ಸಿಎಎಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ
ಮೈಸೂರು

ಸಿಎಎಯಿಂದ ದೇಶದ ಯಾವುದೇ ಪ್ರಜೆಗೂ ತೊಂದರೆ ಇಲ್ಲ

January 6, 2020

ಮೈಸೂರು, ಜ.5(ಪಿಎಂ)- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆಯಿಂದ (ಸಿಎಎ) ದೇಶದ ಯಾವುದೇ ಪ್ರಜೆಯ ಪೌರತ್ವಕ್ಕೆ ತೊಂದರೆ ಇಲ್ಲ. ಆದರೆ ವಿಪಕ್ಷಗಳು ರಾಜಕೀಯ ಲಾಭಕ್ಕಾಗಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿವೆ ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದರು.

ಮೈಸೂರಿನ ವಿದ್ಯಾರಣ್ಯಪುರಂನ ತಮ್ಮ ಕಚೇರಿ ಯಲ್ಲಿ ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಪಕ್ಷದ ಕಾರ್ಯಕರ್ತರು ಹಾಗೂ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳಿಗಾಗಿ `ಪೌರತ್ವ ತಿದ್ದುಪಡಿ ಕಾಯ್ದೆ’ ಕುರಿತು ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಸಿಎಎ ವಿಚಾರದಲ್ಲಿ ದೇಶದಾದ್ಯಂತ ಕಾಂಗ್ರೆಸ್ ಪಕ್ಷ ಅಪಪ್ರಚಾರದಲ್ಲಿ ತೊಡಗಿದೆ. ಕಾಂಗ್ರೆಸ್ ಹುನ್ನಾರ ವನ್ನು ಬಯಲಿಗೆಳೆಯಬೇಕಿದ್ದು, ಆ ಮೂಲಕ ಈ ಕಾಯ್ದೆಯಿಂದ ದೇಶದ 130 ಕೋಟಿ ಜನರಿಗೂ ಯಾವುದೇ ತೊಂದರೆ ಇಲ್ಲ ಎಂಬುದನ್ನು ಮನ ದಟ್ಟು ಮಾಡಿಕೊಡಬೇಕಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಮನೆ ಮನೆಗೆ ತೆರಳಿ ಸಾರ್ವ ಜನಿಕರಿಗೆ ಸಿಎಎಯಿಂದ ಯಾವುದೇ ಸಮಸ್ಯೆ ಇಲ್ಲ ಎಂಬ ಮಾಹಿತಿ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳ ಲಾಗುವುದು. ಜ.12ರಂದು ಮುಸಲ್ಮಾನ ಬಾಂಧವರು ಹೆಚ್ಚಿರುವ ಮೊಹಲ್ಲಾಗಳನ್ನು ವಿಶೇಷವಾಗಿ ಗಮನ ದಲ್ಲಿರಿಸಿಕೊಂಡು ಕೃಷ್ಣರಾಜ ಕ್ಷೇತ್ರದಲ್ಲಿ ಸಿಎಎ ಸಂಬಂಧ ಅರಿವು ಮೂಡಿಸಲು ಉದ್ದೇಶಿಸಲಾಗಿದೆ. ಅಂದು ಬೆಳಿಗ್ಗೆ 7ರಿಂದ ಕ್ಷೇತ್ರದಲ್ಲಿ ಈ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾಯ್ದೆ ಕುರಿತು ಅರಿವು ಮೂಡಿಸಲು ಮನೆ ಮನೆ ಪ್ರವಾಸ, ಚಾಯ್ ಪೇ ಚರ್ಚಾ ಎಂಬ ಕಾರ್ಯ ಕ್ರಮಗಳನ್ನು ಆಯೋಜಿಸಲಾಗುವುದು. ವಕೀಲರು, ವೈದ್ಯರು, ಲೆಕ್ಕ ಪರಿಶೋಧಕರು, ಶಿಕ್ಷಕರು, ಬುದ್ಧಿ ಜೀವಿಗಳನ್ನು ಒಳಗೊಂಡಂತೆ ದೊಡ್ಡ ಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗುವುದು ಎಂದು ತಿಳಿಸಿದರು.

ಇದೇ ವೇಳೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಕೃಷ್ಣರಾಜ ಕ್ಷೇತ್ರದಲ್ಲಿ ನಡೆಯುವ ಕಾರ್ಯಕ್ರಮಗಳ ಸಂಯೋಜಕರಾಗಿ ನಗರಪಾಲಿಕೆ ಸದಸ್ಯ ಹಾಗೂ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್ ಅವರನ್ನು ನೇಮಿಸಲಾಯಿತು.

ಬಿಜೆಪಿ ಮುಖಂಡರಾದ ಮಲ್ಲಪ್ಪಗೌಡ, ಮೈ.ಪು. ರಾಜೇಶ್, ಬಿ.ಪಿ.ಮಂಜುನಾಥ್, ವಿದ್ಯಾ ಅರಸ್, ಬಾಲಕೃಷ್ಣ, ಕೆಆರ್ ಕ್ಷೇತ್ರದ ನಗರ ಪಾಲಿಕೆ ಸದಸ್ಯರು, ಮಂಡಲ ಪದಾಧಿಕಾರಿಗಳು, ಶಕ್ತಿಕೇಂದ್ರದ ಪ್ರಮು ಖರು, ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳು ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

Translate »