ಪೊಲೀಸ್, ನ್ಯಾಯಾಂಗ ಇಲಾಖೆಯಿಂದ ಮಾನವ ಹಕ್ಕುಗಳ ರಕ್ಷಣೆ
ಮೈಸೂರು

ಪೊಲೀಸ್, ನ್ಯಾಯಾಂಗ ಇಲಾಖೆಯಿಂದ ಮಾನವ ಹಕ್ಕುಗಳ ರಕ್ಷಣೆ

February 26, 2019

ತಿ.ನರಸೀಪುರ: ಮಾನವ ಹಕ್ಕುಗಳ ರಕ್ಷಣೆಯಲ್ಲಿ ಪೊಲೀಸ್ ಹಾಗೂ ನ್ಯಾಯಾಂಗ ಇಲಾಖೆಗೆ ಹೆಚ್ಚಿನ ಜವಾಬ್ದಾರಿ ಇದೆ ಎಂದು ಪಟ್ಟಣದ ಜೆಎಂ ಎಫ್‍ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎ. ನಾಗಿರೆಡ್ಡಿ ಹೇಳಿದರು.

ಪಟ್ಟಣದ ಬೈರಾಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೆಹಲಿಯ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕು ಘಟಕ ಪ್ರಾರಂಭೋ ತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸಂವಿಧಾನದ ಪ್ರಕಾರ ಪ್ರತಿಯೊಬ್ಬರಿಗೂ ಅವರದೇ ಹಕ್ಕುಗಳಿವೆ. ಅವುಗಳ ರಕ್ಷಣೆಗೆ ಕಾನೂನಿನಲ್ಲಿ ಅವಕಾಶವಿದೆ. ಆದರೆ ಮಾನವ ಹಕ್ಕುಗಳ ಉಲ್ಲಂಘನೆಗಳಲ್ಲಿ ಪೊಲೀಸ್ ಇಲಾಖೆ ಬಗ್ಗೆ ಹೆಚ್ಚು ದೂರುಗಳು ಬರುತ್ತವೆ. ಯಾವುದೇ ವ್ಯಕ್ತಿಯನ್ನು ಸಂಶಯ ಅಥವಾ ಸಾಕ್ಷಿ ಆಧಾರದ ಮೇಲೆ ಬಂಧಿಸು ವಾಗ ಆತನಿಗೆ ಯಾವ ಕಾರಣಕ್ಕೆ ಬಂಧಿಸು ತ್ತೇವೆ ಎನ್ನುವ ಮಾಹಿತಿ ಅವನಿಗೆ, ಆತನ ಕುಟುಂಬದ ಸದಸ್ಯರಿಗೆ ನೀಡಬೇಕು, ಆತ ನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸ ಬೇಕು. ಜತೆಗೆ ಆತನ ಮೇಲೆ ಯಾವುದೇ ರೀತಿಯ ದೌರ್ಜನ್ಯ ನಡೆಸಬಾರದು. ಮಾಹಿತಿ ನೀಡದೇ ಹೋದಲ್ಲಿ ಅದು ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಬಂಧಿಸಿದ ಬಳಿಕ 24 ಗಂಟೆಯೊಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸಬೇಕು. ಮಾನವ ಹಕ್ಕು ಗಳ ಉಲ್ಲಂಘನೆಯಾದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ರಾಜ್ಯ ಹಾಗೂ ಜಿಲ್ಲಾ ಆಯೋಗಗಳಿಗೆ ದೂರು ನೀಡಬೇಕು ನಂತರ ನ್ಯಾಯಾಲಯದಲ್ಲಿ ವಿಚಾರಣೆಗೆ ತೆಗೆದುಕೊಳ್ಳಲಾಗುತ್ತದೆ ಎಂದರು.

ತಾಲೂಕು ಘಟಕದ ಅಧ್ಯಕ್ಷ ಕೆಬ್ಬೆಹುಂಡಿ ಶಿವಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ದರು. ವಾಟಾಳು ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ, ನಿವೃತ್ತ ಅಧಿಕಾರಿ ಹೆಳವರ ಹುಂಡಿ ಸಿದ್ದಪ್ಪ, ಎಫ್‍ಎಫ್‍ಐಸಿಸಿಆರ್ ಸಂಸ್ಥೆಯ ಡಾ. ಮೋಹನ್‍ರಾವ್ ನಲವಾಡೆ ಅವರು ಮಾತನಾಡಿದರು. ಇದೇ ವೇಳೆ ಮಳವಳ್ಳಿ ತಾಲೂಕಿನ ಪೂರಿಗಾಲಿಯ ನಿವಾಸಿ ಹಾಲಿ ಸಿಆರ್‍ಪಿಎಫ್ ಯೋಧ ಶಾಂತರಾಜು ಅವ ರನ್ನು ಸನ್ಮಾನಿಸಲಾಯಿತು. ರಾಜ್ಯ ಕಾರ್ಯ ದರ್ಶಿ ಹೆಚ್.ಕೆ.ಜಗನ್ನಾಥ್‍ಗೌಡ, ಪ್ರಾಂಶು ಪಾಲ ವಿವಿ ಜಗದೀಶ್, ವಕೀಲರ ಸಂಘದ ಅಧ್ಯಕ್ಷ ರವಿಶಂಕರ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಶಂಕರಮೂರ್ತಿ, ಮೂಗೂರು ಕುಮಾರಸ್ವಾಮಿ, ಪ್ರಭುಸ್ವಾಮಿ, ಹೆಳವರ ಹುಂಡಿ ಮೂರ್ತಿ, ಸಾಲೂರು ಸ್ವಾಮಿ, ಕನ್ನಡ ಪುಟ್ಟಸ್ವಾಮಿ ಮಣಿಕಂಠ ರಾಜೇಗೌಡ, ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Translate »