ಕಲ್ಲೂರು ನಾಗನಹಳ್ಳಿಯಲ್ಲಿ ಶಿಲಾಯುಗದ ಬೃಹತ್ ಸಮಾಧಿಗಳು ಪತ್ತೆ
ಮೈಸೂರು

ಕಲ್ಲೂರು ನಾಗನಹಳ್ಳಿಯಲ್ಲಿ ಶಿಲಾಯುಗದ ಬೃಹತ್ ಸಮಾಧಿಗಳು ಪತ್ತೆ

January 6, 2020

ಮೈಸೂರು, ಜ.5- ಸುಮಾರು 3000 ವರ್ಷಗಳ ಹಿಂದಿನ ಕಾಲದ ಅಪರೂಪದ ಬೃಹತ್ ಶಿಲಾಯುಗ ಸಂಸ್ಕøತಿಯ ಸಮಾಧಿ ಗಳ ನಮೂನೆಗಳಲ್ಲಿ ಒಂದಾದ ಹಾಸು ಬಂಡೆ ಸಮಾಧಿಗಳು(ಡಾಲ್ಮೇನ್) ಮೈಸೂರು ತಾಲೂಕಿನ, ಇಲವಾಲ ಹೋಬಳಿಯಲ್ಲಿ ಪತ್ತೆಯಾಗಿವೆ. ಇಲವಾಲದಿಂದ 8 ಕಿ.ಮೀ ದೂರದಲ್ಲಿರುವ ಕಲ್ಲೂರು ನಾಗನಹಳ್ಳಿಗೆ ಇತಿಹಾಸದ ಬಗ್ಗೆ ಕ್ಷೇತ್ರ ಅಧ್ಯಯನ ಮಾಡಲು ಇತಿಹಾಸ ಬೋಧಕರ ತಂಡ ತೆರಳಿದಾಗ ಈ ಸಮಾಧಿಗಳು ಪತ್ತೆಯಾಗಿವೆ.

ಮೈಸೂರಿನ ಕುವೆಂಪುನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹ ಪ್ರಾಧ್ಯಾಪಕರು ಹಾಗೂ ಎನ್‍ಎಸ್‍ಎಸ್ ಅಧಿಕಾರಿಗಳಾದ ಡಾ.ಎಸ್.ಜಿ.ರಾಮದಾಸ ರೆಡ್ಡಿ, ಉಪನ್ಯಾಸಕ ಚರಣ್‍ಕುಮಾರ್ ಹಾಗೂ ಕಾಲೇಜಿನ ಎನ್‍ಎಸ್‍ಎಸ್ ಸ್ವಯಂ ಸೇವಕರೊಡನೆ ಗ್ರಾಮಕ್ಕೆ ಹೋದಾಗ ಏಳು ಮಾಸ್ತಮ್ಮ ಗುಡಿಗಳಿವೆ ಎಂದು ತಿಳಿದು ಬಂದಿದೆ. ಹತ್ತಿರ ಹೋಗಿ ನೋಡಿದಾಗ 7 ಗುಡಿಗಳೂ ಗಿಡ-ಗಂಟಿ, ಬಳ್ಳಿಗಳಿಂದ ಮುಚ್ಚಿ ಹೋಗಿದ್ದವು. ಸ್ಥಳೀಯರಾದ ಎನ್. ಎಲ್.ಪುನೀತ್, ಯೋಗಣ್ಣ ಹಾಗೂ ತುಳಸಿ ರಾಮ್ ಅವರ ಸಹಕಾರದಿಂದ ಸ್ವಚ್ಛಗೊ ಳಿಸಿ ಪರಿಶೀಲಿಸಿದಾಗ 7 ಹಾಸು ಬಂಡೆ ಸಮಾಧಿಗಳು(ಡಾಲ್ಮೇನ್) ಪತ್ತೆಯಾದವು.

ಕೆ.ಆರ್.ಸಾಗರದಿಂದ ಕೆ.ಆರ್.ನಗರಕ್ಕೆ ಹೋಗುವ ಗ್ರಾಮದ ರಸ್ತೆಯ ಪಕ್ಕದಲ್ಲಿ ಸಮಾಧಿಗಳು ಇವೆ. ಇವುಗಳನ್ನು `ಎಲ್’ ಆಕಾರದಲ್ಲಿ ಸಾಲಾಗಿ ನಿರ್ಮಿಸಲಾಗಿದೆ. 3 ಸಮಾಧಿಗಳು ದಕ್ಷಿಣಕ್ಕೆ ಮುಖ ಮಾಡಿದ್ದರೆ, ಉಳಿದ 4 ಸಮಾಧಿಗಳು ಪೂರ್ವಾಭಿಮುಖ ವಾಗಿವೆ. ಪ್ರತಿ ಸಮಾಧಿ 12 ಅಡಿ ಉದ್ದ, 8.5 ಅಡಿ ಅಗಲ ಇದೆ. ಈ ಸಮಾಧಿಗಳನ್ನು ಸ್ಥಳೀಯವಾಗಿ ಸಿಗುವ ಕಲ್ಲು, ಬಂಡೆ ಗಳನ್ನು ಬಳಸಿ ನಿರ್ಮಿಸಲಾಗಿದೆ.

ಪ್ರತೀ ಸಮಾಧಿಯನ್ನು ಗುಡಿಯ ಆಕಾರ ದಲ್ಲಿ ಕಟ್ಟಿ ಸುತ್ತಲೂ ಬಂಡೆಗಳನ್ನು ನಿಲ್ಲಿಸಿ, ಅವುಗಳ ಮೇಲೆ 6.5 ಅಡಿ ಉದ್ದದ ಹಲವು ಬಂಡೆಗಳನ್ನು ಹಾಸಿದ್ದಾರೆ. ನಂತರ ಬಂಡೆ ಗಳನ್ನು ಸುತ್ತುವರಿದು ಸ್ಥಳೀಯವಾಗಿ ಸಿಗುವ ಕಲ್ಲುಗಳನ್ನು ಬಳಸಿ ಕಟ್ಟಡ ಕಟ್ಟಿದ್ದಾರೆ. ಇವು ವಿಶೇಷವಾದ ಹಾಗೂ ಕರ್ನಾಟಕದಲ್ಲೇ ಅಪರೂಪದ ಸಮಾಧಿಗಳಾಗಿವೆ. ಇದೇ ತರ ಹದ ಸಮಾಧಿಗಳು ನಾನು ಕ್ಷೇತ್ರ ಕಾರ್ಯ ನಡೆಸುವಾಗ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸೋಮಗುದ್ದು ಗ್ರಾಮದಲ್ಲಿ ಶೋಧ ಆಗಿವೆ ಹಾಗೂ ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ರಾಜ್ಯಗಳಲ್ಲಿಯೂ ಕಂಡು ಬಂದಿವೆ ಎಂದು ರಾಮದಾಸ ರೆಡ್ಡಿ ವಿವರಿಸಿದ್ದಾರೆ.

ಈ 7 ಸಮಾಧಿಗಳಿರುವ ಪ್ರದೇಶವು 3000 ವರ್ಷಗಳಿಗೂ ಹಿಂದಿನದಾಗಿದೆ. ಇಲ್ಲಿನ ಮೆಘಾ ಲಿಥಿಕ್ ರಚನೆಗಳು 800ರಿಂದ 200 ಬಿಸಿಇ (ಬಿಫೋರ್ ಕಾಮನ್ ಎರಾ) ಕಾಲದವಾ ಗಿವೆ. 1200 ಬಿಸಿಇ ಇಂದ 200 ಸಿಇ (ಕರೆಂಟ್ ಎರಾ) ನಡುವಿನ ಕಾಲಾವಧಿಯಲ್ಲಿ 1000 ವರ್ಷಗಳ ಕಾಲವನ್ನು ಐರನ್ ಏಜ್ (ಉಕ್ಕು ಬಳಕೆಯ ಕಾಲ) ಎಂದು ಗುರುತಿಸಲಾಗಿದೆ. ಬಿಸಿಇ ಮತ್ತು ಸಿಇ ಕಾಲಾವಧಿಯನ್ನು ಕ್ರಮವಾಗಿ ಡಿಯೋನಿಷಿಯನ್ ಬಿಸಿ (ಬಿ ಫೋರ್ ಕ್ರೈಸ್ಟ್-ಕ್ರಿಸ್ತ ಪೂರ್ವ) ಮತ್ತು ಎಡಿ (ಅನ್ನೊಡೊಮಿನಿ-ಕ್ರಿಸ್ತಶಕ)ಗೆ ಪರ್ಯಾಯವಾಗಿ ಪರಿಗಣಿಸಲಾಗಿದೆ.

ಈ ಸಮಾಧಿಗಳನ್ನು 7 ಮಾಸ್ತಮ್ಮರೆಂದು ನಂಬಿರುವ ಗ್ರಾಮದ ಜನ ಪ್ರತೀ ವರ್ಷ ಶಿವರಾತ್ರಿ ಅಮಾವಾಸ್ಯೆಯ ದಿನ ಭಕ್ತಿ ಭಾವ ದಿಂದ ಪೂಜೆ ಮಾಡುತ್ತಾರೆ ಎಂದು ಗ್ರಾಮದ ಮುಖಂಡ ಯೋಗಣ್ಣ ತಿಳಿಸಿದರು. ಗ್ರಾಮ ದಲ್ಲಿ 11 ವೀರಮಾಸ್ತಿ ಕಲ್ಲುಗಳಿದ್ದು, ಅವು ಗಳಲ್ಲಿ ವಿಶೇಷವಾದ ಪೆಣ್ಬುಯ್ಯಲ್ ವೀರ ಗಲ್ಲು, ತುರುಗಳ್ಳರ ವೀರಗಲ್ಲು, ಮಾಸ್ತಿ ಕಲ್ಲು, ಒಕೈಮಾಸ್ತಿ ಕಲ್ಲು ಇತರೆ ಶಿಲ್ಪಗಳು ಇವೆ. ಹೊಯ್ಸಳರ ಕಾಲದ ಬ್ರಹ್ಮಲಿಂಗೇ ಶ್ವರ ದೇವಾಲಯವೂ ಗ್ರಾಮದಲ್ಲಿದೆ. ಇವೆಲ್ಲಾ ಗ್ರಾಮದ ಹಾಗೂ ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಅಂಶಗಳಾಗಿದ್ದು ಸಂರಕ್ಷಿಸಬೇಕಾದ ಅಗತ್ಯ ವಿದೆ. ಅಲ್ಲದೇ, ನಿಧಿ ಶೋಧನೆ ನಡೆಸಿ ಕಳವು ನಡೆಸುವವರ ಸಂಭಾವ್ಯ ದಾಳಿ ಗಳಿಂದಲೂ ಈ ಅಪರೂಪದ ಶಿಲಾ ಯುಗ ಸಮಾಧಿಗಳನ್ನು ರಕ್ಷಿಸಬೇಕಿದೆ.

Translate »