗಳನ್ನು ಸಾಹಿತ್ಯ, ರಾಜ ಕೀಯ, ಸಾಮಾಜಿಕ ಕ್ಷೇತ್ರಗಳಿಗೆ ಕೊಡುಗೆ ನೀಡಿದೆ ಎಂದು ತಿಳಿಸಿದರು.

ಹೀಗೆ ಐತಿಹಾಸಿಕ ಹಿನ್ನೆಲೆಯುಳ್ಳ ಮೈಸೂರು ವಿವಿಗೆ ಪ್ರೊ.ಜಿ.ಹೇಮಂತ್ ಕುಮಾರ್ ಅವರನ್ನು ಕುಲಪತಿಯಾಗಿ ನೇಮಿಸಿದ್ದು, ಅಭಿನಂದನಾರ್ಹ. ಇವರು ತಾಳ್ಮೆಯ ಸಾಕಾರಮೂರ್ತಿ, ಯಾರೊಂ ದಿಗೂ ಏರುಧ್ವನಿಯಲ್ಲೂ ಮಾತನಾಡಿ ದವರಲ್ಲ. ಅವರಿಗಿನ್ನೂ ಸುಮಾರು ಮೂರೂವರೆ ವರ್ಷ ಸೇವಾವಧಿಯಿದೆ. ವಿವಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಆಶಯ ಹೊಂದಿ ದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕರು, ಸಿಬ್ಬಂದಿಗಳ ಸಹಕಾರವೂ ಮುಖ್ಯ. ನಾಯಕನೊಬ್ಬನಿಂದ ಮಾತ್ರವಲ್ಲ ಇಡೀ ತಂಡದ ಪರಿಶ್ರಮದಿಂದ ಪಂದ್ಯ ಗೆಲ್ಲಲು ಸಾಧ್ಯ ಎಂದು ಅಭಿಪ್ರಾಯಿಸಿದ ಅವರು, ತಮ್ಮ ಕಚೇರಿಗೆ ಬರುವ ಕಡತ ಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ನ್ಯಾಕ್ ಮಾನ್ಯತೆಗೆ ಹಿನ್ನಡೆಯಾಗದಂತೆ ಪ್ರತಿಭಾವಂತ ಅಧ್ಯಾಪಕರನ್ನು ನೇಮಕ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.

ವಿವಿ ಕಲ್ಪನೆಗೆ ವಿರುದ್ಧ: ಮೈಸೂರು ವಿವಿ ವಿಶ್ರಾಂತ ಕುಲಸಚಿವ ಪ್ರೊ.ವಿ.ಕೆ.ನಟ ರಾಜ್ ಮಾತನಾಡಿ, ರಾಜ್ಯದಲ್ಲಿ ಒಂದೊಂದು ವಿಷಯಕ್ಕೂ ಪ್ರತ್ಯೇಕ ವಿಶ್ವವಿದ್ಯಾನಿಲಯ ಗಳ ಸ್ಥಾಪನೆಯಾಗುತ್ತಿವೆ. ಎಲ್ಲಾ ವಿಷಯ ಗಳ ಅಧ್ಯಯನವನ್ನು ಒಂದೆಡೆ ಕಲ್ಪಿಸಿ ಕೊಡುವ ವಿವಿ ಕಲ್ಪನೆಗೆ ವಿರುದ್ಧ ಬೆಳವ ಣಿಗೆ ಇದಾಗಿದೆ. ವಿವಿಗಳ ಬೆಳವಣಿಗೆಗೆ ಕಟ್ಟಡಗಳಷ್ಟೇ ಮುಖ್ಯವಲ್ಲ. ದಯಮಾಡಿ ಉತ್ತಮ ಅಧ್ಯಾಪಕರನ್ನು ನೇಮಿಸಿಕೊಳ್ಳಿ. ಒಂದೇ ಮಾದರಿಯಲ್ಲಿ ಮುನ್ನಡೆಯುವ ಬದಲು ಕ್ರಿಯಾತ್ಮಕ, ಯಶಸ್ಸಿನ ಹಾದಿಯಲ್ಲಿ ಮುಂದುವರೆಯಬೇಕೆಂದು ತಿಳಿಸಿದರು.

ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷ ರಾದ ಸ್ವಾಮಿ ಆತ್ಮಜ್ಞಾನಂದಜೀ ಮಹಾ ರಾಜ್ ಅವರು ಸಾನಿಧ್ಯ ವಹಿಸಿದ್ದ ಸಮಾ ರಂಭದಲ್ಲಿ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಮೈಸೂರು ವಿವಿ ಹಣಕಾಸು ಅಧಿಕಾರಿ ಪೆÇ್ರ.ಬಿ.ಮಹದೇವಪ್ಪ, ಸಹಾಯಕ ತೋಟ ಗಾರಿಕಾ ಅಧಿಕಾರಿ ಜಿ.ಎಂ. ಮಹದೇವ, ಮೈಸೂರು ವಿವಿ ಉದ್ಯೋಗಿಗಳ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಕೆ.ಜಿ.ಗೌಡ ಮತ್ತಿತರರು ಉಪಸ್ಥಿತರಿದ್ದರು

Translate »