ರಾಕ್ಷಸ ಪಾತ್ರಗಳಲ್ಲೂ ಒಳ್ಳೆಯ ಗುಣ ಗುರುತಿಸಿದ ಕುವೆಂಪು: ಗುರುದತ್ತ
ಮೈಸೂರು

ರಾಕ್ಷಸ ಪಾತ್ರಗಳಲ್ಲೂ ಒಳ್ಳೆಯ ಗುಣ ಗುರುತಿಸಿದ ಕುವೆಂಪು: ಗುರುದತ್ತ

January 6, 2020

ಮೈಸೂರು,ಜ.5(ಎಸ್‍ಪಿಎನ್)-ಬೌದ್ಧಿಕ ವಾಗಿ ರಾಕ್ಷಸ ಅಂದರೆ, ಸಿನಿಮಾ, ನಾಟಕ, ಹಾಗೂ ಪುರಾಣದಲ್ಲಿ ತೋರಿದಂತೆ ಅಲ್ಲ. ಬದಲಾಗಿ ಪಕ್ಕದ ಪಾಕಿಸ್ತಾನದಲ್ಲಿ ಪ್ರತ್ಯಕ್ಷವಾಗಿ ನಡೆಯುತ್ತಿರುವ ರಾಕ್ಷಸೀ ಕೃತ್ಯಗಳನ್ನು ನಾವು ಉದಾಹರಣೆಯಾಗಿ ತೆಗೆದುಕೊಳ್ಳಬಹುದು ಎಂದು ಮೈಸೂರು ವಿವಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿವೃತ್ತ ಪ್ರಾಧ್ಯಾಪಕ ಡಾ. ಪ್ರಧಾನ ಗುರುದತ್ತ ಅಭಿಪ್ರಾಯಪಟ್ಟರು.

ಮೈಸೂರು ಜೆ.ಪಿ.ನಗರದಲ್ಲಿರುವ ಡಾ.ಪುಟ್ಟ ರಾಜ ಗವಾಯಿ ಕ್ರೀಡಾಂಗಣದ ಯೋಗ ಮಂದಿರ ದಲ್ಲಿ ವಿಶ್ವಮಾನವ ಕುವೆಂಪು ಒಕ್ಕಲಿಗರ ಕ್ಷೇಮಾ ಭಿವೃದ್ಧಿ ಸಂಘದ ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ಕುವೆಂಪು ರಚಿತ `ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ರಾವಣ, ಕುಂಭ ಕರ್ಣರನ್ನು ರಾಕ್ಷಸರಂತೆ ಗುರುತಿಸಿಲ್ಲ. ಬದ ಲಾಗಿ ಅವರು, ತಮ್ಮ ಆಡಳಿತದಲ್ಲಿ ಸ್ವಹಿತಾಸಕ್ತಿ ಯನ್ನು ಕಾಪಾಡಿಕೊಳ್ಳಲು ಅಥವಾ ಆಡಳಿತ ವೈಖರಿ ಬಗ್ಗೆ ಪ್ರಜೆಗಳು ಎದುರು ಮಾತನಾಡ ದಂತೆ ನೋಡಿಕೊಳ್ಳಲು ಬೌದ್ಧಿಕವಾಗಿ ಅನುಸರಿ ಸುತ್ತಿದ್ದ ರಕ್ಷಣಾತ್ಮಕ ರಾಕ್ಷಸೀ ಕೃತ್ಯಗಳಿಂದ ಗುರು ತಿಸಿದ್ದಾರೆ ಎಂದು ಅವರು ವಿವರಿಸಿದರು.

ರಾಮಾಯಣದಲ್ಲಿ ಬರುವ ರಾಕ್ಷಸ ಪಾತ್ರ ಗಳಲ್ಲೂ ಒಳ್ಳೆಯ ಗುಣ ಗಳನ್ನು ಕುವೆಂಪು ವಿವ ರಿಸಿದ್ದಾರೆ. ಸಮಾಜ ದಲ್ಲಿ ಎಲ್ಲರೂ ಸಮಾ ನರು ಎಂದು ಕರೆದಿ ದ್ದಾರೆ. ಹೀಗೆ ಅನೇಕ ಉದಾಹರಣೆಗಳನ್ನು ಕಾಣ ಬಹುದು ಎಂದು ತಿಳಿಸಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ, ಪ್ರಸ್ತುತ ಜಗತ್ತು ಯಾಂತ್ರಿಕ ವಿದ್ಯಮಾನದೊಂದಿಗೆ ಬದುಕುತ್ತಿರುವುದರಿಂದ ಜನರಲ್ಲಿ ವಿಶ್ವಮಾನವ ಕಲ್ಪನೆ ಬದಲಾಗಿದೆ. ಆದರೆ, ಯಾವುದೇ ವ್ಯಕ್ತಿ ತನ್ನ ವೃತ್ತಿಗೆ ಸೀಮಿತವಾಗದೇ ವಿಶ್ವರೂಪದಲ್ಲಿ ತನ್ನ ಜ್ಞಾನ ವಿಸ್ತರಿಸಿಕೊಳ್ಳಬೇಕು ಎಂಬುದು ಕುವೆಂಪು ಅವರ ಪರಿಕಲ್ಪನೆಯಾಗಿತ್ತು ಎಂದರು.

ಪ್ರಸ್ತುತ ಶಾಲಾ-ಕಾಲೇಜು ಮಕ್ಕಳಲ್ಲಿ ಕುವೆಂಪು ವಿಚಾರಗಳು ಮರೆಯಾಗುತ್ತಿವೆ. ಇವರ ವಿಚಾರ ಧಾರೆಗಳು ಸದಾ ಮಕ್ಕಳ ಮನಸಿನಲ್ಲಿ ಉಳಿಯ ಬೇಕಾದರೆ, ಅವರ ಬಗ್ಗೆ ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಿ, ಕುವೆಂಪು ವಿಚಾರಧಾರೆಗಳು ಸದಾ ಮಕ್ಕಳ ಮನಸ್ಸಿನಲ್ಲಿ ಉಳಿಯುವಂತೆ ಮಾಡು ವುದು ಶಿಕ್ಷಕರ ಜವಾಬ್ದಾರಿ ಎಂದರು.

ಸಮಾಜದಲ್ಲಿ ವಿಶ್ವಮಾನವ ಪರಿಕಲ್ಪನೆ ಯಾರಿಗೆ ಬೇಕು ಎಂಬುದನ್ನು ಗುರುತಿಸುವುದೇ ಸರ್ಕಾರಕ್ಕೆ ಸವಾಲಾಗಿದೆ. ಸಮಾಜದ ಸಂಕುಚಿತ ಮನಸ್ಥಿತಿಯಿಂದ ನಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಯಾರು ಆದರ್ಶವಾಗಿ ತೋರಿಸಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವಿಶ್ವಮಾನವ ಕುವೆಂಪು ಒಕ್ಕಲಿಗರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಕೆ.ಎಸ್.ಕೃಷ್ಣ, ಎಫ್‍ಕೆ ಸಿಸಿಐ ಮಾಜಿ ಅಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ, ನಗರಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್, ಶಾಂತಮ್ಮ ವಡಿವೇಲು, ಉದ್ಯಮಿ ಎಚ್.ಸಿ.ಕೃಷ್ಣ ಕುಮಾರ್ ಸಾಗರ್, ಕಸಾಪ ಜಿಲ್ಲಾ ಕಾರ್ಯ ದರ್ಶಿ ಕೆ.ಎಸ್.ನಾಗರಾಜು, ಸಂಘದ ಉಪಾ ಧ್ಯಕ್ಷ ಜಯರಾಮೇಗೌಡ, ಕಾರ್ಯದರ್ಶಿ ಎ.ಎಸ್.ಶಿವಕುಮಾರ್, ಸಹ ಕಾರ್ಯದರ್ಶಿ ವಿ.ಕೆ.ಹೇಮಲತಾ, ಬಿ.ಬಸವರಾಜು, ಕೆ.ಎಸ್. ಶಿವಣ್ಣ, ಕೆ.ಎನ್.ಜಿಂಗೇಗೌಡ, ಮೇ.ಸು.ನಿಂಗೇ ಗೌಡ, ಕೆ.ಎಲ್.ಸುಧೀರ್, ದೇವರಾಜ್ ಎಂ.ಗೌಡ, ಎಚ್.ತಿಲಕ್, ಡಾ. ವಿನಯ್ ಬಿ.ರಾಘವೇಂದ್ರ, ಆರ್.ಗೋವಿಂದೇಗೌಡ, ಬಿ.ತೇಜಸ್ವಿನಿ ಸೇರಿದಂತೆ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Translate »