ಡಾ.ವಿಷ್ಣು ಸ್ಮರಣಾರ್ಥ ಸಂಗೀತ ಸಂಜೆ
ಮೈಸೂರು

ಡಾ.ವಿಷ್ಣು ಸ್ಮರಣಾರ್ಥ ಸಂಗೀತ ಸಂಜೆ

January 6, 2020

ಮೈಸೂರು, ಜ.5(ಎಂಕೆ)- ಮೈಸೂರಿನ ಅಗ್ರಹಾರ ವೃತ್ತದಲ್ಲಿ ಪಾತಿ ಫೌಂಡೇಶನ್ ವತಿಯಿಂದ ಡಾ.ವಿಷ್ಣುವರ್ಧನ್ ಅವರ 10ನೇ ವರ್ಷದ ಸ್ಮರಣಾರ್ಥ ಸಂಗೀತ ಸಂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಡಾ.ವಿಷ್ಣುವರ್ಧನ್ ಹಾಗೂ ಕೃಷ್ಣೈಕ್ಯರಾದ ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸ್ಮರಿಸಲಾಯಿತು. ನಂತರ ಪಾತಿ ಫೌಂಡೇಶನ್ ನಿರ್ಮಿಸಿರುವ ‘ನನ್ನ ಹೆಸರು ಕಿಶೋರ’ ಚಿತ್ರದ ಆಡಿಯೋ ಸಿಡಿಯನ್ನು ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ ಬಿಡುಗಡೆ ಮಾಡಿದರು.

ಬಳಿಕ ಶಾಸಕ ಎಲ್.ನಾಗೇಂದ್ರ ಮಾತನಾಡಿ, ವಿಷ್ಣುವರ್ಧನ್ ಮೈಸೂರಿನಲ್ಲಿ ಹುಟ್ಟಿಬೆಳೆ ದವರು. ಅವರ ಸಮಾಧಿ ಮೈಸೂರಿನಲ್ಲೇ ಆಗುತ್ತಿರುವುದು ವಿಷ್ಣು ಅಭಿಮಾನಿಗಳಿಗೆ ಹರ್ಷ ತಂದಿದೆ. ಮೈಸೂರಿನಲ್ಲಿ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನನ್ನ ಹೆಸರು ಕಿಶೋರ ಚಿತ್ರದಲ್ಲಿ ಮಕ್ಕಳಿಗೆ ಅವಕಾಶ ನೀಡಿರುವುದು ಶ್ಲಾಘನೀಯ ಎಂದರು.

ಬಿಜೆಪಿ ಮುಖಂಡ ಬಿ.ಪಿ.ಮಂಜುನಾಥ್, ಪಾಲಿಕೆ ಸದಸ್ಯರಾದ ಮಾವಿ ರಾಮ್‍ಪ್ರಸಾದ್, ಸೌಮ್ಯ ಉಮೇಶ್, ರಮೇಶ್, ಲೋಕೇಶ್ ಪ್ರಿಯಾ, ಮಾಜಿ ಸದಸ್ಯ ಪ್ರಶಾಂತ್ ಗೌಡ, ಶ್ರೀನಾಥ್‍ಬಾಬು, ಲಕ್ಷ್ಮಿದೇವಮ್ಮ, ಹಿಂದೂಮತಿ ಶೇಖರ್, ಪಾತಿ ಫೌಂಡೇಶನ್ ಅಧ್ಯಕ್ಷ ಎಂ.ಡಿ.ಪಾರ್ಥಸಾರಥಿ, ಮೈಕ್ ಚಂದ್ರು, ವಿಕ್ರಂ ಅಯ್ಯಂಗಾರ್ ಮತ್ತಿತರರು ಉಪಸ್ಥಿತರಿದ್ದರು.

Translate »