ಫೇಸ್‍ಬುಕ್‍ನಲ್ಲಿ ಪರಿಚಯವಾದವನು ಮನೆ ದೋಚಿದ!
ಮೈಸೂರು

ಫೇಸ್‍ಬುಕ್‍ನಲ್ಲಿ ಪರಿಚಯವಾದವನು ಮನೆ ದೋಚಿದ!

April 30, 2019

ಬೆಂಗಳೂರು: ಯುವಕನೊಬ್ಬನಿಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ವ್ಯಕ್ತಿಯೊಬ್ಬ ಆತ್ಮೀಯವಾಗಿದ್ದುಕೊಂಡೇ ಮನೆ ದೋಚಿ ಪರಾರಿಯಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ದುಷ್ಕರ್ಮಿ ಗಳು ಅಮಾಯಕರಿಗೆ ಮೋಸ ಮಾಡುವ ಅನೇಕ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಹಾಗೆಯೇ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದ ಮಂಜುನಾಥ್ ಎಂಬ ವ್ಯಕ್ತಿಯನ್ನು ನಂಬಿ ರಂಗಪ್ಪ ಲೇಔಟ್ ನಿವಾಸಿ ರಮೇಶ್ ಮೋಸ ಹೋಗಿದ್ದಾರೆ.

ಕೆಲವು ದಿನಗಳ ಹಿಂದೆ ಫೇಸ್‍ಬುಕ್‍ನಲ್ಲಿ ರಮೇಶ್‍ಗೆ ಆರೋಪಿ ಪರಿಚಯ ವಾಗಿದ್ದನು. ಹೀಗೆ ಫೇಸ್‍ಬುಕ್‍ನಲ್ಲಿ ಮಾತನಾಡುತ್ತ ಇಬ್ಬರ ನಡುವೆ ಉತ್ತಮ ಆತ್ಮೀಯತೆ ಬೆಳೆದಿತ್ತು. ಆದರೆ ಆರೋಪಿ ಈ ಸ್ನೇಹವನ್ನೇ ಬಂಡವಾಳವನ್ನಾಗಿಸಿ ಕೊಂಡು ರಮೇಶ್ ಮನೆಯಲ್ಲಿದ್ದ ಸುಮಾರು 1.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಮೊಬೈಲ್ ದೋಚಿ ಪರಾರಿಯಾಗಿದ್ದಾನೆ. ದೂರುದಾರ ರಮೇಶ್ ಕೆಲಸ ಮಾಡುವ ಇನ್ಶ್ಯೂರೆನ್ಸ್ ಕಂಪನಿಯಲ್ಲಿ ಹಣ ಹೂಡಿಕೆ ಮಾಡೋದಾಗಿ ಮಂಜುನಾಥ್ ಹೇಳಿದ್ದನು. ಆದ್ದರಿಂದ ರಮೇಶ್ ಮಂಜುನಾಥ್ ಜೊತೆ ಸ್ನೇಹ ಬೆಳೆಸಿದ್ದನು. ಆದರೆ ತನಗೆ ಮದ್ವೆ ಫಿಕ್ಸ್ ಆಗಿದೆ ಬಟ್ಟೆ ತೆಗೆದುಕೊಳ್ಳಬೇಕು ಎಂದು ಆರೋಪಿ ರಮೇಶ್‍ನನ್ನು ಭೇಟಿಯಾಗಿದ್ದಾನೆ. ಬಳಿಕ ಸ್ವಲ್ಪ ಹೊತ್ತು ಆತ್ಮೀಯತೆ ಯಿಂದ ಮಾತನಾಡಿ ಬಾರ್‍ಗೆ ಇಬ್ಬರೂ ತೆರಳಿದ್ದಾರೆ. ಕತ್ರಿಗುಪ್ಪೆ ಸಿಗ್ನಲ್ ಬಳಿ ಇರುವ ಮಂದಾರ ಬಾರ್‍ನಲ್ಲಿ ನಾಲ್ಕು ಬಿಯರ್, ಎರಡು ಬಿರಿಯಾನಿಯನ್ನು ಮನೆಗೆ ತಂದಿದ್ದಾರೆ. ಬಳಿಕ ಬಿಯರ್‍ಗೆ ಮತ್ತು ಬರಿಸುವ ಪದಾರ್ಥ ಹಾಕಿ ಗೆಳೆಯನ ಜ್ಞಾನ ತಪ್ಪಿಸಿ ಆರೋಪಿ ಮನೆ ದೋಚಿದ್ದಾನೆ. ನಂತರ ರಮೇಶ್‍ಗೆ ಎಚ್ಚರಿಕೆಯಾದ ಬಳಿಕ ವಿಷಯ ತಿಳಿದು ಕಂಗಾಲಾಗಿ, ಪೆÇಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೆÇಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Translate »