ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ಸಾವಿತ್ರಿ ಬಾಪುಲೆ
ಮೈಸೂರು

ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಿದ ಸಾವಿತ್ರಿ ಬಾಪುಲೆ

January 6, 2020

ಮೈಸೂರು, ಜ.5(ಪಿಎಂ)- ಸಾಮಾಜಿಕ ಅಡೆತಡೆಗಳ ನಡುವೆ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ಯಶಸ್ವಿಯಾದ ಸಾವಿತ್ರಿ ಬಾಪುಲೆ ಈ ರಾಷ್ಟ್ರ ಕಂಡ ಧೀಮಂತ ಮಹಿಳೆ ಎಂದು ಲೇಖಕ ಸಿದ್ದಸ್ವಾಮಿ ಸ್ಮರಿಸಿದರು.

ಮೈಸೂರಿನ ಅಶೋಕಪುರಂ ಉದ್ಯಾನವನದ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಬಳಿ ಅಶೋಕ ಪುರಂ ಯುವಕರ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಸಾವಿತ್ರಿ ಬಾಪುಲೆ ಅವರ ಜಯಂತಿ ಆಚರಣೆಯಲ್ಲಿ ಸಾವಿತ್ರಿ ಬಾಪುಲೆ ಅವರ ಛಾಯಾಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಅವರು ಮಾತನಾಡಿದರು.

ಬಡ ಮತ್ತು ದಲಿತ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಸಾವಿತ್ರಿ ಬಾಪುಲೆ ಅಂದು ಅಪಾರವಾಗಿ ಶ್ರಮಿಸಿದ್ದಾರೆ. ಜ್ಯೋತಿ ಬಾಪುಲೆ ಅವರು ಪತ್ನಿ ಸಾವಿತ್ರಿ ಬಾಪುಲೆ ಅವರಿಗೆ ಅಕ್ಷರ ಕಲಿಸಿದರು. ಅಲ್ಲದೆ, ಹೆಣ್ಣು ಮಕ್ಕಳಿಗೆ ವಿದ್ಯೆ ಕಲಿಸುವ ಸಾವಿತ್ರಿಯವರ ಸಾಮಾ ಜಿಕ ಸೇವೆಯನ್ನು ಪ್ರೋತ್ಸಾಹಿಸಿದರು. ಇಂತಹ ಆದರ್ಶ ದಂಪತಿ ಸ್ಮರಿಸಿ ಅವರ ಆದರ್ಶ ಮೈಗೂಡಿಸಿಕೊಳ್ಳಬೇಕು ಎಂದರು.

ನಗರಪಾಲಿಕೆ ಸದಸ್ಯೆ ಪಲ್ಲವಿ ಬೇಗಂ ಮಾತನಾಡಿ, ಸಾವಿತ್ರಿ ಬಾಪುಲೆಯವರ ಸಾಮಾಜಿಕ ಕಾರ್ಯವನ್ನು ಇಂದಿನ ಹೆಣ್ಣು ಮಕ್ಕಳು ಸ್ಮರಿಸಬೇಕು. ಜೊತೆಗೆ ಅವರ ದಾರಿಯಲ್ಲಿ ಸಾಗುವ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಚಿಂತಕರಾದ ಶ್ರೀನಿವಾಸ್, ಗಿರಿ ಬನವಾಳು, ಅಶೋಕಪುರಂ ಅಭಿಮಾನಿ ಬಳಗದ ವಿಷ್ಣು ಪ್ರಸಾದ್, ಮುಖಂಡರಾದ ಉಮೇಶ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

Translate »